7

ನೌಕಾಪಡೆ ಮುಖ್ಯಸ್ಥರ ಹೆಸರು ಶೀಘ್ರ ಪ್ರಕಟ: ಆಂಟನಿ

Published:
Updated:

ತಿರುವನಂತಪುರ (ಐಎಎನ್‌ಎಸ್‌): ನೌಕಾಪಡೆಯ ಮುಖ್ಯ­ಸ್ಥರ ಹೆಸರನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ರಕ್ಷಣಾ ಸಚಿವ ಎ.ಕೆ. ಆಂಟನಿ ಅವರು ಶನಿವಾರ ಇಲ್ಲಿ ತಿಳಿಸಿದರು.‘ಯಾರಾದರೂ ರಾಜೀನಾಮೆ ನೀಡಿದರೆ ಅದು ಅವರ ವೈಯಕ್ತಿಕ ನಿರ್ಧಾರ. ಸೇನೆಯ 3 ಪಡೆಗಳ ಮುಖ್ಯ­ಸ್ಥರ ನೇಮಕ ಪ್ರಕ್ರಿಯೆ ಸಹಜವಾಗಿಯೇ ನಡೆ­ಯುತ್ತದೆ. ಈಗ ಈ ಪ್ರಕ್ರಿಯೆ ಚಾಲನೆಯಲ್ಲಿದೆ. ಶೀಘ್ರ­ದಲ್ಲೇ ಹೊಸ ಮುಖ್ಯಸ್ಥರ ಹೆಸರನ್ನು ಪ್ರಕಟಿಸಲಾಗು­ವುದು’ ಎಂದು ಆಂಟನಿ ತಿಳಿ­ಸಿದರು.ನೌಕೆ­ಪಡೆ­ಯಲ್ಲಿ ಸರಣಿ­ಯೋ­ಪಾದಿ­­ಯಲ್ಲಿ ನಡೆದ ಅವಘಡದ ಕಾರಣ ನೌಕಾ­ಪಡೆಯ ಮುಖ್ಯಸ್ಥ ಆಡ್ಮಿರಲ್‌ ಡಿ.ಕೆ. ಜೋಷಿ ರಾಜೀ­ನಾಮೆ ನೀಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry