ಮಂಗಳವಾರ, ಮಾರ್ಚ್ 9, 2021
29 °C
ಸೌಹಾರ್ದ ರಾಯಭಾರಿಯಾಗಿ ನಾದಿಯಾ ಮುರಾಡ್

ಇರಾಕ್‌ ಯುವತಿಗೆ ವಿಶ್ವಸಂಸ್ಥೆ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇರಾಕ್‌ ಯುವತಿಗೆ ವಿಶ್ವಸಂಸ್ಥೆ ಗೌರವ

ವಿಶ್ವಸಂಸ್ಥೆ (ಎಎಫ್‌ಪಿ): ಇಸ್ಲಾಮಿಕ್‌ ಸ್ಟೇಟ್‌ ಉಗ್ರರಿಂದ ಅತ್ಯಾಚಾರಕ್ಕೊಳಗಾಗಿ  ಲೈಂಗಿಕ  ಗುಲಾಮಗಿರಿ ಅನುಭವಿಸಿದ್ದ ಇರಾಕ್‌ನ ಯುವತಿ ನಾದಿಯಾ ಮುರಾಡ್‌ ಬೇಸ್‌ ತಾಹಾ (23) ಅವರನ್ನು ವಿಶ್ವಸಂಸ್ಥೆಯು ತನ್ನ ಸೌಹಾರ್ದ ರಾಯಭಾರಿಯಾಗಿ ಆಯ್ಕೆ ಮಾಡಿದೆ.ಮಾನವ ಕಳ್ಳಸಾಗಣಿಯಿಂದ ಪಾರಾದವರ ಘನತೆ ಪ್ರತಿನಿಧಿಸುವ ಗೌರವ ರಾಯಭಾರಿಯಾಗಿ ನಾದಿಯಾ ಕೆಲಸ ಮಾಡಲಿದ್ದಾರೆ. ಮಾನವ ಕಳ್ಳ ಸಾಗಣೆ ತಡೆಗೆ ಜನ ಜಾಗೃತಿ ಮೂಡಿಸುವ ಜವಾಬ್ದಾರಿ ಸಹ ಇವರ ಮೇಲಿದೆ.ಯಾಜಿದಿ ಸಮುದಾಯದ ನಾದಿಯಾ, ಉಗ್ರರಿಂದ  ಅನ್ಯಾಯಕ್ಕೊಳ ಗಾದವರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಕರೆ ನೀಡಿದ್ದು, 2014ರಲ್ಲಿ ಯಾಜಿದಿ ಜನರ ಮೇಲೆ ನಡೆದ ದಾಳಿಯನ್ನು ಹತ್ಯಾಕಾಂಡವೆಂದು ಪರಿಗಣಿಸಬೇಕೆಂದು ವಾದಿಸಿದ್ದಾರೆ.2014 ಆಗಸ್ಟ್‌ನಲ್ಲಿ ಇರಾಕ್‌ನ  ಉತ್ತರ ಭಾಗದ ಸಿಂಜಾರ್‌ ಪಟ್ಟಣದ ಸಮೀಪವಿರುವ ಕೊಚೊ ಗ್ರಾಮದ ನಿವಾಸದಿಂದ ಅವರನ್ನು ಅಪಹರಿಸಿ ಐಎಸ್‌ ನಿಯಂತ್ರಣದಲ್ಲಿರುವ ಮೊಸುಲ್‌ಗೆ ಕರೆತರಲಾಗಿತ್ತು. ಇಲ್ಲಿ ಮುರಾಡ್‌ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಬಳಿಕ ಹಲವು ಬಾರಿ ಅವರು ಮಾರಾಟವಾಗಿದ್ದರು.ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಮುರಾಡ್‌, ನಾನು ಅದೃಷ್ಟವಂತೆ. ಪಾರಾಗಲು ದಾರಿ ದೊರಕಿತು. ಆದರೆ ಇನ್ನೂ ಸಾವಿರಾರು ಜನರು ಬಂಧನದಲ್ಲಿದ್ದಾರೆ. ಐಎಸ್‌್ ಉಗ್ರರ ವಶದಲ್ಲಿರುವ 3200 ಮಹಿಳೆಯರು, ಬಾಲಕಿಯರನ್ನು ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.***

ಒಮ್ಮೆ ಐಎಸ್‌ ಸೋತುಹೋದರೆ ಆಗ  ಉಗ್ರರು ಏನೂ ಆಗೇ ಇಲ್ಲವೆಂಬಂತೆ ಗಡ್ಡ ಬೋಳಿಸಿ ನಗರದ ರಸ್ತೆಗಳಲ್ಲಿ ನಡೆದಾಡುತ್ತಾರೆ.

-ನಾದಿಯಾ ಮುರಾಡ್‌ ಬೇಸ್‌ ತಾಹಾ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.