ಜಪಾನ್‌ ಜಯಭೇರಿ

7

ಜಪಾನ್‌ ಜಯಭೇರಿ

Published:
Updated:
ಜಪಾನ್‌ ಜಯಭೇರಿ

ಅಹಮದಾಬಾದ್‌: ಜಪಾನ್‌ ತಂಡದವರು ಇಲ್ಲಿ ನಡೆಯುತ್ತಿರುವ ವಿಶ್ವಕಪ್‌ ಕಬಡ್ಡಿ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಪೋಲೆಂಡ್‌ ವಿರುದ್ಧ 33–22 ಪಾಯಿಂಟ್‌ಗಳಿಂದ ಗೆಲುವು ಗಳಿಸಿತು.ಬುಧವಾರ ನಡೆದ ಪಂದ್ಯದಲ್ಲಿ ಜಪಾನ್‌ ಗೆಲುವಿನಲ್ಲಿ ಮಸಾಯುಕಿ ಶಿಮೊಕಾವಾಲೆದ್‌ ಪ್ರಮುಖ ಪಾತ್ರ ವಹಿಸಿದರು. ವಿಜಯೀ ತಂಡಕ್ಕೆ ಇಲ್ಲಿ ಇದು ಸತತ ಎರಡನೇ ಗೆಲುವಾಗಿದೆ. ಪೋಲೆಂಡ್‌ ಇನ್ನೂ ಒಂದು ಪಂದ್ಯವನ್ನೂ ಗೆದ್ದಿಲ್ಲವಾದರೂ, ತನ್ನ ಆಟದ ಸಾಮರ್ಥ್ಯ ಮತ್ತು ತಂತ್ರವನ್ನು ಹೆಚ್ಚು ಸುಧಾರಿಸಿಕೊಂಡಿದೆ.ಆರಂಭದಲ್ಲಿ ಉಭಯ ತಂಡಗಳಿಂದಲೂ ತೀವ್ರ ಪೈಪೋಟಿ ಮೂಡಿ ಬಂದಿತು. ಮೊದಲ ನಿಮಿಷದಲ್ಲಿಯೇ ಎರಡೂ ತಂಡಗಳು ತಲಾ ಒಂದು ಪಾಯಿಂಟ್‌್ ಗಳಿಸಿದ್ದವು. 10 ನಿಮಿಷಗಳು ಕಳೆದಾಗ ಜಪಾನ್‌ 6–1ರಿಂದ ಮುಂದಿತ್ತು. ಈ ಪಾಯಿಂಟ್ಸ್‌ ಗಳಿಕೆಯಲ್ಲಿ ಕಜುಹಿರೊ ಟಕಾನೊ ಮುಖ್ಯ ಪಾತ್ರ ವಹಿಸಿದರು.ಪೋಲೆಂಡ್‌ ತಂಡದ ಪರ ನಾಯಕ ಮೈಕೆಲ್‌ ಸ್ಪಿಸ್ಕೊ ಗಮನ ಸೆಳೆದರು. ಮೈಕೆಲ್‌ ಮತ್ತು ಬರೋನೊವಿಸ್ಕ್‌ ಅವರ ಯಶಸ್ವಿ ರೈಡಿಂಗ್‌ನಲ್ಲಿ ಅಂತರವನ್ನು 5–6ಕ್ಕೆ ಇಳಿಸಿಕೊಂಡಿತು. ಆದರೆ ನಂತರ ಮಸಾಯುಕಿ ಅವರ ಅತ್ಯುತ್ತಮ ಆಟದ ನೆರವಿನಿಂದ ಜಪಾನ್‌ 15ನೇ ನಿಮಿಷ ಮುಗಿದಾಗ 16–7ರ ಮುನ್ನಡೆ ಗಳಿಸಿತ್ತು. ಮತ್ತೆ ಬರೊನ್‌ವಿಸ್ಕ್‌ ಅವರ ಉತ್ತಮ ಆಟದಿಂದ ಪೋಲೆಂಡ್‌ ಖಾತೆಗೆ 3 ಪಾಯಿಂಟ್‌ಗಳು ಸೇರಿದವು. ವಿರಾಮದ ವೇಳೆಗೆ ಜಪಾನ್‌ 19–10ರಿಂದ ಮುಂದಿತ್ತು.ಪೋಲೆಂಡ್‌ 23ನೇ ನಿಮಿಷದಲ್ಲಿ ತನ್ನ ಮೊದಲ ಟ್ಯಾಕಲ್‌ ಪಾಯಿಂಟ್‌ ಗಳಿಸಿದ್ದೊಂದು ವಿಶೇಷ. 30 ನಿಮಿಷಗಳು ಕಳೆದಾಗ ಜಪಾನ್‌ 27–15ರ ಸುರಕ್ಷಿತ ಮುನ್ನಡೆಯನ್ನು ಕಾಪಾಡಿಕೊಂಡಿತ್ತು.

ಬಿ ಗುಂಪಿನಲ್ಲಿ ಒಟ್ಟು 10 ಪಾಯಿಂಟ್‌ಗಳೊಂದಿಗೆ ಜಪಾನ್‌ ಇದೀಗ ಎರಡನೇ ಸ್ಥಾನದಲ್ಲಿದೆ. ಹೀಗಾಗಿ ಜಪಾನ್‌ ಸೆಮಿಫೈನಲ್‌ ಆಸೆ ಜೀವಂತವಾಗಿದೆ.ಆಸ್ಟ್ರೇಲಿಯಕ್ಕೆ ಜಯ: ಇನ್ನೊಂದು ಪಂದ್ಯದಲ್ಲಿ ಆಸ್ಟ್ರೇಲಿಯ ತಂಡದ ಆಟಗಾರರು 68–45ರಿಂದ ಅರ್ಜೆಂಟಿನಾ ವಿರುದ್ಧ ಗೆಲುವು ದಾಖಲಿಸಿದರು.

ಮೊದಲಾರ್ಧದಲ್ಲಿ ಅತ್ಯುತ್ತಮವಾಗಿ ಆಡಿದ ಆಸ್ಟ್ರೇಲಿಯಾ 36–18ರಿಂದ ಮುನ್ನಡೆ ಸಾಧಿಸಿತ್ತು. ಆದರೆ ಉತ್ತರಾರ್ಧದಲ್ಲಿ ಅರ್ಜೆಂಟಿನಾ ತಂಡ ಚೇತರಿಕೆಯ ಸಾಮರ್ಥ್ಯ ತೋರಿತಾದರೂ ಗೆಲುವು ಗಳಿಸಲು ಸಾಧ್ಯವಾಗಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry