ಸೋಮವಾರ, ಜೂಲೈ 6, 2020
23 °C

ಇರುವೆಯ ಜಗದೊಳು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇರುವೆಯ ಜಗದೊಳು...

ಕೀಟ ಪ್ರಪಂಚವೇ ವಿಶಿಷ್ಟ, ಯಾರಿಂದಲೂ ಅರಿಯಲು ಆಗದ ಲೋಕ. ಅದರಲ್ಲಿಯೂ ಇರುವೆಯ ಜೀವನ ಚಕ್ರ ತುಂಬಾ ಕುತೂಹಲಗಳಿಂದ ಕೂಡಿದೆ. ಅದರ ಬಗ್ಗೆ ಸಂಗ್ರಹಿಸಿರುವ ಕೆಲವು ಮಾಹಿತಿ ಇಲ್ಲಿದೆ...*ಜಗತ್ತಿನಲ್ಲಿ ಮನುಷ್ಯರಿಗಿಂತ ಇರುವೆಗಳ ಸಂಖ್ಯೆಯೇ ಹೆಚ್ಚಿದೆ. ಇದು ಹೇಗೆಂದರೆ ಒಂದು ತಕ್ಕಡಿಯಲ್ಲಿ ಜಗತ್ತಿನ ಎಲ್ಲ ಮನುಷ್ಯರನ್ನು ಮತ್ತು ಇರುವೆಗಳನ್ನು ಒಟ್ಟಿಗೇ ತೂಗಿದರೆ ಮನುಷ್ಯರು ಇರುವೆಗಳನ್ನು ತಲೆ ತಗ್ಗಿಸಿ ನೋಡಬೇಕಂತೆ. ಪ್ರತಿಯೊಬ್ಬ ಮನುಷ್ಯನಿತೆ 10 ಲಕ್ಷ ಇರುವೆಗಳಿವೆ.*ಇರುವೆಗಳಿಗೆ ಕಿವಿ ಇಲ್ಲ. ಆದರೆ ಅದರ ಕಾಲೇ ಕಿವಿಗಳು ಇದ್ದಂತೆ. ಶಬ್ದಗಳ ಕಂಪನಗಳನ್ನು ತನ್ನ ಕಾಲಿನ ಮೂಲಕ ಅರಿತು ಎಲ್ಲಿ ಏನು ನಡೆಯುತ್ತಿದೆ ಎಂಬುದನ್ನು ತಿಳಿದುಕೊಳ್ಳುತ್ತವೆ.*ಇರುವೆಗಳಿಗೆ ಎರಡು ಹೊಟ್ಟೆಗಳಿವೆ. ಒಂದರಲ್ಲಿ ತಮಗೆ ಬೇಕಿರುವಷ್ಟು ಆಹಾರ ಸಂಗ್ರಹ ಮಾಡಿಟ್ಟುಕೊಂಡರೆ ಇನ್ನೊಂದರಲ್ಲಿ ಉಳಿದ ಇರುವೆಗಳಿಗೆ ಹಂಚಲು ಆಹಾರ ಸಂಗ್ರಹಿಸಿ ಇಟ್ಟುಕೊಳ್ಳುತ್ತವೆ.*ಸಿಹಿ ಪದಾರ್ಥಗಳನ್ನು ಎಲ್ಲಿಯೇ ಅಡಗಿಸಿ ಇಟ್ಟರೂ ಇರುವೆಗಳ ಕಣ್ಣು ತಪ್ಪಿಸಲು ಸಾಧ್ಯವಿಲ್ಲ. ಏಕೆಂದರೆ ಇವುಗಳಿಗೆ ಸಿಹಿ ತುಂಬಾ ಇಷ್ಟ. ತಮ್ಮ ವಿಶೇಷ ವಾಸನಾಗ್ರಂಥಿಯಿಂದ ಇವು ಸಿಹಿ ಪದಾರ್ಥಗಳನ್ನು ಹುಡುಕು ಬರುತ್ತವೆ. ಇವುಗಳ ಮೂಗು ತುಂಬ ಸೂಕ್ಷ್ಮ. ತಮ್ಮ ಆಹಾರ ಎಷ್ಟು ದೂರವಿದ್ದರು ಅದನ್ನು ಗ್ರಹಿಸಿ ಹುಡುಕಲು ಹೋಗುತ್ತವೆ.*ಇರುವೆಗಳು ತನ್ನ ತೂಕಕ್ಕಿಂತ 50 ಪಟ್ಟಿನಷ್ಟು ಜಾಸ್ತಿ ಭಾರ ಎತ್ತುವ ಸಾಮರ್ಥ ಹೊಂದಿವೆ.*ಗಂಡು ಇರುವೆಗಳು ಮಿಲನಕ್ಕೆ ಮಾತ್ರ ಸೀಮಿತ. ರಾಣಿ ಇರುವೆಯೊಂದಿಗಿನ ಮಿಲನ ಮಾಡಿದ ನಂತರ ಇವು ಸಾಯುತ್ತವೆ. ಆದರೆ ರಾಣಿ ಇರುವೆಗಳು ತುಂಬಾ ವರ್ಷ ಬದುಕುತ್ತವೆ.  ತಮ್ಮ ಜೀವಿತಾವಧಿಯಲ್ಲಿ  ಲಕ್ಷಾಂತರ ಮರಿಗಳಿಗೆ ಜನ್ಮ ನೀಡುತ್ತವೆ.ಇರುವೆಗಳು ಒಂದು ಸಲ ಹೊಡೆದಾಡಲು ಶುರುವಿಟ್ಟುಕೊಂಡರೆ  ಒಂದು ಅಥವಾ ಎರಡೂ ಇರುವೆಗಳು ಸಾಯುವವರೆಗೂ ಮುಂದುವರಿಸುತ್ತವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.