ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌: ಸಿಂಧುಗೆ ನಿರಾಸೆ

7

ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌: ಸಿಂಧುಗೆ ನಿರಾಸೆ

Published:
Updated:
ಡೆನ್ಮಾರ್ಕ್‌ ಓಪನ್‌ ಬ್ಯಾಡ್ಮಿಂಟನ್‌: ಸಿಂಧುಗೆ ನಿರಾಸೆ

ಒಡೆನ್ಸ್‌ : ಬಲಿಷ್ಠ ಎದುರಾಳಿಯ ಸವಾಲನ್ನು ಮೀರಿ ನಿಲ್ಲಲು ವಿಫಲವಾದ ಪಿ.ವಿ. ಸಿಂಧು ಇಲ್ಲಿ ನಡೆಯುತ್ತಿರುವ ಡೆನ್ಮಾರ್ಕ್‌ ಓಪನ್‌ ಸೂಪರ್‌ ಸರಣಿ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ನಿರಾಸೆ ಕಂಡರು. ಇದರೊಂದಿಗೆ ಟೂರ್ನಿಯಲ್ಲಿ ಭಾರತದ ಸವಾಲಿಗೆ ತೆರೆ ಬಿದ್ದಿದೆ.ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಸಿಂಧು 13–21, 23–21, 18–21ರಲ್ಲಿ ಜಪಾನ್‌ನ ಆಟಗಾರ್ತಿ, ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 12ನೇ ಸ್ಥಾನ ಹೊಂದಿರುವ ಸಯಾಕ ಸ್ಯಾಟೊ ವಿರುದ್ಧ ಮುಗ್ಗರಿಸಿದರು.ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಗೆದ್ದ ಸಾಧನೆ ಮಾಡಿದ್ದ ಸಿಂಧು, ಮಹಾಕೂಟದ ಬಳಿಕ ಆಡಿದ ಮೊದಲ ಟೂರ್ನಿ ಇದಾಗಿ ದ್ದರಿಂದ ಅವರ ಮೇಲೆ ಅಪಾರ ನಿರೀಕ್ಷೆ ಇಡಲಾಗಿತ್ತು. ಆರಂಭಿಕ ಪಂದ್ಯದಲ್ಲಿ ಗೆದ್ದು ವಿಶ್ವಾಸ ಹೆಚ್ಚಿಸಿಕೊಂಡಿದ್ದ ಸಿಂಧು ಅವರು ಸಯಾಕ ವಿರುದ್ಧದ ಹಣಾಹಣಿಯ ಮೊದಲ ಗೇಮ್‌ನಲ್ಲಿ ಸುಲಭವಾಗಿ ಶರಣಾದರು.ರೋಚಕ ಹೋರಾಟ ಕಂಡುಬಂದ ಎರಡನೇ ಗೇಮ್‌ನಲ್ಲಿ ಮಿಂಚಿನ ಆಟ ಆಡಿದ ಸಿಂಧು 1–1ರಲ್ಲಿ ಸಮಬಲ ಮಾಡಿಕೊಂಡರು.

ಆದರೆ ಮೂರನೇ ಹಾಗೂ ನಿರ್ಣಾಯಕ ಗೇಮ್‌ನಲ್ಲಿ ಸಿಂಧು ಎದುರಾಳಿಯ ಸವಾಲು ಮೀರಿ ನಿಲ್ಲಲು ವಿಫಲರಾದರು.

ಸೈನಾ ಕಣಕ್ಕೆ

ಹೈದರಾಬಾದ್‌ :
  ಮಂಡಿಯ ಶಸ್ತ್ರ ಚಿಕಿತ್ಸೆಯಿಂದ ಚೇತರಿಸಿ ಕೊಳ್ಳುತ್ತಿರುವ  ಸೈನಾ ನೆಹ್ವಾಲ್‌ ಮುಂಬರುವ ಚೀನಾ ಓಪನ್‌ನಲ್ಲಿ ಆಡುವುದಾಗಿ ಹೇಳಿದ್ದಾರೆ.‘ನವೆಂಬರ್‌ 12ರಿಂದ ಟೂರ್ನಿ ಆರಂಭವಾಗಲಿದೆ. ಒಂದು ವಾರದಲ್ಲಿ ಸೈನಾ ತರಬೇತಿಗೆ ಮರಳಲಿದ್ದಾರೆ’ ಎಂದು ಅವರ ತಂದೆ ಹರ್ವೀರ್‌ ಸಿಂಗ್‌ ಮಾಹಿತಿ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry