ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಪಬ್ಲಿಕನ್‌ ಪಕ್ಷದತ್ತ ಭಾರತೀಯರ ಒಲವು

ಅಮೆರಿಕ ಚುನಾವಣೆ: ಟ್ರಂಪ್‌ ಭಾಷಣದ ಪರಿಣಾಮ
Last Updated 18 ಅಕ್ಟೋಬರ್ 2016, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ : ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಇತ್ತೀಚೆಗೆ ರ್‍ಯಾಲಿಯೊಂದರಲ್ಲಿ ಭಾರತೀಯರ ಪರ ಹೇಳಿಕೆ ನೀಡಿರುವುದು ಭಾರತೀಯ ಮೂಲದ ಅಮೆರಿಕನ್ನರ ಮತಬ್ಯಾಂಕ್ ಸೆಳೆಯಲು ನೆರವಾಗಲಿದೆ ಎಂದು ಪಕ್ಷದ ಆಂತರಿಕ ಮೂಲಗಳು ಅಭಿಪ್ರಾಯಪಟ್ಟಿವೆ.

ಸಾಂಪ್ರದಾಯಿಕವಾಗಿ ಡೆಮಾಕ್ರಟಿಕ್ ಪಕ್ಷದ ಪರ ಒಲವು ಹೊಂದಿರುವ ಭಾರತೀಯ ಮೂಲದ ಅಮೆರಿಕನ್ನರು ರಿಪಬ್ಲಿಕನ್ ಪಕ್ಷದತ್ತ ವಾಲುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಚುನಾವಣೆಗೆ ಮೂರು ವಾರಗಳಷ್ಟೇ ಬಾಕಿ ಇದ್ದು, ಟ್ರಂಪ್‌ ಹೇಳಿಕೆ ತಕ್ಷಣವೇ ಪರಿಣಾಮ ಬೀರದು. ಆದರೆ, ಭವಿಷ್ಯದಲ್ಲಿ ಭಾರತೀಯರನ್ನು ಸೆಳೆಯಲು ನೆರವಾಗಲಿದೆ ಎಂದಿವೆ.

ನ್ಯೂಜೆರ್ಸಿಯ ಎಡಿಸನ್‌ನಲ್ಲಿ ಭಾರತೀಯ ಮೂಲದ ಅಮೆರಿಕನ್ನರನ್ನು ಉದ್ದೇಶಿಸಿ ಮಾತನಾಡಿದ್ದ ಟ್ರಂಪ್, ‘ನಾನು ಹಿಂದೂಗಳ ಮತ್ತು ಭಾರತದ ಅಭಿಮಾನಿ’ ಎಂದಿದ್ದರು.

ಪುಟಿನ್ ಭೇಟಿ: ಅಧ್ಯಕ್ಷನಾಗಿ ಆಯ್ಕೆಯಾದರೆ ಅಧಿಕಾರ ಸ್ವೀಕಾರಕ್ಕೂ ಮುನ್ನ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿ ಮಾಡುವ ಬಗ್ಗೆ ಟ್ರಂಪ್ ಸುಳಿವು ನೀಡಿದ್ದಾರೆ. ‘ಆಡಳಿತ ಆರಂಭಿಸುವುದಕ್ಕೂ ಮುನ್ನ ಪುಟಿನ್  ಜತೆ ಮಾತುಕತೆ ನಡೆಸುವುದನ್ನು ಎದುರು ನೋಡುತ್ತಿದ್ದೇನೆ’ ಎಂದು ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಸಮೀಕ್ಷೆಯಲ್ಲಿ ಹಿಲರಿ ಮುಂದೆ: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿ ಸಿಬಿಎಸ್ ನ್ಯೂಸ್ ನಡೆಸಿದ ಸಮೀಕ್ಷೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಶೇ 9 ಮತಗಳ ಮುನ್ನಡೆ ಸಾಧಿಸಿದ್ದಾರೆ. ಕ್ಲಿಂಟನ್ ಪರ ಶೇ 47ರಷ್ಟು ಮತ ಚಲಾವಣೆಯಾಗಿದ್ದರೆ, ಟ್ರಂಪ್ ಪರ ಶೇ 38ರಷ್ಟು ಮತ ಚಲಾವಣೆಯಾಗಿದೆ.

ಪತಿಗೆ ಮೆಲನಿಯಾ ಬೆಂಬಲ: ಮಹಿಳೆಯರ ಕುರಿತು ಅಸಭ್ಯ ಹೇಳಿಕೆ ನೀಡಿರುವ ವಿಡಿಯೊ ಬಹಿರಂಗ ಪ್ರಕರಣಕ್ಕೆ ಸಂಬಂಧಿಸಿ ಟ್ರಂಪ್ ಅವರನ್ನು ಪತ್ನಿ ಮೆಲನಿಯಾ ಟ್ರಂಪ್ ಸಮರ್ಥಿಸಿಕೊಂಡಿದ್ದಾರೆ. ಅಂಥ ಹೇಳಿಕೆ ನೀಡುವಂತೆ ಟ್ರಂಪ್ ಅವರನ್ನು ಪ್ರಚೋದಿಸಲಾಗಿತ್ತು ಎಂದು ಮೆಲನಿಯಾ ಹೇಳಿದ್ದಾರೆ.

ಮುಸ್ಲಿಂ ಆದ ಸಿಖ್ ವ್ಯಕ್ತಿ!
ಷಿಕಾಗೊ:
ಭಾರತೀಯ ಮೂಲದ ಸಿಖ್ ವ್ಯಕ್ತಿಯನ್ನು ಟ್ರಂಪ್ ಅವರ ಮುಸ್ಲಿಂ ಬೆಂಬಲಿಗ ಎಂದು ಬಿಂಬಿಸಿದ ಘಟನೆ ರಿಪಬ್ಲಿಕನ್ ಪಕ್ಷದ ಚುನಾವಣಾ ಪ್ರಚಾರ ಅಭಿಯಾನದ ವೇಳೆ ಒಹಿಯೊದಲ್ಲಿ ನಡೆದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

ಭಾರತದಿಂದ ಅಮೆರಿಕಕ್ಕೆ ವಲಸೆ ಬಂದು ಇಂಡಿಯಾನಾದಲ್ಲಿ ನೆಲೆಸಿರುವ ಗೌರೀಂದರ್ ಸಿಂಗ್ ಖಾಲ್ಸಾ ಅವರ ಚಿತ್ರವನ್ನು ಕರಪತ್ರದಲ್ಲಿ ಮುದ್ರಿಸಿ ಅದರ ಕೆಳಗೆ ‘ಮುಸ್ಲಿಂ’ ಎಂದು ಬರೆಯಲಾಗಿತ್ತು ಎಂದು ಟಿ.ವಿ. ವಾಹಿನಿಯೊಂದು ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT