ಜಾಗತಿಕ ಸಾವಯವ ಸಮಾವೇಶ: ವಿಷಯ ಮಂಡನೆಗೆ ಆಹ್ವಾನ

7

ಜಾಗತಿಕ ಸಾವಯವ ಸಮಾವೇಶ: ವಿಷಯ ಮಂಡನೆಗೆ ಆಹ್ವಾನ

Published:
Updated:
ಜಾಗತಿಕ ಸಾವಯವ ಸಮಾವೇಶ: ವಿಷಯ ಮಂಡನೆಗೆ ಆಹ್ವಾನ

ಅಂತರರಾಷ್ಟ್ರೀಯ ಸಾವಯವ ಕೃಷಿ ಚಳವಳಿ ಒಕ್ಕೂಟ (ಐಫೋಮ್) ಪ್ರತಿ ಮೂರು ವರ್ಷಗಳಿಗೊಮ್ಮೆ ಆಯೋಜಿಸುವ ಜಾಗತಿಕ ಸಾವಯವ ಸಮಾವೇಶವು ಭಾರತದಲ್ಲಿ ಇದೇ ಮೊದಲ ಬಾರಿಗೆ ನಡೆಯಲಿದೆ. ನವದೆಹಲಿಯಲ್ಲಿ 2017ರ ನವೆಂಬರ್ 9ರಿಂದ 11ರವರೆಗೆ ಸಮಾವೇಶವನ್ನು ಸಂಘಟಿಸಲಾಗಿದ್ದು, ಸಾವಯವ ಕೃಷಿಕರು ತಮ್ಮ ಅನುಭವವನ್ನು ಜಾಗತಿಕ ಮಟ್ಟದಲ್ಲಿ ವಿನಿಮಯ ಮಾಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ.ಸಾವಯವ ಕೃಷಿ ನೀತಿಯನ್ನು ಜಾರಿಗೆ ತಂದ ಮೊದಲ ರಾಜ್ಯ ಕರ್ನಾಟಕ. ಇಲ್ಲಿ ನಡೆದ ಸಾವಯವ ಚಳವಳಿ ಇತರ ರಾಜ್ಯಗಳನ್ನೂ ಆ ದಿಕ್ಕಿನತ್ತ ಹೊರಳಲು ಪ್ರೇರೇಪಿಸಿದೆ. ಈ ಹಿನ್ನೆಲೆಯಲ್ಲಿ ಇಲ್ಲಿನ ಸಾವಯವ ಕೃಷಿಕರಿಗೆ ತಮ್ಮ ಅನುಶೋಧನೆಗಳು ಹಾಗೂ ಕೃಷಿ ವಿಧಾನಗಳನ್ನು ವಿವಿಧ ದೇಶಗಳ ರೈತರ ಜತೆ ಹಂಚಿಕೊಳ್ಳಲು ಸಮಾವೇಶವು ವೇದಿಕೆ ಒದಗಿಸುತ್ತದೆ.ಬೀಜ–ಜೀವ ವೈವಿಧ್ಯ, ಮಣ್ಣಿನ ಫಲವತ್ತತೆ– ಆರೋಗ್ಯ ಹಾಗೂ ನಿಸರ್ಗ ಕೃಷಿ ಪದ್ಧತಿಗಳು ಎಂಬ ಮೂರು ವಿಭಾಗಗಳಲ್ಲಿ ರೈತರು ತಮ್ಮ ಅನುಭವಗಳನ್ನು ಪ್ರಬಂಧ ರೂಪದಲ್ಲಿ ಮಂಡಿಸಲು ಅವಕಾಶವಿದೆ.ಆಸಕ್ತ ಕೃಷಿಕರು ತಮ್ಮ ವಿಷಯದ ಕುರಿತ ಸಂಕ್ಷಿಪ್ತ ಮಾಹಿತಿಯನ್ನು ಆಯ್ಕೆ ಸಮಿತಿಗೆ ಕಳಿಸಬೇಕು. ಆಯ್ಕೆಯಾದ ರೈತರನ್ನು ಸಮಾವೇಶಕ್ಕೆ ಆಹ್ವಾನಿಸಿ, ಪ್ರಬಂಧ ಮಂಡಿಸಲು ಅವಕಾಶ ನೀಡಲಾಗುತ್ತದೆ. ಸೆ. 30 ಕೊನೆಯ ದಿನ.ವಿವರಗಳಿಗೆ myofai@gmail.com ಅಥವಾ ಮೊಬೈಲ್: 98455 53078 ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry