3

‘ಹಣ ಸಿಕ್ರೆ ದೇವರ ಹುಂಡಿಗೆ ಹಾಕ್ತೇನೆ’

Published:
Updated:
‘ಹಣ ಸಿಕ್ರೆ ದೇವರ ಹುಂಡಿಗೆ ಹಾಕ್ತೇನೆ’

ಹಾಸನ ಜಿಲ್ಲೆ ಬೇಲೂರಿನವರಾದ ರೂಪದರ್ಶಿ ಸ್ವಾತಿ ಕೊಂಡೆ ತುಮಕೂರಿನಲ್ಲಿ ಡಿಪ್ಲೊಮಾ ಎಂಜಿನಿಯರಿಂಗ್‌ ಮಾಡುತ್ತಿದ್ದಾರೆ. ಬಿಡುಗಡೆಗೆ ಸಿದ್ಧವಾಗಿರುವ ‘ಬ್ಯೂಟಿಫುಲ್‌ ಮನಸ್ಸುಗಳು’ ಚಿತ್ರದ ನಟಿ. ಮೊದಲ ಸಿನಿಮಾ ಯಶಸ್ಸಿಗಾಗಿ ಕಾಯುತ್ತಿರುವ ಸ್ವಾತಿ, ತಮ್ಮ ಸಿನಿಮಾಪ್ರೀತಿಯನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡಿದ್ದಾರೆ.* ವಿದ್ಯಾಭ್ಯಾಸದ ಜೊತೆಗೆ ಮಾಡೆಲಿಂಗ್‌ ಆಯ್ಕೆ ಮಾಡಿಕೊಂಡಿದ್ದು ಏಕೆ?

ಪ್ಯಾಷನ್‌ಗಾಗಿ ಮಾಡೆಲಿಂಗ್‌ ಕ್ಷೇತ್ರಕ್ಕೆ ಬಂದೆ. ಮಾಡೆಲಿಂಗ್‌ ಜೊತೆಯಲ್ಲಿ ಸಿನಿಮಾರಂಗಕ್ಕೆ ಬರಬೇಕೆಂಬ ಕನಸಿತ್ತು. ಕಳೆದ ವರ್ಷ ಬೆಂಗಳೂರಿನ ಚರ್ಚ್‌ ಸ್ಟ್ರೀಟ್‌ನಲ್ಲಿರುವ ಸಿಲ್ವರ್‌ ಸ್ಟಾರ್ ಪ್ರೊಡಕ್ಷನ್‌ನಲ್ಲಿ ಮೂರು ತಿಂಗಳು ಮಾಡೆಲಿಂಗ್‌ ತರಬೇತಿ ಪಡೆದೆ. ಮಿಸ್‌ ಕರ್ನಾಟಕ ಎಲಿಗ್ಯಾಂಟ್‌ ಸ್ಪರ್ಧೆಯಲ್ಲಿ ರನ್ನರ್‌ಅಪ್‌ ಆದೆ. ತುಮಕೂರಿನಲ್ಲಿ ನಡೆದ ‘ಮಿಸ್‌ ತುಮಕೂರು’ ಸ್ಪರ್ಧೆಯಲ್ಲಿ ‘ಮಿಸ್‌ ಸಿದ್ಧಗಂಗಾ’ ಪ್ರಶಸ್ತಿ ಬಂತು. ರಾಜ್ಯ ಮಟ್ಟದ ಡಾನ್ಸರ್‌ ನಾನು. ಪಾಶ್ಚಾತ್ಯ ನೃತ್ಯ ಕಲಿತಿದ್ದೇನೆ.* ‘ಬ್ಯೂಟಿಫುಲ್‌ ಮನಸ್ಸುಗಳು’ ಚಿತ್ರದಲ್ಲಿ ನಿಮ್ಮ ಪಾತ್ರ?

ಜಯತೀರ್ಥ ಸಿನಿಮಾ ನಿರ್ದೇಶನ ಮಾಡಿದ್ದಾರೆ, ನಾನು ಹಾಗೂ ಶೃತಿ ಹರಿಹರನ್‌ ನಾಯಕಿಯರ ಪಾತ್ರದಲ್ಲಿದ್ದೇವೆ. ನಾನು ಸಬ್‌ ಇನ್‌ಸ್ಪೆಕ್ಟರ್‌ ಮಗಳಾಗಿರುತ್ತೇನೆ, ಒಟ್ಟಾರೆ ಘಾಟಿ ಹುಡುಗಿಯಾಗಿರುತ್ತೇನೆ.* ನಿಮ್ಮ ಕನಸಿನ ಹುಡುಗ ಹೇಗಿರಬೇಕು?

ಅದರ ಬಗ್ಗೆ ಯೋಚನೆ ಮಾಡೋಕೆ ಹೋಗೋದಿಲ್ಲ, ಮೊದಲು ನಾನು ಏನಾದರೂ ಸಾಧನೆ ಮಾಡಬೇಕು, ಜನ ಗುರ್ತಿಸುವಂತೆ ಆಗಬೇಕು. ಇದೀಗ ಸಿನಿಮಾಗೆ ಪದಾರ್ಪಣೆ ಮಾಡಿದ್ದೇನೆ. ಹುಡುಗನನ್ನು ಹುಡುಕುವ ಕೆಲಸ ನಮ್ಮ ತಂದೆ, ತಾಯಿಗೆ ಬಿಟ್ಟ ವಿಚಾರ.* ನಿಮಗೆ ಇಷ್ಟವಾಗುವ ಬಣ್ಣ?

ಕಪ್ಪುಬಣ್ಣ ಇಷ್ಟವಾಗುತ್ತದೆ, ಜೀವನದಲ್ಲಿ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ಕಪ್ಪುಚುಕ್ಕೆ ಇರಬಾರದು ಅಂತಾರಲ್ಲ? ಹಾಗೆ, ಅದು ನನ್ನ ಜೀವನದಲ್ಲಿ ಬರೋದಿಕ್ಕೆ ಬಿಡೋದಿಲ್ಲ. ಕಪ್ಪುಬಣ್ಣದ ಬಗ್ಗೆ ಭಯ ಇದೆ. ಹಾಗಾಗಿ ಆ ಬಣ್ಣವೇ ಹೆಚ್ಚು ಇಷ್ಟ.* ರಸ್ತೆಯಲ್ಲಿ ಹೋಗುವಾಗ ಒಂದು ಲಕ್ಷ ರೂಪಾಯಿ ಸಿಕ್ಕರೆ?

ಸಿಕ್ಕ ತಕ್ಷಣ ಏನು ಮಾಡಬೇಕು ಅಂತಾ ಗೊತ್ತಾಗೋದಿಲ್ಲ. ಆದರೆ ನಾನು ಮಾತ್ರ ಆ ಎಲ್ಲ ಹಣವನ್ನು ದೇವರ ಹುಂಡಿಗೆ ಹಾಕುತ್ತೇನೆ. ಏಕೆಂದರೆ ದೇವರು ಕೊಟ್ಟಿದ್ದು, ಅವನಿಗೆ ಸೇರಲಿ ಅಂತಾ ನನ್ನ ಭಾವನೆ.* ನಿಮ್ಮ ತೂಕ 100 ಕೆ.ಜಿ. ದಾಟಿದರೆ?

ನನ್ನ ತೂಕವೀಗ 50 ಕೆ.ಜಿ. ಇದೆ, 100 ದಾಟಿದರೆ ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸುತ್ತೇನೆ. ಊಟದಲ್ಲೇ ನಿಯಂತ್ರಿಸುತ್ತೇನೆ.* ಇನ್ಮುಂದೆ ಮಾರುಕಟ್ಟೆಯಲ್ಲಿ ಮೇಕಪ್‌ ಉತ್ಪನ್ನಗಳು ಬ್ಯಾನ್‌ ಆದ್ರೆ?

ಮೇಕಪ್‌ ಮಾಡಿಕೊಳ್ಳುವುದಿಲ್ಲ. ಬ್ಯೂಟಿಪಾರ್ಲರ್‌ಗೆ ಹೋಗುವುದಿಲ್ಲ. ಹೋದರೂ ಐಬ್ರೋ ಮಾತ್ರ ಮಾಡಿಸುತ್ತೇನೆ. ಮನೆಯಲ್ಲಿ ಮಾಡಿಕೊಳ್ಳುವ ಮೇಕಪ್‌ ಅಷ್ಟೇ ಸಾಕು. ಒಟ್ಟಾರೆ ನನಗೆ ಮೇಕಪ್‌ ಬೇಕಿಲ್ಲ.* ಬಿಡುವಿನ ವೇಳೆ?

ಚೆನ್ನಾಗಿ ಊಟ ಮಾಡುತ್ತೇನೆ, ನಿದ್ರೆ ಮಾಡುತ್ತೇನೆ. ಮಕ್ಕಳೊಂದಿಗೆ ಕಾಲ ಕಳೆಯುತ್ತೇನೆ.* ನಿಮ್ಮ ಮುಂದಿನ ಯೋಜನೆ?

ಸಿನಿಮಾ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಬೇಕು ಅಂದುಕೊಂಡಿದ್ದೇನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry