ಭಾನುವಾರ, ಮಾರ್ಚ್ 26, 2023
31 °C
ಕ್ರೀಡಾ ದಿನಾಚರಣೆ: ತಾಲ್ಲೂಕು ಮಟ್ಟದ ಯೋಗಾಸನ ಸ್ಪರ್ಧೆ

‘ಯೋಗದಿಂದ ನೆಮ್ಮ ದಿಯ ಜೀವನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಯೋಗದಿಂದ ನೆಮ್ಮ ದಿಯ ಜೀವನ’

ಬಜ್ಪೆ:  ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮಂಗಳೂರು ದಕ್ಷಿಣ ವಲಯ ಮತ್ತು ವಾಮಂಜೂರಿನ ಎಸ್.ಡಿ.ಎಂ. ಮಂಗಳ ಜ್ಯೋತಿ ಸಮಗ್ರ ಪ್ರೌಢ ಶಾಲೆ ಇವರ ಸಹಯೋಗದಲ್ಲಿ ತಾಲ್ಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಯೋಗಾಸನ ಸ್ಪರ್ಧೆ ಹಾಗೂ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮ ಮಂಗಳ ಜ್ಯೋತಿ ಸಭಾಂಗಣದಲ್ಲಿ ಬುಧವಾರ ನಡೆಯಿತು.ಉದ್ಘಾಟಿಸಿ ಮಾತನಾಡಿದ ರೋಟರಿ ಕ್ಲಬ್ ಮಂಗಳೂರು ಪೂರ್ವದ ಅಧ್ಯಕ್ಷ ಪಾಂಡುರಂಗ ಶೆಟ್ಟಿ, ಸಂತೋಷ ಮತ್ತು ಸುಖಮಯ ಜೀವನ, ಮನಸ್ಸಿನ ಹತೋಟಿ ಹಾಗೂ ಏಕಾಗ್ರತೆಗೆ ಯೋ ಗವು ಅತ್ಯವಶ್ಯಕವಾಗಿದೆ. ಎಳೆ ವಯಸ್ಸಿನಿದಲೇ ಇದನ್ನು ಅಭ್ಯಾಸ ಮಾಡಿ ಕೊಂಡು ಬಂದರೆ ಇಡೀ ಜಗತ್ತು ಶಾಂತಿ ಸಹಬಾಳ್ವೆಯಿಂದ ಇರಲು ಸಾಧ್ಯ ಎಂದರು. ಯೋಗವು ಒಂದು ಕ್ರೀಡಾ ಸ್ಪರ್ಧೆ ಯಾಗಿದ್ದು, ಸ್ಪರ್ಧೆಯ ಜತೆಗೆ ರಾಷ್ಟ್ರೀಯ ಕ್ರೀಡಾ ದಿನ ಆಚರಿಸುತ್ತಿರುವುದು ಅರ್ಥಪೂರ್ಣವಾಗಿದೆ ಎಂದರು.ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಪಿ. ಜ್ಞಾನೇಶ್, ದೈಹಿಕ ಶಿಕ್ಷಣ ಪರಿವೀಕ್ಷ ಣಾಧಿಕಾರಿ ಶ್ರೀಮತಿ ಲಿಲ್ಲಿ ಪಾಯಸ್, ಮಾಣಿಕ್ಯ ಕನ್ಸ್‌ಟ್ರಕ್ಷನ್‌ ಮಾಲೀಕ ರಾಜೇಂದ್ರ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಡೋಲ್ಪಿ ಸಿಕ್ವೇರಾ, ಮಂಗಳ ಜ್ಯೋತಿ ರಕ್ಷಕ– ಶಿಕ್ಷಕ ಸಂಘದ ಅಧ್ಯಕ್ಷೆ ನಝೀಮಾ ಬಾನು, ನೋಡಲ್ ಅಧಿಕಾರಿ ಗೋಪಾಲ್ ವೇದಿಕೆಯಲ್ಲಿದ್ದರು. ವಿಷ್ಣು ಹೆಬ್ಬಾರ್, ಧ್ಯಾನ್ ಚಂದ್ ಬಗ್ಗೆ ಮಾತನಾಡಿದರು. ಶಾಲಾ ಆಡಳಿತಾಧಿಕಾರಿ ಗಣೇಶ್ ಭಟ್ ವಿ. ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಅಶೋಕ್ ಕುಮಾರ್ ಶೆಟ್ಟಿ ಸ್ವಾಗತಿಸಿದರು.ವಿಜೇತರು: 14 ವರ್ಷ ವಯೋಮತಿ ಬಾಲಕರು: ಮಂಗಳ ಜ್ಯೋತಿ ಸಮಗ್ರ ಶಾಲೆಯ ಸುದೀಪ್ (ಪ್ರಥಮ), ಪ್ರಮಿತ್ (ದ್ವಿತೀಯ), ಕೌಶಿಕ್ ವಿ. (ತೃತೀಯ), ನೀಲೇಶ್  (ನಾಲ್ಕನೇ ಸ್ಥಾನ), ಹೇಮಂತ್ ಸಿ. (5 ನೇ ಸ್ಥಾನ). ಬಾಲಕಿಯರು: ಚಿನ್ಮಯ ಶಾಲೆಯ ಶಾರದಾ (ಪ್ರಥಮ), ಮಂಗಳ ಜ್ಯೋತಿ ಶಾಲೆಯ ಅಮೃತಾ (ದ್ವಿತೀಯ), ಸೇಕ್ರೆಟ್ ಹಾರ್ಟ್ ಕುಲಶೇಖರದ ಸಿಂಚನಾ ಆರ್. (ತೃತೀಯ), ತೃಪ್ತಿ (ನಾಲ್ಕನೇ ಸ್ಥಾನ), ಸೃಷ್ಟಿ (5 ನೇ ಸ್ಥಾನ).ಆರ್ಟಿಸ್ಟಿಕ್ ಯೋಗ ಬಾಲಕರು: ಮಲ್ಲಿಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುತ್ತು, ಹುಡುಗಿಯರ ವಿಭಾಗ: ಮಲ್ಲಿಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಐಶ್ವರ್ಯ. ರಿದಮಿಕ್ ಯೋಗ  ಬಾಲಕಿಯರು: ಸೇಕ್ರೆಟ್ ಹಾರ್ಟ್ ಕುಲಶೇಖರದ ಶಿಫಾಲಿ, ಬಾಲಕರ ವಿಭಾಗ ಮಂಗಳಜ್ಯೋತಿ ಶಾಲೆಯ ವಿನ್ಯಾಸ್.17 ವಯೋಮಿತಿ ಬಾಲಕಿಯರು: ವಿದ್ಯಾ ಜ್ಯೋತಿ ಶಾಲೆಯ ನಿಶ್ಮಿತ (ಪ್ರಥಮ), ಮಂಗಳ ಜ್ಯೋತಿ ಸಮಗ್ರ ಶಾಲೆಯ ಸಹನಾ (ದ್ವಿತೀಯ), ದೇರಳಕಟ್ಟೆ ನೇತಾಜಿ ಸುಭಾಷಚಂದ್ರ ಬೋಸ್‌ ಶಾಲೆಯ ರೆಹಮತ್‌ (ತೃತೀಯ), ಮಂಗಳ ಜ್ಯೋತಿ ಶಾಲೆಯ ಅಫಿಯಾ (ನಾಲ್ಕನೇ ಸ್ಥಾನ), ದೇರಳಕಟ್ಟೆ ನೇತಾಜಿ ಸುಭಾಷಚಂದ್ರ ಬೋಸ್‌ ಶಾಲೆಯ ದೀಕ್ಷಾ (5 ನೇ ಸ್ಥಾನ). 

ಬಾಲಕರು: ಮಂಗಳ ಜ್ಯೋತಿ ಸಮಗ್ರ ಶಾಲೆಯ ಕಿರಣ್ (ಪ್ರಥಮ), ಕಿಶನ್ (ದ್ವಿತೀಯ), ದೇರಳಕಟ್ಟೆ ನೇತಾಜಿ ಸುಭಾಷಚಂದ್ರ ಬೋಸ್‌ ಶಾಲೆಯ ಮಹಮ್ಮದ್ ಸಿರಾಜುದ್ದೀನ್ (ತೃತೀಯ), ಮಹಮ್ಮದ್ ನೌಶಾದ್ (ನಾಲ್ಕನೇ ಸ್ಥಾನ), ಮಂಗಳ ಜ್ಯೋತಿ ಸಮಗ್ರ ಶಾಳೆಯ ಅನುಷ್ ನಾಕ್ (5 ನೇ ಸ್ಥಾನ).ಆರ್ಟಿಸ್ಟಿಕ್ ಯೋಗ ಬಾಲಕರು: ಮಲ್ಲಿಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆ ಅರುಣ ಫಕಿರೇಶ್ ಮಾದರ್, ಬಾಲಕಿಯರು: ಸುಧಾ ಶಿವಪ್ಪ ಸುಂಕದ. ರಿದಮಿಕ್ ಯೋಗ ಬಾಲಕರು: ಮಲ್ಲಿಕಟ್ಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಾರ್ತಿಕ್ ಸುಧಾಕರ ಪೋಪಡೆ, ಬಾಲಕಿಯರು: ಸೇಂಟ್‌ ಆಗ್ನೆಸ್‌ ಶಾಲೆಯ ವೈಷ್ಣವಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.