ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್‌ ಮಲ್ಯಗೆ ಸೇರಿದ ₹ 6,630 ಕೋಟಿ ಮೌಲ್ಯದ ಆಸ್ತಿ ಜಪ್ತಿ

Last Updated 3 ಸೆಪ್ಟೆಂಬರ್ 2016, 11:13 IST
ಅಕ್ಷರ ಗಾತ್ರ

ನವದೆಹಲಿ: ದೇಶದ ವಿವಿಧ ಬ್ಯಾಂಕ್‌ಗಳ ಸಾವಿರಾರು ಕೋಟಿ ರೂಪಾಯಿ ಸಾಲ ಬಾಕಿ ಉಳಿಸಿ ವಿದೇಶಕ್ಕೆ ತೆರಳಿರುವ ಉದ್ಯಮಿ ವಿಜಯ್ ಮಲ್ಯ ಅವರ ₹ 6,630 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇ.ಡಿ) ಜಪ್ತಿ ಮಾಡಿದೆ.

ಮಲ್ಯ ಅವರಿಗೆ ಸೇರಿದ ‘ಫಾರ್ಮ್‌ಹೌಸ್‌’, ‘ಫ್ಲಾಟ್‌’ಗಳನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶನಿವಾರ ಜಪ್ತಿ ಮಾಡಿದ್ದಾರೆ.

ಮಹಾರಾಷ್ಟ್ರದ ಅಲಿಬಾಗ್‌ನಲ್ಲಿ ₹ 25 ಕೋಟಿ ಮೌಲ್ಯದ ಫಾರ್ಮ್‌ಹೌಸ್‌ ಹಾಗೂ ಬೆಂಗಳೂರಿನಲ್ಲಿರುವ ₹ 564 ಕೋಟಿ ಮೌಲ್ಯದ ಕಿಂಗ್‌ಫಿಷರ್‌ ಟವರ್‌ನ ಹಲವು ಪ್ಲಾಟ್‌ಗಳು ಹಾಗೂ ಖಾಸಗಿ ಬ್ಯಾಂಕ್‌ನಲ್ಲಿ ಇರಿಸಿದ್ದ ನಿಶ್ಚಿತ ಠೇವಣಿ ₹ 10ಕೋಟಿ ಮತ್ತು ₹ 3,635 ಕೋಟಿ ಮೌಲ್ಯದ ಷೇರುಗಳನ್ನು ಜಪ್ತಿಮಾಡಿದೆ.

ಇ.ಡಿ ಒಟ್ಟು ₹4,234.84 ಕೋಟಿ ಆಸ್ತಿ ಜಪ್ತಿ ಮಾಡಿದ್ದು, ಈ ಆಸ್ತಿಯ ಇಂದಿನ ಮೊತ್ತ ಸುಮಾರು ₹6,630 ಕೋಟಿ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT