7
ವಿಜ್ಞಾನ ಲೋಕದಿಂದ

ಹೊಸ ಸಸ್ಯ ಪ್ರಭೇದಗಳು ಪತ್ತೆ...

Published:
Updated:

ಹೊಸ ಅಧ್ಯಯನವೊಂದು ಈ ಹಿಂದೆ ದಾಖಲಾಗದ ಎರಡು ಸಸ್ಯ ವರ್ಗಗಳನ್ನು ಕರ್ನಾಟಕ ರಾಜ್ಯದಲ್ಲಿ ಕಂಡುಹಿಡಿದಿದೆ. ಸಂಶೋಧಕರ ತಂಡ ‘ಓರೋಫಿಯಾ ಮಲಬಾರಿಕ’ ಮತ್ತು ‘ಓರೋಫಿಯಾ ಶಿವರಂಜನಿ’ ಎಂಬ ಪ್ರಭೇದಗಳ ಇರುವಿಕೆ ಮತ್ತು ವಿಸ್ತೃತ ಹಂಚುವಿಕೆ ಯನ್ನು ಕೊಡಗು ಜಿಲ್ಲೆಯ ಮಾಕುಟ್ಟ ಘಟ್ಟದಲ್ಲಿ ಕಂಡು ಹಿಡಿದಿದೆ. ಇದನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರ, ಲೀಡ್ ಬೊಟಾನಿಕಲ್ ಗಾರ್ಡನ್ ಹಾಗೂ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ​ ಸಂಶೋಧಕರ ತಂಡ ಪತ್ತೆ ಮಾಡಿದೆ.ಬಹಳ ವರ್ಷಗಳಿಂದ ವಿಜ್ಞಾನಿಗಳು ಈ ಎರಡು ಸಸ್ಯ ವರ್ಗಗಳ ಇರುವಿಕೆಯನ್ನು ಕೇರಳದಲ್ಲಿ ಮಾತ್ರ ನೋಡಿದ್ದಾರೆ. ಮೊದಲ ಬಾರಿಗೆ ರಾಜ್ಯದಲ್ಲಿ ಕಂಡುಬಂದಿದೆ. ಈ ಸಸ್ಯ ವರ್ಗಗಳು ಹೆಚ್ಚು ಪರಿಚಿತವಿರದ ಮರ ಸೇಬುಗಳ ಕುಟುಂಬಕ್ಕೆ ಸೇರಿದೆ. ಈ ಆವಿಷ್ಕಾರ ರಾಜ್ಯದ ಸಸ್ಯ ಸಂಪತ್ತಿಗೆ ಹೊಸ ಸೇರ್ಪಡೆಯಾಗಿದೆ.ಓರೋಫಿಯಾ ಕುಲದ 50 ವರ್ಗಗಳು ಜಗತ್ತಿನೆಲ್ಲೆಡೆ ಕಾಣಸಿಗುತ್ತವೆ. ಭಾರತದಲ್ಲಿ 12ವರ್ಗಗಳು ಸಿಗುತ್ತವೆ. 12ರಲ್ಲಿ ಐದು ವರ್ಗಗಳು ಪಶ್ಚಿಮ ಘಟ್ಟಗಳಲ್ಲಿ ಸ್ಥಳೀಯವಾದದ್ದು. ಓರೋಫಿಯಾ ಮಲಬಾರಿಕ ಮತ್ತು ಓರೋಫಿಯಾ ಶಿವರಂಜನಿ ಪಶ್ಚಿಮ ಘಟ್ಟಗಳ ಕೇರಳ ಭಾಗಗಳಲ್ಲಿ ಸ್ಥಳೀಯವಾದ ಪೊದೆಗಳು.ಓರೋಫಿಯಾ ಮಲ ಬಾರಿಕ ತ್ರಿಶೂರ್ ಜಿಲ್ಲೆಯ ಪೀಚಿ ಎಂಬ ಊರಿನ ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಮೊದಲ ಸಲ ವರದಿ ಯಾಗಿತ್ತು. ಡಿಸೆಂಬರ್ ಮತ್ತು ಸೆಪ್ಟೆಂಬರ್ ನಡುವೆ ಅದು ಹೂವು ಬಿಡುವ ಕಾಲ. ಓರೋಫಿಯಾ ಶಿವರಂಜನಿ ವೈನಾಡು ಜಿಲ್ಲೆಯಲ್ಲಿ ಕಂಡುಬರುತ್ತದೆ. ಇದು ಡಿಸೆಂಬರ್ ಮತ್ತು ಫೆಬ್ರವರಿ ನಡುವೆ ಹೂವು ಬಿಡುತ್ತದೆ. ಸಂಶೋಧಕರಿಗೆ ಈ ವರ್ಗಗಳ ಸಸ್ಯಗಳು ಕಂಡುಬಂದದ್ದು ಅವರ ಇತ್ತೀಚೆಗಿನ ಮಾಕುಟ್ಟ ಮತ್ತು ಅದರ ಹತ್ತಿರದ ಕೊಡಗಿನ ಪ್ರದೇಶಗಳಿಗೆ ಪಯಣ ಹೋಗಿದ್ದಾಗ.ಈ ಎರಡು ಸಸ್ಯ ವರ್ಗಗಳು ಮಾಕುಟ್ಟ ಘಟ್ಟದ ನಿತ್ಯ ಹರಿದ್ವರ್ಣ ಕಾಡಿನಲ್ಲಿ ಒಂದಕ್ಕೊಂದು ಸಮೀಪದಲ್ಲೇ ಬೆಳೆಯುತ್ತಿದ್ದವು. ಸಂಶೋಧಕರು ಈ ಸಸ್ಯವನ್ನು ಅವು ಹೂ ಬಿಡುತ್ತಿರುವ ಹಂತದಲ್ಲಿ 2014ರ ಜನವರಿ ಮತ್ತು ಫೆಬ್ರವರಿಯಲ್ಲಿ ಮೊದಲು ನೋಡಿದ್ದರು. ಈ ಸಸ್ಯಗಳು ಮಾರ್ಚ್‌ ಮತ್ತು ಏಪ್ರಿಲ್ ತಿಂಗಳಿನಲ್ಲಿ ಹಣ್ಣು ಬಿಡುತ್ತಿದ್ದವು. ಈ ತಂಡ ಸಂಗ್ರಹಿಸಿದ ಸಸ್ಯಗಳನ್ನು ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರದಲ್ಲಿ ಇರುವ ‘ಹರ್ಬೇರಿಯಂ ಜೆಸಿಬಿ’ಯಲ್ಲಿ ನಮೂನೆಯಾಗಿ ಇಡಲಾಗಿದೆ.ಸಂಶೋಧಕರಿಗೆ ಅವರು ಹೊಸದೊಂದನ್ನು ಅವರು ಕಂಡು ಹಿಡಿದಿದ್ದೇವೆ ಎಂದೆನಿಸುತ್ತಿದ್ದಂತೆ ಸಸ್ಯ ಸಂಗ್ರಹಾಲಯದಲ್ಲಿ ಅದರ ಸಾಕ್ಷ್ಯಗಳನ್ನು ಹುಡುಕಿದರು. ಪ್ರಾದೇಶಿಕ ಹರ್ಬೇರಿಯಾದಿಂದ ಅವರು ಬೇರೆ ಯಾವ ಪ್ರದೇಶದಲ್ಲಿ ಇದರ ದಾಖಲೆ ಇದೆ ಎಂಬುದನ್ನು ಹುಡುಕುತ್ತಿರುವಾಗ, ಕೇರಳದ ಅರಣ್ಯ ಸಂಶೋಧನಾ ಸಂಸ್ಥೆ ಯಲ್ಲಿ ಸಿಕ್ಕಿತು. ಪುದುಚೇರಿಯ ಲ್ಲಿರುವ ಫ್ರಾನ್ಸ್‌ ಸಂಸ್ಥೆಯ ಹರ್ಬೇರಿಯಾನಲ್ಲಾಗಲಿ ಅಥವಾ ಯಾವುದೇ ಸ್ಥಳೀಯ ಹರ್ಬೇರಿಯಾದಲ್ಲಾಗಲಿ ಈ ಸಸ್ಯಗಳ ಸಂಗ್ರಹ ಸಿಗಲಿಲ್ಲ. ಭಾರತೀಯ ವಿಜ್ಞಾನ ಸಂಸ್ಥೆಯ ತಂಡವು ಬರಹಗಳು ಮತ್ತು ಡಿಜಿಟಲ್ ಹರ್ಬೇರಿಯಾ ಮಾಹಿತಿ ಯಿಂದ ಈ ಸಸ್ಯಗಳ ಗುರುತನ್ನು ಖಚಿತಪಡಿಸಿತು.‘ನಮ್ಮ ವರದಿಯಲ್ಲಿ ದಾಖಲಾಗಿರುವ ಓರ್ಫಿಯಾದ ಎರಡು ವರ್ಗಗಳು, ಹೆಚ್ಚು ಪರಿಚಿತವಲ್ಲದ ಸ್ಥಳೀಯ ಸಸ್ಯವಾಗಿದ್ದು, ಕೇರಳದ ತ್ರಿಶೂರ್ ಜಿಲ್ಲೆಯಿಂದ ಕರ್ನಾಟಕದ ಕೊಡಗಿನವರೆಗೆ ನಿತ್ಯ ಹರಿದ್ವರ್ಣ ಕಾಡಿನ ಪಶ್ಚಿಮ ಘಟ್ಟಗಳ ಕೆಲವು ಪ್ರದೇಶಗಳಲ್ಲಿ ಮಾತ್ರ ಕಂಡುಬರುತ್ತಿದೆ. ಭವಿಷ್ಯದ ಸಸ್ಯ ಸಂಖ್ಯೆಗಳ ಅಧ್ಯಯನ ಹಾಗೂ ವಿಸ್ತೃತ ಹಂಚುವಿಕೆಯ ವರದಿಗಳು ಮರು-ಮೌಲ್ಯಮಾಪನ ನಡೆಸಿ ಐಯುಸಿಎನ್ ಸಂರಕ್ಷಣಾ ದರ್ಜೆಯನ್ನು ನಿಗದಿ ಮಾಡಬೇಕು’ ಎಂದು ಸಂಶೋಧಕರು ವರದಿಯಲ್ಲಿ ಬರೆದಿದ್ದಾರೆ.‘ನಮ್ಮ ಅಧ್ಯಯನ ಹಾಗು ಹಳೆಯ ವರದಿಗಳ ಅಂಕಿ ಅಂಶಗಳ ಮಾಹಿತಿಯ ಸಂಗ್ರಹದ ಪ್ರಕಾರ, ‘ಓರೋಫಿಯಾ ಶಿವರಂಜನಿ’ ಅಳಿವಿನಂಚಿನಲ್ಲಿ ಇರುವುದೆಂದು (ಐಯುಸಿಎನ್ ಕ್ರೈಟಿರಿಯಾ ಬಿ2) ಸೂಚಿಸಿದ್ದೇವೆ. ಓರೋಫಿಯಾ ಮಲ ಬಾರಿಕವನ್ನು ಇನ್ನೂ ಸರಿಯಾಗಿ ಮೌಲ್ಯ ಮಾಪನ ಮಾಡಬೇಕು. ಪ್ರಸ್ತುತವಾಗಿ ಅದನ್ನು ‘ಅಂಕಿ ಅಂಶಗಳ ಮಾಹಿತಿ ಅಪೂರ್ಣ’ ಎಂಬ ವರ್ಗದಲ್ಲಿ ಪರಿಗಣಿ ಸುವುದು ಸೂಕ್ತ’ ಎಂದು ಈ ವರ್ಗವನ್ನು ಮೊದಲು ನೋಡಿದ ನವೆಂದು ಪೇಜ್ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry