7

₹5 ಸಾವಿರ ಕೋಟಿ ಅನುದಾನಕ್ಕೆ ಮನವಿ

Published:
Updated:

ಚೆನ್ನೈ (ಐಎಎನ್‌ಎಸ್‌): ಚೆನ್ನೈ ಮಳೆ ಸಂತ್ರಸ್ತರ ಪುನರ್ವಸತಿಗಾಗಿ ಹೆಚ್ಚುವರಿ ವಿಶೇಷ ಅನುದಾನ ಮಂಜೂರು ಮಾಡಬೇಕೆಂದು ಕೋರಿ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.ಹಣಕಾಸು ನೆರವು ನೀಡಲು  ವಸತಿ, ನಗರ ಬಡತನ ನಿರ್ಮೂಲನೆ ಮತ್ತು ಗ್ರಾಮೀಣಾಭಿವೃದ್ಧಿ ಸಚಿವಾಲಯಗಳಿಗೆ  ಸೂಚನೆ ನೀಡಬೇಕೆಂದು ಮನವಿ ಮಾಡಿದ್ದಾರೆ. ಮಳೆಯಿಂದಾಗಿ ಸಂತ್ರಸ್ತರಾದವರಿಗಾಗಿ ನಿರ್ಮಿಸುತ್ತಿರುವ 50 ಸಾವಿರ ಮನೆಗಳಿಗೆ ₹5 ಸಾವಿರ ಕೋಟಿ ಮಂಜೂರು ಮಾಡಬೇಕು ಹಾಗೂ ಪ್ರತಿ ಮನೆಗೆ ₹ 1.5 ಲಕ್ಷದಂತೆ  50 ಸಾವಿರ ಮನೆಗಳಿಗಾಗಿ ₹ 750 ಕೋಟಿಯನ್ನು ಕೇಂದ್ರ ವಿಶೇಷವಾಗಿ ಹಂಚಿಕೆ ಮಾಡ ಬೇಕೆಂದು ಜಯಲಿಲಿತಾ ಅವರು ಪ್ರಧಾನಿ ಅವರಿಗೆ ಮನವಿ ಮಾಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry