‘ಕಾನೂನು ಕತ್ತೆ ಎಂಬ ಮಾತು ನಿಜವಾಗಿಸಿದ ದೀಪಕ್‌ ಮಿಶ್ರಾ’

7
ಕಟ್ಜು ಟ್ವೀಟ್‌

‘ಕಾನೂನು ಕತ್ತೆ ಎಂಬ ಮಾತು ನಿಜವಾಗಿಸಿದ ದೀಪಕ್‌ ಮಿಶ್ರಾ’

Published:
Updated:
‘ಕಾನೂನು ಕತ್ತೆ ಎಂಬ ಮಾತು ನಿಜವಾಗಿಸಿದ ದೀಪಕ್‌ ಮಿಶ್ರಾ’

ಬೆಂಗಳೂರು: ‘ಕಾವೇರಿ ಜಲ ವಿವಾದ ಸಂಬಂಧ ನೀಡಿರುವ ಆದೇಶದಲ್ಲಿ ‘ಕಾನೂನು ಕತ್ತೆ’ (The law is a ass)  ಎಂಬ ಡಿಕೆನ್ಸ್‌ನ ಮಾತನ್ನು ದೀಪಕ್‌ ಮಿಶ್ರಾ ನಿಜವಾಗಿಸಿದ್ದಾರೆ’ ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಟ್ವೀಟ್‌ ಮಾಡಿದ್ದಾರೆ.

 

ಚಾರ್ಲ್ಸ್‌ ಡಿಕೆನ್ಸ್‌ನ ‘ಅಲಿವರ್‌ ಟ್ವಿಸ್ಟ್‌’ ಕೃತಿಯಲ್ಲಿ ಬರುವ ‘The law is a ass’ ಎಂಬ ಮಾತನ್ನು ಉಲ್ಲೇಖಿಸಿ ಕಟ್ಜು ಟ್ವೀಟ್‌ ಮಾಡಿದ್ದಾರೆ.

ನ್ಯಾಯದಾನ ಏಕಪಕ್ಷೀಯವಾದ ಸಂದರ್ಭಗಳಲ್ಲಿ ಈ ನುಡಿಗಟ್ಟನ್ನು ಇಂಗ್ಲಿಷ್‌ನಲ್ಲಿ ಸಾಮಾನ್ಯವಾಗಿ ಬಳಸಲಾಗುತ್ತದೆ.

ಕಾವೇರಿ ವಿಚಾರದಲ್ಲಿ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಮತ್ತು ಉದಯ್‌ ಲಲಿತ್‌ ಅವರ ಪೀಠ ಏಕಪಕ್ಷೀಯವಾಗಿ ಆದೇಶ ನೀಡಿದೆ ಎಂಬುದನ್ನು ಕಟ್ಜು ತಮ್ಮ ಟ್ವೀಟ್‌ ಮೂಲಕ ಪರೋಕ್ಷವಾಗಿ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry