ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇಮಿಚಂದ್ರ, ಶಿವಪ್ರಕಾಶ್‌ ಸೇರಿ ಐವರಿಗೆ ಸಾಹಿತ್ಯ ಅಕಾಡೆಮಿ ಗೌರವ

Last Updated 26 ಸೆಪ್ಟೆಂಬರ್ 2016, 14:09 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ 2015ರ ಗೌರವ ಪ್ರಶಸ್ತಿ ಪ್ರಕಟಗೊಂಡಿದ್ದು, ಐವರು ಹಿರಿಯ ಸಾಹಿತಿಗಳನ್ನು ಆಯ್ಕೆ ಮಾಡಲಾಗಿದೆ.

ಡಾ. ಕೃಷ್ಣಮೂರ್ತಿ ಹನೂರು, ಡಾ. ಎಚ್.ಎಸ್‌. ಶಿವಪ್ರಕಾಶ್‌, ಡಾ. ಎಲ್‌. ಹನುಮಂತಯ್ಯ, ನೇಮಿಚಂದ್ರ ಮತ್ತು ಡಾ.ಎಚ್‌. ನಾಗವೇಣಿ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು.

2014ರಲ್ಲಿ ಪ್ರಕಟವಾದ 17 ಪ್ರಕಾರದ ಕೃತಿಗಳು ಮತ್ತು 6 ದತ್ತಿನಿಧಿ ಬಹುಮಾನಕ್ಕೆ ಲೇಖಕರನ್ನು ಆಯ್ಕೆ ಮಾಡಲಾಗಿವೆ ಎಂದು ತಿಳಿಸಿದರು.

2014ರ ವರ್ಷದ ಪುಸ್ತಕ ಬಹುಮಾನ
"ಕಾಫಿ ಕಪ್ಪಿನೊಳಗೆ ಕೋಲಂಬಸ್"(ಸಂಕೀರ್ಣ)-  ಜಿ.ಎನ್. ಮೋಹನ್.
ನನ್ನ ಶಬ್ದ ನಿನ್ನಲಿ ಬಂದು(ಕಾವ್ಯ) -  ಕೆಪಿ ಮೃತ್ಯಂಜಯ್ಯ, ಆಡುಕಳ(ಕಾದಂಬರಿ) - ಶ್ರೀಧರ್ ಬಳಿಗಾರ,
ದಿನಚರಿಯ ಕಡೆ ಪುಟದಿಂದ (ಸಣ್ಣಕತೆ) - ಜಯಶ್ರೀ ಕಾಸರವಳ್ಳಿ,
ದೇವನಾಂಪ್ರಿಯ ಅಶೋಕ (ನಾಟಕ) - ಎಂ ಭೈರೇಗೌಡ,
ಅರ್ಥಾರ್ಥ (ಲಿಲಿತ ಪ್ರಬಂಧ) - ಎಂ.ಎಸ್.ಶ್ರೀರಾಮ್,
ಅಪೂರ್ವ ಪೂರ್ವ (ಪ್ರವಾಸ ಸಾಹಿತ್ಯ) - ವೆಂಕಟೇಶ ಮಾಚಕನೂರ,
ಆನಂದ ಕುಮಾರಸ್ವಾಮಿ (ಜೀವನಚರಿತ್ರೆ) - ಜಿ.ಬಿ. ಹರೀಶ,
ಬಯಲ ಬನಿ (ಸಾಹಿತ್ಯ ವಿಮರ್ಶೆ) - ರವಿಕುಮಾರ್ ನೀಹಾ,
ಶ್ರೀ ಕನಕದಾಸರ ಕೀರ್ತನೆಗಳು (ಗ್ರಂಥ ಸಂಪಾದನೆ ) - ಟಿ.ಎನ್. ನಾಗರತ್ನ,
ಬೆಳಗುತಿರುವ ಭಾರತ (ಮಕ್ಕಳ ಸಾಹಿತ್ಯ) - ಎ.ಕೆ.ರಾಮೇಶ್ವರ,
ಕ್ವಾಂಟಂ ಜಗತ್ತು (ವಿಜ್ಞಾನ ಸಾಹಿತ್ಯ) ಅಗ್ನಿ ಶ್ರೀಧರ್,ನಂಬಿಕೆ,
ಮೂಡನಂಬಿಕೆ, ವೈಜ್ಞಾನಿಕ ಮನೋವೃತ್ತಿ (ಮಾನವಿಕ) - ಎಂ.‌ಅಬ್ದುಲ್ ರೆಹಮಾನ್ ಪಾಷ,
ಹಸ್ತಪ್ರತಿ ಸಂಕಥನ (ಸಂಶೋಧನೆ) - ವೀರೇಶ ಬಡಿಗೇರ,
ಗಾಳಿ ಪಳಗಿಸಿದ ಬಾಲಕ (ಸೃಜನಶೀಲ ಅನುವಾದ -1) - ಕರುಣಾ ಬಿ.ಎಸ್.
ಕಾರ್ಪೊರೇಟ್ ಕಾಲದಲ್ಲೂ ಕಾರ್ಲ್ ಮಾರ್ಕ್ಸ್ ಪ್ರಸ್ತುತ (ಸೃಜನೇತರ ಅನುವಾದ) - ಆರ್.ಕೆ. ಹುಡುಗಿ,
ಆವರ್ತ (ಮೊದಲ ಕೃತಿ- ಕಾದಂಬರಿ) - ಆಶಾ ರಘು,

2014ರ ಕರ್ನಾಟಕ ಸಾಹಿತ್ಯ ಅಕಾಡೆಮಿಯ ವಿವಿಧ ದತ್ತಿ ಪ್ರಶಸ್ತಿಗಳು:
ವೈ.ಎಸ್.ಹರಗಿ, ಉರಿವ ಜಲ - ಕಾದಂಬರಿ (ಚದುರಂಗ ದತ್ತಿ ನಿಧಿ ಪ್ರಶಸ್ತಿ,)
ಎಸ್.‌ಜಗದೀಶ್ ಕೊಪ್ಪ, ಬಿಳಿ ಸಾಹೇಬನ ಭಾರತ - ಜೀವನಚರಿತ್ರೆ- (ಸಿಂಪಿ ಲಿಂಗಣ್ಣ ದತ್ತಿನಿಧಿ ಪ್ರಶಸ್ತಿ,)
ರಾಮಲಿಂಗಪ್ಪ ಟಿ. ಬೇಗೂರು - ಮಹಿಳೆ ಚರಿತ್ರ ಪುರಾಣ - ಸಾಹಿತ್ಯ ವಿಮರ್ಶೆ - (ಪಿ. ಶ್ರೀನಿವಾಸ್ ರಾವ್ ದತ್ತಿನಿಧಿ ಪ್ರಶಸ್ತಿ)
ಬಸು ಬೇವಿನಗಿಡದ - ಸಮಕಾಲೀನ ಭಾರತೀಯ ಸಣ್ಣಕಥೆಗಳು - ಸೃಜನಶೀಲ ಅನುವಾದ ( ಎಲ್. ಗುಂಡಪ್ಪ ಮತ್ತು ಶಾರದಾ ದತ್ತನಿಧಿ ಪ್ರಶಸ್ತಿ)
ಪದ್ಮನಾಭ ಭಟ್ ಶೇವ್ಕಾರ್, ಕೇಪಿನ ಡಬ್ಬಿ - ಲೇಖಕರ ಮೊದಲ ಸ್ವತಂತ್ರ ಕೃತಿ (ಮಧುರ ಚೆನ್ನ ದತ್ತಿನಿಧಿ ಪ್ರಶಸ್ತಿ)
ಡಾ. ಎಚ್.ಎಸ್.ಎಂ. ಪ್ರಕಾಶ್, ಹಿಸ್ಟರಿ ಆಫ್ ದಲಿತ್ ಮ್ಯೂಮೆಂಟ್ - ಕನ್ನಡದಿಂದ ಇಂಗ್ಲಿಷ್ ಗೆ ಅನುವಾದ (ಅಮೇರಿಕನ್ನಡ ದತ್ತಿ ಬಹುಮಾನ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT