ವಿಶ್ವದ ಹೆಚ್ಚು ಸ್ಥೂಲಕಾಯದ ಮಹಿಳೆ ತೂಕ 500 ಕೆ.ಜಿ.

7

ವಿಶ್ವದ ಹೆಚ್ಚು ಸ್ಥೂಲಕಾಯದ ಮಹಿಳೆ ತೂಕ 500 ಕೆ.ಜಿ.

Published:
Updated:
ವಿಶ್ವದ ಹೆಚ್ಚು ಸ್ಥೂಲಕಾಯದ ಮಹಿಳೆ ತೂಕ 500 ಕೆ.ಜಿ.

ಕೈರೊ : ಈಜಿಪ್ಟ್ ದೇಶದ 36 ವರ್ಷದ ಮಹಿಳೆ ಇಮಾನ್ ಅಹಮದ್ ಅಬ್ದುಲತಿ ಅವರ ದೇಹದ ತೂಕವು 500 ಕೆ.ಜಿ.ಗೆ ತಲುಪಿದ್ದು, ಜಗತ್ತಿನ ಅತಿಹೆಚ್ಚು ಸ್ಥೂಲಕಾಯದ ಮಹಿಳೆ ಎನಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಉತ್ತರ ಈಜಿಪ್ಟ್‌ನ ಅಲೆಕ್ಸಾಂಡ್ರಿಯಾದಲ್ಲಿ ನೆಲೆಸಿರುವ ಇವರು ಸ್ಥೂಲಕಾಯದ ಸಮಸ್ಯೆಯಿಂದಾಗಿ ಕಳೆದ 25 ವರ್ಷಗಳಿಂದ ಮನೆ ಬಿಟ್ಟು ಹೊರಬಂದಿಲ್ಲ.

ಸಮಸ್ಯೆ ಬಗೆಹರಿಸಲು ಮಾಡಿದ ಯತ್ನಗಳು ವಿಫಲವಾದಾಗ, ಇವರ ಸಹೋದರಿ ಚಾಯ್‌ಮಾ ಅವರು ಸಹಾಯ ಮಾಡುವಂತೆ ಜನತೆಗೆ ಮನವಿ ಮಾಡಿದ್ದಾರೆ. ತಾಯಿ ಹಾಗೂ ಸಹೋದರಿ ಜತೆ ಇವರು ವಾಸಿಸುತ್ತಿದ್ದಾರೆ.

ಹನ್ನೊಂದನೆಯ ವಯಸ್ಸಿಗೆ ಪಾರ್ಶ್ವವಾಯುಗೆ ತುತ್ತಾದ ಇವರ ದೇಹದ ತೂಕ ಸತತವಾಗಿ ಏರುತ್ತಾ ಹೋಯಿತು.  ಶೌಚಾಲಯಕ್ಕೆ ಹೋಗಲೂ ಇವರಿಗೆ ಇತರರ ಸಹಾಯ ಬೇಕು. ಇವರು ಹುಟ್ಟಿದಾಗಲೇ ಐದು ಕೆ.ಜಿ. ಇದ್ದರು.

ಇಮಾನ್ ಅವರಿಗೆ ಆನೆಕಾಲುರೋಗ ಇದೆ ಎಂದು ವೈದ್ಯರು ತಿಳಿಸಿದ್ದರು. ಈ ರೋಗದಿಂದ ಕೈಕಾಲುಗಳಲ್ಲಿ ಭಾರಿ ಊತ ಕಾಣಿಸಿಕೊಳ್ಳುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry