ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಸ್ಮಿಕವಾಗಿ ಗಡಿ ಪ್ರವೇಶಿಸಿದ ಪಾಕ್ ಬಾಲಕನ ಹಸ್ತಾಂತರ

Last Updated 3 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ಜಲಂಧರ್‌ : ಬಾಯಾರಿ ನೀರಿಗಾಗಿ ಪರಿತಪಿಸುತ್ತಾ ಭಾರತದ ಗಡಿ ಪ್ರವೇಶಿಸಿದ್ದ ಆ ಬಾಲಕನಿಗೆ ದೇಶ, ಗಡಿ  ಯಾವುದರ ಪರಿವೆಯೇ ಇರಲಿಲ್ಲ! ಹೀಗೆ ನೀರು ಹುಡುಕುತ್ತಾ ಪಂಜಾಬ್‌ನ ದೋನಾ ತೆಲು ಮಲ್‌ ಗಡಿ ತಪಾಸಣಾ ಕೇಂದ್ರದ ಬಳಿಗೆ ಆಕಸ್ಮಿಕವಾಗಿ ಬಂದ 12 ವರ್ಷದ ಬಾಲಕನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಯೋಧರು ಪಾಕಿಸ್ತಾನ ಅಧಿಕಾರಿಗಳಿಗೆ ಮರಳಿಸಿದ ಘಟನೆ ಇಲ್ಲಿ ನಡೆದಿದೆ.

ಬಾಲಕನನ್ನು ಮೊಹಮದ್‌ ತನ್ವೀರ್‌ ಎಂದು ಗುರುತಿಸಲಾಗಿದ್ದು, ಪಾಕಿಸ್ತಾನದ ಕಸೂರ್‌ ಜಿಲ್ಲೆಯ ಧರಿ ಗ್ರಾಮದವನು ಎನ್ನಲಾಗಿದೆ. ‘ತುಂಬಾ ಬಾಯಾರಿಕೆಯಾಗಿದ್ದರಿಂದ ಕುಡಿಯಲು ನೀರು ಹುಡುಕಿ ಹೊರಟಿದ್ದೆ. ಈ ವೇಳೆ ತಿಳಿಯದೆ ಗಡಿ ಪ್ರವೇಶಿಸಿದ್ದಾಗಿ’ ಬಾಲಕ ಹೇಳಿಕೆ ನೀಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಬಾಲಕನನ್ನು ಭಾನುವಾರ ರಾತ್ರಿಯಿಡೀ ಸೇನಾ ಶಿಬಿರದಲ್ಲಿ ಇರಿಸಿಕೊಂಡು ಆರೈಕೆ ಮಾಡಲಾಯಿತು. ಮಾನವೀಯ ದೃಷ್ಟಿಯಿಂದ ಸೋಮವಾರ ಪಾಕಿಸ್ತಾನ ಸೇನಾ ಅಧಿಕಾರಿಗಳನ್ನು ಸಂಪರ್ಕಿಸಿ ಬಾಲಕನನ್ನು ಹಸ್ತಾಂತರಿಸಲಾಯಿತು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT