7

ಕೊಳೆಗೇರಿ ಪ್ರೇಮಕತೆ ‘ಪ್ರೇಮಾಸುರ’

Published:
Updated:
ಕೊಳೆಗೇರಿ ಪ್ರೇಮಕತೆ ‘ಪ್ರೇಮಾಸುರ’

ಇದುವರೆಗೆ ಸಹಾಯಕರಾಗಿ ದುಡಿದ ನಾಗೇಶ್ ಕ್ಯಾಲನೂರು ಮೊದಲ ಬಾರಿ ಸ್ವತಂತ್ರವಾಗಿ ನಿರ್ದೇಶಿಸುತ್ತಿರುವ ಸಿನಿಮಾ ‘ಪ್ರೇಮಾಸುರ’. ಪೌರ ಕಾರ್ಮಿಕ ಹುಡುಗ, ಮನೆಗೆಲಸದ ಹುಡುಗಿ ನಡುವೆ ಹುಟ್ಟುವ ಪ್ರೇಮಕಥೆಯೇ ‘ಪ್ರೇಮಾಸುರ’ದ ಹೂರಣ.ನಾಯಕ ಶೀತಲ್ ರಾಜ್ ತೆರೆಗೆ ಹೊಸ ಮುಖ. ಮೃದುಲಾ ನಾಯಕಿ. ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದ್ದು ಒಂದು ಹಾಡು ಮಾತ್ರ ಬಾಕಿ ಇದೆ. ಹಾಡಿನ ಚಿತ್ರೀಕರಣಕ್ಕಾಗಿ ಹೈದರಾಬಾದ್‌ನಲ್ಲಿ ವಿಶೇಷ ಸೆಟ್ ನಿರ್ಮಿಸಲಾಗಿದೆ. ಪ್ರೇಮ್ ರಕ್ಷಿತ್ ನೃತ್ಯ ನಿರ್ದೇಶನದಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಲಿದೆ.ಹರಿಹರಪುರ ನಾಗರಾಜ್, ಕುಂತು ನಾಗನೂರು ಮತ್ತು ರಘು ಕ್ಯಾಲನೂರು ಸೇರಿ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಶ್ರೀ ಹರ್ಷ ಸಂಗೀತ, ರವಿ ಕಿಶೋರ್ ಕ್ಯಾಮೆರಾ, ಶಿವಪ್ರಸಾದ್ ಯಾದವ್ ಸಂಕಲನ, ನಾಗಮೂರ್ತಿ ಸಂಭಾಷಣೆ ಮತ್ತು ಗೀತ ಸಾಹಿತ್ಯ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry