7

ಡೀಸೆಲ್ ಕಾರುಗಳ ಮಾರಾಟ ನಿರ್ಬಂಧ ಸಡಿಲಿಕೆಗೆ ಮನವಿ

Published:
Updated:

ನವದೆಹಲಿ (ಪಿಟಿಐ): ನವದೆಹಲಿಯಲ್ಲಿ ಡೀಸೆಲ್ ಕಾರು ನೋಂದಣಿ ನಡೆಸದಂತೆ ನೀಡಿರುವ ಆದೇಶದಲ್ಲಿ ತುಸು ಮಾರ್ಪಾಡು ಮಾಡುವಂತೆ ಕೋರಿ ಕಾರು ಮಾರಾಟಗಾರರು ಸಲ್ಲಿಸಿರುವ ಅರ್ಜಿಯನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ವಿಚಾರಣೆಗೆ ಒಳಪಡಿಸಲು ಒಪ್ಪಿಗೆ ಸೂಚಿಸಿದೆ.‘ಈ ಅರ್ಜಿಯನ್ನು ಮಂಗಳವಾರ ಪರಿಶೀಲಿಸೋಣ’ ಎಂದು ಎನ್‌ಜಿಟಿ ಮುಖ್ಯಸ್ಥ ನ್ಯಾಯಮೂರ್ತಿ ಸ್ವತೇಂದರ್ ಕುಮಾರ್ ಅವರ ನೇತೃತ್ವದ ಪೀಠ ಸೋಮವಾರ ತಿಳಿಸಿದೆ. ಇದಕ್ಕೂ ಮುನ್ನ, ‘2015ರಲ್ಲಿ ತಯಾ ರಾಗಿರುವ ಕಾರುಗಳನ್ನು 2016ರಲ್ಲಿ ಕೊಳ್ಳಲು ಗ್ರಾಹಕರು ಹಿಂದೇಟು ಹಾಕುತ್ತಾರೆ. ಹೀಗಾಗಿ ಈಗಾಗಲೆ ತಯಾರಾಗಿರುವ ಡೀಸೆಲ್ ಕಾರುಗಳನ್ನು ಮಾರಾಟ ಮಾಡಲು ಅನುಮತಿ ನೀಡಿ, ಆದೇಶವ ನ್ನು ತುಸು ಬದಲಿಸಬೇಕು’ ಎಂದು ಕಾರು ಮಾರಾಟಗಾರರ ಪರ ವಕೀಲರು ಪೀಠಕ್ಕೆ ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry