ಕ್ರಿಕೆಟ್: ಅಲ್ಪ ಮೊತ್ತಕ್ಕೆ ಕುಸಿದ ಭಾರತ ‘ಎ’

ಬ್ರಿಸ್ಬೇನ್ (ಪಿಟಿಐ): ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದ ಪರ ದಾಡಿದ ಭಾರತ ‘ಎ’ ತಂಡ ಇಲ್ಲಿ ಗುರುವಾರ ಆರಂಭವಾದ ನಾಲ್ಕು ದಿನಗಳ ಕ್ರಿಕೆಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ‘ಎ’ ಎದುರು ಅಲ್ಪ ಮೊತ್ತಕ್ಕೆ ಕುಸಿತ ಕಂಡಿದೆ.
ಇಲ್ಲಿನ ಅಲನ್ ಬಾಲ್ಡರ್ ಫೀಲ್ಡ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಜಯಿಸಿದ ಆತಿಥೇಯರು ಪ್ರವಾಸಿ ತಂಡಕ್ಕೆ ಬ್ಯಾಟ್ ಮಾಡಲು ಆಹ್ವಾನಿಸಿ ದರು. ಆದರೆ, ವಿಕೆಟ್ ಕೀಪರ್ ನಮನ್ ಓಜಾ ನಾಯಕತ್ವದ ತಂಡ ಆರಂಭ ದಲ್ಲಿಯೇ ಆಘಾತ ಅನುಭವಿಸಿತು.
ಅಖಿಲ್ ಹೆರ್ವಾಡ್ಕರ್, ಫಯಾಜ್ ಫಜಲ್, ಕರುಣ್ ನಾಯರ್ ಮತ್ತು ಮನೀಷ್ ಪಾಂಡೆ ಅವರು ಎರಡಂಕಿಯ ಮೊತ್ತ ಮುಟ್ಟುವ ಮೊದಲೇ ಪೆವಿಲಿಯನ್ ಸೇರಿದರು. ಭಾರತ ‘ಎ’ ತಂಡ ಒಟ್ಟು 11 ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡಿತ್ತು.
ಮಧ್ಯಮ ಕ್ರಮಾಂಕದಲ್ಲಿ ಓಜಾ (19), ಸಂಜು ಸ್ಯಾಮ್ಸನ್ (13), ಜಯಂತ್ ಯಾದವ್ (28) ಮತ್ತು ಧವಳ್ ಕುಲಕರ್ಣಿ (11) ಅಲ್ಪ ಆಸರೆಯಾದರು. ಪ್ರವಾಸಿ ತಂಡ ಒಟ್ಟು 46 ರನ್ ಗಳಿಸುವಷ್ಟರಲ್ಲಿ ಆರು ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿತ್ತು. ಈ ವೇಳೆ ಹಾರ್ದಿಕ್ ಪಾಂಡ್ಯ ಆಸರೆ ಯಾದರು.
112 ಎಸೆತಗಳನ್ನು ಎದುರಿಸಿದ ಪಾಂಡ್ಯ ಒಂಬತ್ತು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 79 ರನ್ ಗಳಿಸಿದರು. ಏಳನೇ ವಿಕೆಟ್ ಜೊತೆ ಯಾಟದಲ್ಲಿ ಜಯಂತ್ ಮತ್ತು ಪಾಂಡ್ಯ ಅವರು 78 ರನ್ ಕಲೆ ಹಾಕಿದರು. ಇದರಿಂದ ತಂಡಕ್ಕೆ ನೂರು ರನ್‌ಗಳ ಗಡಿ ದಾಟಲು ಸಾಧ್ಯವಾಯಿತು
ಕೇನ್ ರಿಚರ್ಡ್‌ಸನ್ ಮತ್ತು ಜಾಕ್ಸನ್ ಬಿರ್ಡ್ ತಲಾ ಮೂರು ವಿಕೆಟ್ ಉರುಳಿಸಿ
ಭಾರತ ‘ಎ’ ತಂಡದ ಬ್ಯಾಟಿಂಗ್ ಶಕ್ತಿಗೆ ಪೆಟ್ಟು ನೀಡಿದರು. ಇದೇ ಮೈದಾನದಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಪ್ರವಾಸಿ ತಂಡ ಕೊನೆಯ ದಿನದಾಟದಲ್ಲಿ ಚುರುಕಿನ ಬೌಲಿಂಗ್ ಮಾಡದೇ ಸೋಲು ಕಂಡಿತ್ತು. ಆದ್ದರಿಂದ ಈ ಪಂದ್ಯದಲ್ಲಿ ಗೆಲುವು ಪಡೆದು ಹಿಂದಿನ ಸೋಲಿಗೆ ತಿರುಗೇಟು ನೀಡುವ ಗುರಿ ಹೊಂದಿದೆ.
ಸಂಕ್ಷಿಪ್ತ ಸ್ಕೋರು: ಭಾರತ ‘ಎ’ ಮೊದಲ ಇನಿಂಗ್ಸ್ 66 ಓವರ್‌ಗಳಲ್ಲಿ 9 ವಿಕೆಟ್‌ಗೆ 169 (ನಮನ್ ಓಜಾ 19, ಸಂಜು ಸ್ಯಾಮ್ಸನ್ 13, ಜಯಂತ್ ಯಾದವ್ 28, ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ 79; ಕೇನ್ ರಿಚರ್ಡ್‌ಸನ್ 37ಕ್ಕೆ3, ಜಾಕ್ಸನ್ ಬಿರ್ಡ್ 53ಕ್ಕೆ3).
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.