ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 17.05 ಲಕ್ಷ ಉಳಿತಾಯ ಬಜೆಟ್‌

ಕಾಪು ಪುರಸಭೆಯ 2017–18ನೇ ಸಾಲಿನ ಮುಂಗಡ ಪತ್ರ-: ಅಧ್ಯಕ್ಷೆ ಸೌಮ್ಯ ಮಂಡನೆ
Last Updated 17 ಜನವರಿ 2017, 8:44 IST
ಅಕ್ಷರ ಗಾತ್ರ

ಕಾಪು (ಪಡುಬಿದ್ರಿ): ಸುಮಾರು ₹ 17 ಲಕ್ಷದ ಉಳಿತಾಯದ ಗುರಿಯೊಂದಿಗೆ ಕಾಪು ಪುರಸಭೆಯ 2017-18ನೇ ಸಾಲಿನ ಮುಂಗಡ ಪತ್ರವನ್ನು ಸೋಮ ವಾರ ಅಧ್ಯಕ್ಷೆ ಸೌಮ್ಯ ಮಂಡಿಸಿದರು.

ಪುರಸಭೆಗೆ ಕಟ್ಟಡಗಳ ತೆರಿಗೆ, ನಳ್ಳಿ ನೀರಿನ ಶುಲ್ಕ, ಅಂಗಡಿ ಬಾಡಿಗೆ, ಕಟ್ಟಡ ಪರವಾನಿಗೆ, ವ್ಯಾಪಾರ ಪರವಾನಗಿ, ಜಾಹೀರಾತು ಪರವಾನಗಿ, ಘನತ್ಯಾಜ್ಯ ನಿರ್ವಹಣೆ ಶುಲ್ಕ ಹಾಗೂ ಇನ್ನಿತರ ಮೂಲಗಳಿಂದ ₹ 2,39 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದು ಮುಖ್ಯಾಧಿಕಾರಿ ರಾಯಪ್ಪ ತಿಳಿಸಿದರು.

ಸಿಬ್ಬಂದಿ ವೇತನ, ವಿದ್ಯುತ್ ಬಿಲ್ಲು, ಎಸ್ಎಫ್‌ಸಿ ಮುಕ್ತ ನಿಧಿ, ವಿಶೇಷ ಅನುದಾನ, ಪ್ರಾಕೃತಿಕ ವಿಕೋಪ, 14 ನೇ ಹಣಕಾಸು, ಎಸ್ಸಿ-ಎಸ್ಟಿ, 3ನೇ ಹಂತದ ನಗರೋತ್ಥಾನ ಹಾಗೂ ಕುಡಿ ಯುವ ನೀರಿನ ಅನುದಾನಗಳು ಸೇರಿ ದಂತೆ ಒಟ್ಟು ₹ 19,31 ಕೋಟಿ ಸರ್ಕಾ ರದ ಅನುದಾನ ನಿರೀಕ್ಷಿಸಲಾಗಿದೆ.

ಕಾಂಪೋಸ್ಟ್ ನಿರ್ಮಾಣಕ್ಕೆ ಸ್ಥಳ ಗುರುತು:  ಪುರಸಭೆ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿಗೆ ಹೆಚ್ಚಿನ ಒತ್ತು ನೀಡಲಾಗು ತ್ತಿದ್ದು, ಈಗಾಗಲೇ 3 ಕಡೆ ಕಾಂಪೋಸ್ಟ್ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದೆ. ಮನೆ ಮನೆಗಳಲ್ಲಿ ಪೈಪು ಕಾಂಪೋಸ್ಟ್ ನಿರ್ಮಿಸುವವರಿಗೆ ಉತ್ತೇಜನ ನೀಡಲಾ ಗುವುದು. ಜಾತ್ರೆ, ಸಮಾರಂಭಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿ ಪೇಪರ್ ಕಪ್ ಮತ್ತು ಲೋಟಗಳನ್ನು ಬಳಕೆ ಮಾಡಲು ಸೂಚಿಸಲಾಗುವುದು.

ಬಯಲು ಶೌಚಾಲಯ ಮುಕ್ತ ಪುರಸಭೆ: ಪುರಸಭೆ ವ್ಯಾಪ್ತಿಯಲ್ಲಿ 17 ಶೌಚಾಲಯ ವಿಲ್ಲದ ಮನೆಗಳನ್ನು ಗುರುತಿಸಲಾಗಿದೆ. ಈ ಎಲ್ಲ ಮನೆಗಳಿಗೆ ಇದೇ 26 ರೊಳಗೆ ಶೌಚಾಲಯ ನಿರ್ಮಿಸಲಾಗುವುದು. 26 ರಂದು ಪುರಸಭೆಯನ್ನು ಬಯಲು ಶೌಚಾ ಲಯ ಮುಕ್ತವೆಂದು ಘೋಷಿಸಲಾಗು ವುದು. ನಾಯಿಯೊಂದರ ಶಸ್ತ್ರಚಿಕಿತ್ಸೆಗೆ ₹ 2 ಸಾವಿರ ತಗಲುವುದರಿಂದ, ಬೀದಿ ನಾಯಿಗಳ ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಬಜೆಟ್‌ನಲ್ಲಿ  2.5 ಲಕ್ಷ ಮೊತ್ತವನ್ನು ಕಾಯ್ದಿರಿಸಲಾಗುವುದು ಎಂದರು.

ಪರವಾನಗಿ ರದ್ದು ಎಚ್ಚರಿಕೆ:  ಕೊಳಚೆ ನೀರಿನ ಸಂಸ್ಕರಣಾ ಘಟಕ ನಿರ್ಮಿಸಲು ವಿರೋಧ ಸರಿಯಲ್ಲ. ಆಧುನಿಕ ತಂತ್ರ ಜ್ಞಾನವನ್ನೊಂದಿರುವ ಘಟಕ ನಿರ್ಮಾಣ ಮಾಡಲು ಜನ ಸಹಕರಿಸಬೇಕು. ವಸತಿ ಗೃಹ, ಹೋಟೆಲ್‌ಗಳು ಕೊಳಚೆ ನೀರನ್ನು ಸಾರ್ವಜನಿಕ ಸ್ಥಳಗಳಲ್ಲಿ ಹರಿಯ ಬಿಡುವವರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ಪುರಸಭೆಯ ಆದೇಶವನ್ನು ಉಲ್ಲಂಘಿಸಿದಲ್ಲಿ ಅಂತಹ ವರ ಪರವಾನಗಿಯನ್ನು ರದ್ದು ಮಾಡಲಾ ಗುವುದು ಎಂದು ಎಚ್ಚರಿಕೆ ನೀಡಿದರು. 

ದಾರಿ ದೀಪಗಳ ನಿರ್ವಹಣೆಗೆ ಹೊರಗುತ್ತಿಗೆಯಲ್ಲಿ ಕಾರ್ಮಿಕರನ್ನು ನೇಮಿಸಲಾಗುವುದು. ಎಲ್ಇಡಿ ಲೈಟ್‌ ಗಳ ಬಳಕೆಗೆ ಒತ್ತು ನೀಡಲಾಗು ವುದು. ಮನೆ-ಮನೆಗಳಲ್ಲಿ ಕಸ ವಿಂಗಡನೆ ಮಾಡಿ ಜನರು ಸಹಕರಿಸಬೇಕು. ನೀರಿನ ಸಮಸ್ಯೆ ನಿವಾರಣೆಗೆ ₹ 24 ಲಕ್ಷ ಬಿಡುಗಡೆ ಮಾಡಲಾಗಿದೆ. ಯಾವುದೇ ಪೈಪುಲೈನ್ ಕಾಮಗಾರಿ ಸಂದರ್ಭದಲ್ಲಿ ಸದಸ್ಯರ ಗಮನಕ್ಕೆ ತಂದು ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಮುಖ್ಯಾಧಿಕಾರಿ ತಾಕೀತು ಮಾಡಿದರು.
ಪುರಸಭೆ ಉಪಾಧ್ಯಕ್ಷ ಕೆ.ಎಚ್. ಉಸ್ಮಾನ್, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಹಮೀದ್ ಮೂಳೂರು ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT