ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೈನಲ್ಲಿ ನೀರ ಮೇಲೆ ಮನೆ

ಅಪಾರ್ಟ್‌ಮಿಂಟು
Last Updated 6 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ತಂಪು ಗಾಳಿ, ಜುಳುಜುಳು ನಾದ ಸದಾ ಕೇಳುವಂತೆ ನೀರಿನಲ್ಲಿಯೇ ಮನೆಯೊಂದಿದ್ದರೆ, ಎಷ್ಟು ಚೆಂದ ಅಲ್ಲವೇ. ವಾಸ್ತುಶಿಲ್ಪಕ್ಕೆ ಸಂಬಂಧಿಸಿದ ಕಂಪೆನಿಯೊಂದು ದುಬೈನಲ್ಲಿ ಸಮುದ್ರದಲ್ಲಿಯೇ ಮನೆ ನಿರ್ಮಾಣ ವಿನ್ಯಾಸ ಮಾಡುತ್ತಿದೆ.

ದುಬೈನ ಪ್ರಸಿದ್ಧ ಬುರ್ಜ್‌ ಖಲೀಫಾ ಹಾಗೂ ಪಾಮ್‌ ಜುಮೇರಾ ಕಟ್ಟಡಗಳಂಥ ವಿಶೇಷ ವಿನ್ಯಾಸದ ವಾಸ್ತುಶಿಲ್ಪದ ಸಾಧ್ಯತೆಗಳ ವಿಸ್ತಾರವನ್ನು ವಿವರಿಸಿವೆ. ಹೀಗಾಗಿ ನೀರ ಮೇಲಿನ ಮನೆಯೂ ಸಾಧ್ಯ ಎಂಬುದನ್ನು ಸಾಧಿಸಲು ಹೊರಟಿದ್ದಾರೆ ಈ ವಾಸ್ತುಶಿಲ್ಪಿಗಳು.

ದುಬೈನ ನೀರಿನೊಳಗಣ ಮನೆ ನಿರ್ಮಾಣಕ್ಕೆ ಮುಂದಾಗಿರುವುದು ಕಂಪೆನಿ ಡಚ್‌ ಮೂಲದ್ದು. ಈ ಯೋಜನೆಗೆ ‘ನ್ಯೂ ಲಿವಿಂಗ್‌ ಆನ್‌ ವಾಟರ್‌’ ಎಂದು ಹೆಸರಿಸಲಾಗಿದೆ. ಶ್ರೀಮಂತ ವರ್ಗದವರಿಗೆ ವೈಭವೋಪೇತ ಜೀವನ ಒದಗಿಸಿಕೊಡಲಿರುವ ಈ ಕಟ್ಟಡಗಳು ಅತ್ಯುನ್ನತ ಮಟ್ಟದ ಜೀವನ ಕ್ರಮಕ್ಕೆ ನಾಂದಿ ಹಾಡಲಿದೆ.

ನೀರಿನಲ್ಲಿ ಮನೇಯೇ ಎಂದು ಭಯ ಪಡಬೇಕಿಲ್ಲ. ಪ್ರಖ್ಯಾತ, ನುರಿತ ವಾಸ್ತುಶಿಲ್ಪಿಗಳು ಹಾಗೂ ಎಂಜಿನಿಯರ್‌ಗಳು ಈ ವಿನ್ಯಾಸದ ಹಿಂದಿದ್ದಾರೆ. ನಿರ್ಮಾಣ ವಲಯದಲ್ಲಿ ಚಾಲ್ತಿಯಲ್ಲಿರುವ ಅತ್ಯಾಧುನಿಕ ಕಟ್ಟಡ ನಿರ್ಮಾಣ ತಂತ್ರಜ್ಞಾನವನ್ನೇ ಇಲ್ಲಿಯೂ ಬಳಸಿಕೊಳ್ಳಲಾಗಿದೆ. ಅನೇಕ ಮಹಡಿಯ ಕಟ್ಟಡ ಇದಾಗಲಿದೆ.

ಜನಪ್ರಿಯ ಕಾರ್ಟೂನ್‌ ಕಾರ್ಯಕ್ರಮವಾದ ದ ಜಾಟ್ಸನ್‌ನಲ್ಲಿ ಚಿತ್ರಿಸಲಾದ ಮನೆಯ ಕಲ್ಪನೆಯನ್ನೇ ಹೋಲುವಂಥ ಮನೆ ಇವಾಗಲಿವೆ. ಒಳಾಂಗಣ ಸುಮಾರು 16 ಸಾವಿರ ಚದರ ಅಡಿ ಹಾಗೂ 520 ಚದರ ಅಡಿಯಷ್ಟು ಹೊರಾಂಗಣ ಸ್ಥಳಗಳಿರಲಿದ್ದು ಬೆಲೆ ₹73 ಕೋಟಿಗೂ ಅಧಿಕ.

ಮುಂದಿನ ವರ್ಷದಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದ್ದು ಆಗ ಮನೆಯ ಮಾರಾಟ ಬೆಲೆ ₹332ಕೋಟಿಗೂ ಹೆಚ್ಚು ಎಂದು ಕಂಪೆನಿ ಅಂದಾಜಿಸಿದೆ. ತೇಲುವ ವಿನ್ಯಾಸದಲ್ಲಿರುವ ಈ ಮನೆಗಳು ನೀರಿನ ಮಟ್ಟದ ಮೇಲ್ಭಾಗದಲ್ಲಿಯ ಮಹಡಿಗೆ ಸಂಪರ್ಕ ಕಲ್ಪಿಸುವಂತೆ ಲಿಫ್ಟ್‌, ಸ್ಟೇರ್‌ಕೇಸ್‌ ಅನ್ನು ಒಳಗೊಳ್ಳಲಿದೆ. ನೆಲ ಮಹಡಿ, ಬೆಡ್‌ ರೂಂ, ಡೈನಿಂಗ್‌ ರೂಂ, ಅಡುಗೆ ಮನೆ ಹಾಗೂ ಹಾಲ್‌ ಅನ್ನು ಹೊಂದಿರಲಿದೆ.

ಹೋಂ ಥಿಯೇಟರ್‌, ಮನರಂಜನೆ ಒದಗಿಸುವ ಗುಹೆಯಾಕಾರ, ಫಿಟ್‌ನೆಸ್‌ ರೂಂ, ಉಗ್ರಾಣ ಕೋಣೆಯೂ ಇರಲಿದೆ.  ಹೊರಾಂಗಣದಲ್ಲಿ ಕೊಳ, ರೂಫ್‌ಲೈಟ್‌ ಗಾರ್ಡನ್‌ ವಿನ್ಯಾಸ ಮಾಡಲಾಗಿದೆ. ಅಂದಹಾಗೆ ಆರು ವಾಹನ ಪಾರ್ಕ್‌ ಮಾಡುವಷ್ಟು ಸ್ಥಳಾವಕಾಶವೂ ಇರಲಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT