7
ಸಿನಿ ಸಂಕ್ಷಿಪ್ತ

‘ಜೀ ವಾಹಿನಿ’ಗೆ ದಶಕದ ಸಂಭ್ರಮ

Published:
Updated:

ವಿಭಿನ್ನ ಕಾರ್ಯಕ್ರಮಗಳ ಮೂಲಕ ವೀಕ್ಷಕ ಮನ ಗೆದ್ದಿರುವ  ಜೀ ಕನ್ನಡ ಮನರಂಜನಾ ವಾಹಿನಿಗೀಗ ದಶಕದ ಸಂಭ್ರಮ. 2006ರಿಂದ 2016ರವರೆಗಿನ ಕಿರುತೆರೆಯ ಹತ್ತು ವರ್ಷದ ಪಯಣದಲ್ಲಿ ಹಲವು ಏಳು–ಬೀಳುಗಳನ್ನು ಕಂಡಿರುವ ವಾಹಿನಿ, ತನ್ನ ದಶಕದ ಯಶಸ್ಸಿನ ಹಾದಿಯನ್ನು ಮೆಲುಕು ಹಾಕಲು ವರ್ಣರಂಜಿತ ಕಾರ್ಯಕ್ರಮವೊಂದನ್ನು ಆಯೋಜಿಸಿದೆ.ಆ ಮೂಲಕ ದಶಕದ ನೆನಪನ್ನು ಅವಿಸ್ಮರಣೀಯಗೊಳಿಸಲು ಮುಂದಾಗಿದೆ. ಮನರಂಜನೆ, ಸಿನಿಮಾ, ಪತ್ರಿಕೋದ್ಯಮ, ರಾಜಕೀಯ, ಸಾಹಿತ್ಯ, ಕ್ರೀಡೆ, ಸಾಮಾಜಿಕ ಕ್ಷೇತ್ರ ಸೇರಿ ವಿವಿಧ ಕ್ಷೇತ್ರಗಳ 20  ಸಾಧಕರನ್ನು ಗುರುತಿಸಿ ‘ದಶಕದ ಕನ್ನಡಿಗರು’ ಎಂದು ಸನ್ಮಾನಿಸಲು ವಾಹಿನಿ  ನಿರ್ಧರಿಸಿದೆ.ಆಗಸ್ಟ್‌ 6ರಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಈಗಾಗಲೇ ವೀಕ್ಷಕರಿಗೆ ಉಚಿತ ಪಾಸ್‌ಗಳನ್ನು ವಿತರಿಸಲಾಗುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry