ಭಾರತಕ್ಕೆ ಪ್ರಶಸ್ತಿ ಡಬಲ್

7

ಭಾರತಕ್ಕೆ ಪ್ರಶಸ್ತಿ ಡಬಲ್

Published:
Updated:
ಭಾರತಕ್ಕೆ ಪ್ರಶಸ್ತಿ ಡಬಲ್

ವ್ಲಾಡಿವೊಸ್ತೊಕ್‌, ರಷ್ಯಾ:  ಭಾರತದ ಆಟಗಾರರು ಇಲ್ಲಿ ನಡೆದ ರಷ್ಯಾ ಓಪನ್‌ ಗ್ರ್ಯಾಂಡ್‌ಪ್ರಿಕ್ಸ್‌ ಬ್ಯಾಡ್ಮಿಂಟನ್‌ನಲ್ಲಿ ಮಹಿಳಾ ಸಿಂಗಲ್ಸ್‌ ಮತ್ತು ಮಿಶ್ರ ಡಬಲ್ಸ್‌ ಪ್ರಶಸ್ತಿಗಳನ್ನು ಗೆದ್ದುಕೊಂಡರು.

ನಾಲ್ಕನೇ ಶ್ರೇಯಾಂಕದ ಆಟಗಾರ್ತಿ ರುತ್ವಿಕಾ ಶಿವಾನಿ ಗದ್ದೆ ಸಿಂಗಲ್ಸ್‌ ಫೈನಲ್‌ ಪಂದ್ಯದಲ್ಲಿ 21–10, 21–13ರಿಂದ ಸ್ಥಳೀಯ ಆಟಗಾರ್ತಿ ಎವ್‌ಗೆನಿ ಕೊಸೆತ್ಕಾಯ ಅವರನ್ನು ಸೋಲಿಸಿದರು.

ಆರಂಭದಿಂದಲೇ ಅಮೋಘ ಆಟ  ಆಡಿದ ಶಿವಾನಿ ಮೊದಲ ಗೇಮ್‌ನ ಶುರುವಿನಲ್ಲಿ ಎದುರಾಳಿಯಿಂದ ಅಲ್ಪ ಪ್ರತಿರೋಧ ಎದುರಿಸಿದರು. 

ಒಂದು ಹಂತದಲ್ಲಿ ಉಭಯ ಆಟಗಾರ್ತಿಯರು 10–10ರಲ್ಲಿ ಸಮಬಲ ಹೊಂದಿದ್ದರು. ಆ ಬಳಿಕ ಆಕರ್ಷಕ ಕ್ರಾಸ್‌ಕೋರ್ಟ್‌ ಹೊಡೆತಗಳನ್ನು ಬಾರಿ ಸಿದ ಶಿವಾನಿ ಎದುರಾಳಿಯನ್ನು ಕಂಗೆಡಿಸಿದರು.

ಎರಡನೇ ಗೇಮ್‌ನಲ್ಲೂ ಭಾರತದ ಆಟಗಾರ್ತಿ ಮಿಂಚು ಹರಿಸಿದರು. ಎದುರಾಳಿ ಆಟಗಾರ್ತಿ ನೆಟ್‌ನಿಂದ ಆದಷ್ಟು ಹಿಂದೆ ನಿಂತು ಆಡುತ್ತಿದ್ದುದ ರಿಂದ ಶಿವಾನಿ ಷಟಲ್‌ ಅನ್ನು ನೆಟ್‌ನ ಸಮೀಪದಲ್ಲಿ ಡ್ರಾಪ್‌ ಮಾಡುವ ತಂತ್ರ ಅನುಸರಿಸಿ ಯಶಸ್ವಿಯಾದರು.ಮಿಶ್ರ ಡಬಲ್ಸ್‌ ಪೈನಲ್‌ನಲ್ಲಿ ಎನ್‌.ಸಿಕ್ಕಿ ರೆಡ್ಡಿ ಮತ್ತು ಪ್ರಣವ್‌ ಚೋಪ್ರಾ ಜೋಡಿ ರಷ್ಯಾದ ವ್ಲಾಡಿಮಿರ್‌ ಇವಾನೊವ್‌ ಮತ್ತು ವಲೆರಿಯ ಸೊರೊ ಕಿನಾ ಅವರನ್ನು 21–17, 21–19ರಿಂದ ಮಣಿಸಿತು.

ಆದರೆ ಪುರುಷರ ಸಿಂಗಲ್ಸ್‌ ಫೈನಲ್‌ನಲ್ಲಿ ಭಾರತದ ಸಿರಿಲ್‌ ವರ್ಮ ನಿರಾಸೆ ಅನುಭವಿಸಿದರು. ಇವರು ಮಲೇಷ್ಯಾದ ಜುಲ್ಫಾದಿ ಜುಲ್ಕಿಫಿ ಅವರಿಗೆ ತೀವ್ರ ಪೈಪೋಟಿ ನೀಡಿದರಾದರೂ, ಕೊನೆಗೆ 16–21, 21–19, 21–10ರಿಂದ ಸೋಲನುಭವಿಸಿದರು.ಗುವಾಹಟಿಯಲ್ಲಿ ಇದೇ ವರ್ಷ ನಡೆದಿದ್ದ ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲಿ ಪ್ರಶಸ್ತಿ ಗೆದ್ದ ರುತ್ವಿಕಾ ಇಲ್ಲಿ ಇದೀಗ ಈ ವರ್ಷದ ಎರಡನೇ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಗುವಾಹಟಿಯಲ್ಲಿ ಇವರು ಫೈನಲ್‌ನಲ್ಲಿ ಪಿ.ವಿ.ಸಿಂಧು ಅವರನ್ನು ಸೋಲಿಸಿ ಅಚ್ಚರಿ ಮೂಡಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry