ಜನಸಾಮಾನ್ಯರೊಂದಿಗೆ ಗಣೇಶ್ ಆಟ!

6

ಜನಸಾಮಾನ್ಯರೊಂದಿಗೆ ಗಣೇಶ್ ಆಟ!

Published:
Updated:
ಜನಸಾಮಾನ್ಯರೊಂದಿಗೆ ಗಣೇಶ್ ಆಟ!

ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಷೋ ‘ಸೂಪರ್ ಮಿನಿಟ್’ ಮತ್ತೆ ಆರಂಭವಾಗುತ್ತಿದೆ. ಮೊದಲ ಋತುವಿನಲ್ಲಿ ಸೆಲೆಬ್ರಿಟಿಗಳಷ್ಟೇ ಭಾಗವಹಿಸಿದ್ದರು. ಎರಡನೇ ಸೀಸನ್‌ನಲ್ಲಿ ಜನಸಾಮಾನ್ಯರೂ ಭಾಗವಹಿಸುವ ಅವಕಾಶ ನೀಡಿರುವುದು ವಿಶೇಷ.ಎರಡನೇ ಋತುವಿನಲ್ಲಿ ವಿವಿಧ ಕ್ಷೇತ್ರಗಳಿಂದ ಆಯ್ದ ವ್ಯಕ್ತಿಗಳು ಸ್ಪರ್ಧಿಸಲಿದ್ದಾರೆ. ನಟ ಗಣೇಶ್ ನಡೆಸಿಕೊಡುವ ಕಾರ್ಯಕ್ರಮದಲ್ಲಿ ಈ ಬಾರಿ ಹೆಚ್ಚಿನ ರೋಚಕ ಆಟಗಳನ್ನು ಆಡಲು ಮತ್ತು ನೋಡಲು ಸಿಗುತ್ತವೆ. ಕಳೆದ ಬಾರಿ ಇದ್ದ 108 ಆಟಗಳು ಈ ಬಾರಿ 165ಕ್ಕೆ ಏರಿವೆ. ‘ಇದೊಂಥರಾ ಆಡ್ತಾ ಆಡ್ತಾ ಮಾಡೋ ಕೆಲಸ. ಕಳೆದ ಬಾರಿ ಸೆಲೆಬ್ರಿಟಿಗಳೊಂದಿಗೆ ಆಡಿದ್ದರೆ, ಈ ಬಾರಿ ಸಾಮಾನ್ಯ ಜನರೊಂದಿಗೆ. ಕೆಲವೇ ನಿಮಿಷಗಳ ಆಟದಲ್ಲಿ ಹತ್ತು ಲಕ್ಷ ರೂಪಾಯಿ ಗೆಲ್ಲುವುದೆಂದರೆ ಯಾರಿಗಾದರೂ ದೊಡ್ಡ ಸಂಗತಿಯೇ. ಅದರಲ್ಲೂ ಜನಸಾಮಾನ್ಯರಿಗಂತೂ ವಿಶೇಷವೇ’ ಎಂದರು ಗಣೇಶ್.‘ಕಾರ್ಯಕ್ರಮ ಆರಂಭಿಸಿದಾಗ ಜನ ಇಷ್ಟ ಪಡುತ್ತಾರೆ ಎಂಬ ನಂಬಿಕೆ ಇತ್ತು. ಕಾರ್ಯಕ್ರಮದಲ್ಲಿ ಬರುತ್ತಿದ್ದ ಆಟಗಳನ್ನು ಶಾಲೆ–ಕಾಲೇಜುಗಳಲ್ಲೂ ಆಡುತ್ತಿದ್ದಾರೆ. ಈ ಆಟವನ್ನು ಸಾಮಾನ್ಯರಿಗೂ ಆಡಿಸಬೇಕು ಎಂಬ ಕೋರಿಕೆ ಇತ್ತು. ಅದಕ್ಕೇ ಈ ಬಾರಿ ಪಬ್ಲಿಕ್ ಸೀಸನ್ ಆರಂಭಿಸಿದ್ದೇವೆ’ ಎಂದರು ವಾಹಿನಿಯ ಕಾರ್ಯಕ್ರಮ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್.‘ಸೂಪರ್ ಮಿನಿಟ್ ಪಬ್ಲಿಕ್ ಸೀಸನ್’ ಫೆಬ್ರುವರಿ 13 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 9 ರಿಂದ 10.30ರ ವರೆಗೆ ಪ್ರಸಾರವಾಗಲಿದೆ. ಅಂತಿಮವಾಗಿ ಗೆಲ್ಲುವವರಿಗೆ ₹ 10 ಲಕ್ಷ ಬಹುಮಾನ ಕಾದಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry