ಭಾನುವಾರ, ಮಾರ್ಚ್ 26, 2023
32 °C
ಮಹಾದಾಯಿ ವಿವಾದ

ಗೋವಾ–ಮಹಾರಾಷ್ಟ್ರ ಸಿ.ಎಂಗೆ ಸಿದ್ದರಾಮಯ್ಯ ಪತ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋವಾ–ಮಹಾರಾಷ್ಟ್ರ ಸಿ.ಎಂಗೆ ಸಿದ್ದರಾಮಯ್ಯ ಪತ್ರ

ಬೆಂಗಳೂರು: ಮಹಾದಾಯಿ ನ್ಯಾಯಮಂಡಳಿಯ ಸಲಹೆಯಂತೆ ನದಿ ನೀರು ಹಂಚಿಕೆ ವಿವಾದಕ್ಕೆ ಮಾತುಕತೆ ಮೂಲಕ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ರಾಜ್ಯ ಸರ್ಕಾರ ಗೋವಾ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಮಂಗಳವಾರ ಪತ್ರ ಬರೆದಿದೆ.ಸೌಹಾರ್ದ ಮಾತುಕತೆ ಮೂಲಕ ಮಹಾದಾಯಿ ವಿವಾದ ಬಗೆಹರಿಸಿಕೊಳ್ಳುವಂತೆ ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ಸರ್ಕಾರಗಳಿಗೆ ನ್ಯಾ. ಜೆ.ಎಂ. ಪಾಂಚಾಲ ನೇತೃತ್ವದ ಮಹಾದಾಯಿ ನ್ಯಾಯಮಂಡಳಿ ಇತ್ತೀಚೆಗೆ ಸಲಹೆ ನೀಡಿತ್ತು.‘ಉಭಯ ರಾಜ್ಯಗಳ ಜೊತೆ ಮೊದಲ ಸುತ್ತಿನ ಮಾತುಕತೆ ನಡೆಸಲು ನಾನು ಉತ್ಸುಕನಾಗಿದ್ದೇನೆ. ಈ ಮಾತುಕತೆಯಲ್ಲಿ ನೀವು ಭಾಗವಹಿಸುವ ನಿಟ್ಟಿನಲ್ಲಿ ನಿಮ್ಮ ಸಹಮತ ಮತ್ತು  ಸಹಕಾರ ನಿರೀಕ್ಷಿಸುತ್ತೇನೆ. ಈ ತಿಂಗಳಲ್ಲಿ  ಮಾತುಕತೆಗೆ ದಿನ ನಿಗದಿಪಡಿಸಲು,ಕರ್ನಾಟಕದ ಮುಖ್ಯ ಕಾರ್ಯದರ್ಶಿಯನ್ನು ಸಂಪರ್ಕಿಸಲು ನಿಮ್ಮ ರಾಜ್ಯದ ಮುಖ್ಯ ಕಾರ್ಯದರ್ಶಿಗೆ ಸೂಚಿಸಬೇಕು’ ಎಂದು ವಿನಂತಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.