ಬ್ರೆಜಿಲ್‌ನ ದೊಡ್ಡ ಡೈನೊಸಾರಸ್

ರಿಯೊ ಡಿ ಜನೈರೊ: ಬ್ರೆಜಿಲ್‌ನಲ್ಲಿ 66 ವರ್ಷಗಳ ಹಿಂದೆ ಪತ್ತೆಯಾಗಿದ್ದ ಡೈನೊಸಾರಸ್ ಪಳೆ ಯುಳಿಕೆಯ ಗಾತ್ರ ಮತ್ತು ಕಾಲದ ಬಗ್ಗೆ ವಿಜ್ಞಾನಿಗಳು ಗುರುವಾರ ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡಿದ್ದಾರೆ. ಇದು ಬ್ರೆಜಿಲ್‌ನಲ್ಲಿ ಈವರೆಗೆ ಪತ್ತೆಯಾಗಿರುವ ಡೈನೊಸಾರಸ್‌ಗಳಲ್ಲೇ ಅತ್ಯಂತ ದೊಡ್ಡದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಬ್ರೆಜಿಲ್‌ನ ರಿಯೊ ಡಿ ಜನೈರೊದ ‘ಅರ್ಥ್ ಸೈನ್ಸ್ ಮ್ಯೂಸಿಯಂ’ನಲ್ಲಿ ಇದರ ಪಳೆಯುಳಿಕೆಗಳನ್ನು ಇರಿಸಲಾಗಿದೆ. ದೇಹದ ಲಭ್ಯವಿರುವ ಕೆಲವೇ ಕೆಲವು ಭಾಗಗಳನ್ನು ಇಟ್ಟುಕೊಂಡು ಪೂರ್ಣ ಪ್ರಮಾಣದ ದೇಹ ರಚಿಸಲು ಮತ್ತು ಗಾತ್ರ ಲೆಕ್ಕಹಾಕಲು ವಿಜ್ಞಾನಿಗಳು ಬರೋಬ್ಬರಿ 66 ವರ್ಷ ತೆಗೆದುಕೊಂಡಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.