3

15 ಇಂಚಷ್ಟೆ ಈ ಸೊಂಟ!

Published:
Updated:
15 ಇಂಚಷ್ಟೆ ಈ ಸೊಂಟ!

ಸೊಂಟ ಬಳಕುವ ಬಳ್ಳಿಯಂತಿರಬೇಕು ಎಂಬುದು ಮಹಿಳೆಯರ ಆಸೆ. ಆದರೆ ಅದಕ್ಕಾಗಿ ಕಸರತ್ತು ನಡೆಸುವವರು ಕಡಿಮೆ. ಕೇವಲ ಹದಿನೈದು ಇಂಚಿನ ಸೊಂಟ ಹೊಂದಿರುವ ಅಮೆರಿಕದ ಈ ಮಹಿಳೆಯ ಹೆಸರು ಕಾಥಿ. ಮೂರು ಮಕ್ಕಳ ತಾಯಿಯಾದ ಇವರ ಸೊಂಟ  ಕಂಡರೆ ಎಂಥವರು ಆಶ್ಚರ್ಯಗೊಳ್ಳುತ್ತಾರೆ.ಈ ರೀತಿಯ ಸೊಂಟ ಪಡೆಯಲು ಕಳೆದ ಇಪ್ಪತ್ತೈದು ವರ್ಷಗಳ ಶ್ರಮವಿದೆ. ದಿನಪೂರ್ತಿ ಕಾಥಿ ಬಿಗಿಯಾದ ‘ಕೊರ್‌ಸೆಟ್‌’ ಉಡುಪನ್ನು ಧರಿಸುತ್ತಾರೆ. ಸ್ನಾನ ಮಾಡುವಾಗ ಮತ್ತು ಅಸಹನೀಯವಾದ ಬಿಸಿಲು ಇದ್ದಾಗ ಮಾತ್ರವೇ ಈ ‘ಕೊರ್‌ಸೆಟ್‌’ ಉಡುಪಿಗೆ ಬಿಡುಗಡೆ. ಇವರ ಬಳಿ ನೂರು ‘ಕೊರ್‌ಸೆಟ್‌’ ಬಟ್ಟೆಯಿದೆ.ಇವರು ಮೊದಲ ಬಾರಿಗೆ ಈ ಬಟ್ಟೆಯನ್ನು ತೊಟ್ಟಿದ್ದು ಇವರ ಮದುವೆಯಲ್ಲಿ. ಅಂದಿನಿಂದ ಈ ಬಟ್ಟೆಯ ಮೇಲೆ ಇವರಿಗೆ ಮೋಹ ಉಂಟಾಗಿದೆ. ಒಮ್ಮೆ ಸಿನಿಮಾ ನೋಡುವಾಗ ಅದರ ನಟಿಯ ಸೊಂಟಕ್ಕೆ ಮಾರುಹೋದ ಇವರಿಗೆ ಅಂಥದ್ದೇ ಸೊಂಟ ಪಡೆಯುವ ಆಸೆಯಾಗಿದೆ. ಈ ಆಸೆಯನ್ನು ಪತಿಯ ಬಳಿ ಹೇಳಿಕೊಂಡಿದ್ದಾರೆ. ವೃತ್ತಿಯಲ್ಲಿ ವೈದ್ಯರಾದ ಇವರ ಪತಿ ಪತ್ನಿಯ ಆಸೆಗೆ ನೆರವಾಗಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry