ಶನಿವಾರ, ಡಿಸೆಂಬರ್ 7, 2019
25 °C

ಮಂಗಳ ಅಧ್ಯಯನಕ್ಕೆ ಹಿನ್ನಡೆ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮಂಗಳ ಅಧ್ಯಯನಕ್ಕೆ ಹಿನ್ನಡೆ

ಪ್ಯಾರಿಸ್‌: ಮಂಗಳ ಗ್ರಹದ ಅಧ್ಯಯನ ನಡೆಸುವ ಯುರೋಪ್‌ ಬಾಹ್ಯಾಕಾಶ ಅಧ್ಯಯನ ಸಂಸ್ಥೆಯ (ಇಎಸ್‌ಎ) ಮಹತ್ವಾಕಾಂಕ್ಷೆಗೆ ಮತ್ತೊಮ್ಮೆ ಹಿನ್ನಡೆ ಆಗಿದೆ.

ಕೆಂಪು ಗ್ರಹದಲ್ಲಿ ಜೀವಿಗಳಿವೆಯೇ  ಅಥವಾ ಅದು ಜೀವ ಪೋಷಕವಾಗಿತ್ತೇ ಎಂಬುದನ್ನು ಪತ್ತೆ ಹಚ್ಚಲು ರೋವರ್‌ ಅನ್ನು ಕಳುಹಿಸುವುದಕ್ಕೂ ಮುನ್ನ  ಇಎಸ್‌ಎ ಪ್ರಯೋಗಾರ್ಥವಾಗಿ  ಕಳುಹಿಸಿದ್ದ ಪುಟ್ಟ ನೌಕೆ ‘ಶಿಯಾಪರೆಲ್ಲಿ’, ಮಂಗಳನ ಮೇಲೆ ಯಶಸ್ವಿಯಾಗಿ ಇಳಿದಿರುವುದರ ಬಗ್ಗೆ ಶಂಕೆ ಮೂಡಿದೆ.

ನೌಕೆಗೆ ಏನಾಗಿರಬಹುದು ಎಂಬುದರ ಬಗ್ಗೆ ಸ್ವತಃ ಇಎಸ್‌ಎ ವಿಜ್ಞಾನಿಗಳಿಗೆ ಮಾಹಿತಿ ಇಲ್ಲ.  ನೌಕೆಯು ಇದುವರೆಗೆ ಯಾವುದೇ ಸಂಕೇತವನ್ನು ಭೂಮಿಗೆ ರವಾನಿಸಿಲ್ಲ. ಮಂಗಳ ಗ್ರಹದಲ್ಲಿ ಇಳಿಸುವ ಉದ್ದೇಶಕ್ಕಾಗಿ ನಿರ್ಮಿಸಿದ್ದ ‘ಶಿಯಾಪರೆಲ್ಲಿ’ ನೌಕೆ ಏಳು ತಿಂಗಳ ಪ್ರಯಾಣದ ನಂತರ ಬುಧವಾರ (ಅ.19) ಮಂಗಳನ ವಾತಾವರಣವನ್ನು ಯಶಸ್ವಿಯಾಗಿ ಪ್ರವೇಶಿಸಿತ್ತು.

ಆದರೆ, ಅದು ಮಂಗಳನ ಮೇಲ್ಮೈಯನ್ನು ಸ್ಪರ್ಶಿಸುವುದಕ್ಕೂ ಮುನ್ನ ಭೂಮಿಯ ಸಂಪರ್ಕವನ್ನು ಕಳೆದುಕೊಂಡಿತ್ತು. ನೌಕೆ ಮಂಗಳ ಗ್ರಹದಲ್ಲಿ ಇಳಿದಿರು

ವುದು ದೃಢ. ಆದರೆ, ಅದು ಯಾವ ಸ್ಥಿತಿಯಲ್ಲಿದೆ ಎಂಬ ಮಾಹಿತಿ ಇಲ್ಲ ಎಂದು ಯುರೋಪ್‌ ಬಾಹ್ಯಾಕಾಶ ಅಧ್ಯಯನ ಸಂಸ್ಥೆಯ ಸೌರ ಮತ್ತು ಗ್ರಹೀಯ ಯೋಜನೆಗಳ ಮುಖ್ಯಸ್ಥ ಆ್ಯಂಡ್ರಿಯಾ ಅಕೊಮಜೊ ಹೇಳಿದ್ದಾರೆ.

*******

ನೌಕೆಯಲ್ಲಿ ಯುರೋಪ್‌ ಬಾಹ್ಯಾಕಾಶ ಅಧ್ಯಯನ ಸಂಸ್ಥೆ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿ ಪಡಿಸಿದ್ದ ಟ್ರೇಸ್‌ ಗ್ಯಾಸ್‌ ಆರ್ಬಿಟರ್‌ (ಟಿಜಿಒ) ಅಳವಡಿಸಲಾಗಿತ್ತು. 2018 ರಿಂದ ಕಾರ್ಯಾಚರಣೆ ನಡೆಸಲು ನಿಯುಕ್ತಿ ಹೊಂದಿದ್ದ ಈ ನೌಕೆಯು ಮಂಗಳ ಗ್ರಹದ ವಾತಾವರಣದಲ್ಲಿನ ಅನಿಲಗಳನ್ನು ಪತ್ತೆ ಹಚ್ಚಿ ಅಲ್ಲಿ ಇದ್ದಿರಬಹುದಾದ ಜೀವಪೋಷಕ ವಾತಾವರಣದ ಬಗ್ಗೆ ಅಧ್ಯಯನ ನಡೆಸಬೇಕಿತ್ತು.

ಮತ್ತೆ ಕಾಡಿದ ಭೂತ

ಮಂಗಳ ಗ್ರಹಕ್ಕೆ ನೌಕೆಯನ್ನು ಕಳುಹಿಸುವ ಯುರೋಪ್‌ನ  ಮೊದಲ ಯತ್ನ 13 ವರ್ಷಗಳ ಹಿಂದೆ ವಿಫಲವಾಗಿತ್ತು. 2003 ರಲ್ಲಿ ‘ಮಾರ್ಸ್‌ ಎಕ್ಸ್‌ಪ್ರೆಸ್‌’ ಬಾಹ್ಯಾಕಾಶ ನೌಕೆ ಮೂಲಕ ಕಳುಹಿಸಲಾಗಿದ್ದ, ಬ್ರಿಟನ್‌ ನಿರ್ಮಿತ ಬೀಗಲ್‌–2 ಹೆಸರಿನ ರೋಬೊಟ್‌ ಪ್ರಯೋಗಾಲಯ ನಾಪತ್ತೆಯಾಗಿತ್ತು.  ನಾಸಾ  ಕಳೆದ ವರ್ಷ ತೆಗೆದಿದ್ದ ಚಿತ್ರಗಳಲ್ಲಿ ಈ ಪ್ರಯೋಗಾಲಯದ ಅವಶೇಷಗಳು ಪತ್ತೆಯಾಗಿದ್ದವು.

49.6 ಕೋಟಿ ಕಿ.ಮೀ- ಏಳು ತಿಂಗಳ ಅವಧಿಯಲ್ಲಿ ನೌಕೆ ಕ್ರಮಿಸಿದ ದೂರ

2016ರ ಮಾರ್ಚ್‌14ರಂದು ಉಡಾವಣೆಗೊಂಡಿದ್ದ ಶಿಯಾಪರೆಲ್ಲಿ ನೌಕೆ ಅಕ್ಟೋಬರ್‌ 19ರಂದು ಭಾರತೀಯ ಕಾಲಮಾನ ರಾತ್ರಿ 8.18ಕ್ಕೆ ಮಂಗಳಗ್ರಹದಲ್ಲಿ ಇಳಿಯಬೇಕಿತ್ತು.

ಪ್ರತಿಕ್ರಿಯಿಸಿ (+)