ಹತ್ತನೇ ಸ್ಥಾನ ಉಳಿಸಿಕೊಂಡ ಸಿಂಧು

7

ಹತ್ತನೇ ಸ್ಥಾನ ಉಳಿಸಿಕೊಂಡ ಸಿಂಧು

Published:
Updated:
ಹತ್ತನೇ ಸ್ಥಾನ ಉಳಿಸಿಕೊಂಡ ಸಿಂಧು

ನವದೆಹಲಿ (ಪಿಟಿಐ):  ರಿಯೊ ಒಲಿಂಪಿಕ್ಸ್‌ನ ವನಿತೆಯರ ಸಿಂಗಲ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ ಪದಕ ಗೆದ್ದ ಪಿ.ವಿ. ಸಿಂಧು ವಿಶ್ವ ಬ್ಯಾಡ್ಮಿಂಟನ್ ರ್‌್ಯಾಂಕಿಂಗ್‌ನಲ್ಲಿ ಬಡ್ತಿ ಪಡೆದಿಲ್ಲ. ಈ ಮೊದಲು ಇದ್ದ ಹತ್ತನೇ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ.ಮಂಡಿನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಸೈನಾ ನೆಹ್ವಾಲ್ ಅವರು ನಾಲ್ಕು ಸ್ಥಾನಗಳ ಕುಸಿತ ಕಂಡಿದ್ದಾರೆ. ಇದರೊಂದಿಗೆ ಅವರು ಒಂಬತ್ತನೇ ಸ್ಥಾನ  ಪಡೆದುಕೊಂಡಿದ್ದಾರೆ.ಒಲಿಂಪಿಕ್ಸ್‌ನಲ್ಲಿ ಪುರುಷರ ವಿಭಾ ಗದ ಸಿಂಗಲ್ಸ್‌ನಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದ   ಕಿದಂಬಿ ಶ್ರೀಕಾಂತ್ ಅವರು 11 ರಿಂದ 10ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ.ಸಿಂಧು ಅವರು ರಿಯೊದಲ್ಲಿ ಮೂವರು ಅಗ್ರಶ್ರೇಯಾಂಕದ ಆಟ ಗಾರ್ತಿಯರಾದ ವಾಂಗ್ ಯಿಹಾನ್ (4ನೇ ಶ್ರೇಯಾಂಕ), ನೊಜೊಮಿ ಒಕು ಹರಾ (3ನೇ ಶ್ರೇಯಾಂಕ) ಮತ್ತು ತೈ ಜು ಯಿಂಗ್ (7ನೇ ಶ್ರೇಯಾಂಕ) ಅವರನ್ನು ಸೋಲಿಸಿದ್ದರು. ಆದರೆ ಸೈನಾ ನೆಹ್ವಾಲ್ ಅವರು ಕ್ವಾರ್ಟರ್‌ಫೈನಲ್ ಪ್ರವೇಶಿಸುವಲ್ಲಿ ವಿಫಲ ರಾಗಿದ್ದರು. ಭಾರತಕ್ಕೆ ಮರಳಿದ ನಂತರ ಅವರು ಮಂಡಿನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.  ಇನ್ನೂ ನಾಲ್ಕು ತಿಂಗಳುಗಳ ಕಾಲ ಅವರು ವಿಶ್ರಾಂತಿ ಪಡೆಯಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry