ಸೋಮವಾರ, ಡಿಸೆಂಬರ್ 9, 2019
17 °C

ಹೊಸ ತಾಣದತ್ತ ‘ಕ್ಯೂರಿಯಾಸಿಟಿ’

ಪಿಟಿಐ Updated:

ಅಕ್ಷರ ಗಾತ್ರ : | |

ಹೊಸ ತಾಣದತ್ತ ‘ಕ್ಯೂರಿಯಾಸಿಟಿ’

ವಾಷಿಂಗ್ಟನ್‌ : ಮಂಗಳ ಗ್ರಹದ ಅಧ್ಯಯನಕ್ಕಾಗಿ ನಾಸಾ ಕಳುಹಿಸಿರುವ ‘ಕ್ಯೂರಿಯಾಸಿಟಿ’ ರೋವರ್‌, ಈಗ ಅಂಗಾರಕನ ಅಂಗಳದಲ್ಲಿ ಹೊಸ ಸ್ಥಳದ ಶೋಧನೆಗೆ ಮುಂದಡಿ ಇಟ್ಟಿದೆ. ಮಂಗಳ ಗ್ರಹದ ಪ್ರಾಚೀನ  ಜಲಭರಿತ ವಾತಾವರಣ ಮತ್ತು ಅಲ್ಲಿ ಇದ್ದಿರಬಹುದಾದ ಜೀವಿಗಳ ಅಸ್ತಿತ್ವದ ಬಗ್ಗೆ ಇನ್ನಷ್ಟು ಅಧ್ಯಯನ ನಡೆಸುವುದಕ್ಕಾಗಿ ಮತ್ತೊಂದು ಎತ್ತರದ ಪ್ರದೇಶದತ್ತ ಅದು ಪ್ರಯಾಣ ಆರಂಭಿಸಿದೆ.ಹೊಸದಾಗಿ ಗುರುತಿಸಲಾಗಿರುವ ಪ್ರದೇಶವು ರೋವರ್‌ ಈಗ ಇರುವ ಸ್ಥಳಕ್ಕಿಂತ ಎರಡೂವರೆ ಕಿ.ಮೀ ದೂರದಲ್ಲಿದೆ. ಈ ಪ್ರದೇಶವು ಖನಿಜಾಂಶಗಳಿಂದ ಕೂಡಿದೆ. ದಿಬ್ಬದ ರಚನೆ ಹೊಂದಿರುವ ಈ ಜಾಗದಲ್ಲಿ ಕಬ್ಬಿಣದ ಆಕ್ಸೈಡ್‌, ಹೆಮಟೈಟ್‌ ಅಂಶಗಳು ಹೇರಳವಾಗಿವೆ. ಮಣ್ಣಿನ ಅಂಶ ಹೆಚ್ಚಾಗಿರುವ ಶಿಲಾ ಬಂಡೆಯೂ ಇಲ್ಲಿದೆ.ಮೌಂಟ್‌ ಶಾರ್ಪ್‌ನ (ಕ್ಯೂರಿಯಾಸಿಟಿ ರೋವರ್‌ ಇಳಿದಿರುವ ಗೇಲ್‌ ಕುಳಿಯಲ್ಲಿ ಈ ಶಿಖರ ಇದೆ) ಕೆಳಭಾಗದಲ್ಲಿರುವ ಈ ಪ್ರದೇಶಗಳು ರೋವರ್‌ನ ಪ್ರಮುಖ ಶೋಧ ತಾಣಗಳಾಗಿವೆ.ಪದರ ಪದರವಾಗಿರುವ ದಿಬ್ಬಗಳನ್ನು ಒಳಗೊಂಡಿರುವ ಈ ಸ್ಥಳಗಳಲ್ಲಿನ ಮಾದರಿಗಳನ್ನು ಸಂಗ್ರಹಿಸಿ, ಪ್ರಾಚೀನ ಕಾಲದಲ್ಲಿ ಮಂಗಳಗ್ರಹದಲ್ಲಿ ಇದ್ದಿರಬಹುದಾದ ವಾತಾವರಣದ ಬಗ್ಗೆ ಅದು ಅಧ್ಯಯನ ನಡೆಸುತ್ತಿದೆ. 2012ರ ಆಗಸ್ಟ್‌ನಲ್ಲಿ ಮಂಗಳ ಗ್ರಹದಲ್ಲಿ ಇಳಿದಿರುವ ‘ಕ್ಯೂರಿಯಾಸಿಟಿ’, ಇದುವರೆಗೆ 1.80 ಲಕ್ಷ ಚಿತ್ರಗಳನ್ನು ಭೂಮಿಗೆ ರವಾನಿಸಿದೆ.

ಪ್ರತಿಕ್ರಿಯಿಸಿ (+)