ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನಿಟ್ರ್ಯಾಪ್: ಪೊಲೀಸ್ ಬಲೆಗೆ ಮಹಿಳೆಯ ಗ್ಯಾಂಗ್

ಪರ ಸ್ತ್ರೀ ಸಹವಾಸ ಬಯಲು ಮಾಡುವುದಾಗಿ ಬೆದರಿಸಿ ಸುಲಿಗೆ
Last Updated 25 ಅಕ್ಟೋಬರ್ 2016, 20:02 IST
ಅಕ್ಷರ ಗಾತ್ರ

ಬೆಂಗಳೂರು: ತಾವು ಪರ ಸ್ತ್ರೀ ಜತೆ ಅನೈತಿಕ ಸಂಬಂಧ ಹೊಂದಿರುವ ವಿಚಾರವನ್ನು ಪತ್ನಿ–ಮಕ್ಕಳಿಗೆ ಹೇಳುವುದಾಗಿ ಶ್ರೀಮಂತ ವ್ಯಕ್ತಿಗಳಿಗೆ ಬ್ಲ್ಯಾಕ್‌ಮೇಲ್‌ ಮಾಡಿ, ನಗದು–ಚಿನ್ನಾಭರಣ ದೋಚು ತ್ತಿದ್ದ ಮಹಿಳೆ ಸೇರಿ 9 ಮಂದಿಯ ಗ್ಯಾಂಗ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದೆ.  

ಜ್ಞಾನಭಾರತಿಯ ಜ್ಯೋತಿ, ಇಟ್ಟಮಡು ನಿವಾಸಿ ಶಿವಾನಂದ, ಶ್ರೀನಗರದ ದಿಲೀಪ್ ಅಲಿಯಾಸ್ ಬಲೂನ್, ವಿಕಾಸ್ ಅಲಿಯಾಸ್ ಅಣಬೆ, ವೀರಭದ್ರನಗರದ ಶರತ್ ಅಲಿಯಾಸ್ ಡಾಮಾ, ಅವಲಹಳ್ಳಿಯ ಗುರುಪ್ರಸಾದ್, ತ್ಯಾಗರಾಜನಗರದ ವಿನೋದ್, ರಾಮಮೂರ್ತಿನಗರದ ರತನ್ ಹಾಗೂ ರವಿರಾಜ್ ಎಂಬುವರನ್ನು ಬ್ಯಾಟರಾಯನಪುರ ಪೊಲೀಸರು ಬಂಧಿಸಿದ್ದಾರೆ.

ಕೇಟರಿಂಗ್ ಮಾಲೀಕರೊಬ್ಬರ ‘ಆಹ್ವಾನ’ದ ಮೇರೆಗೆ ಅ.22ರ ರಾತ್ರಿ ಅವರ ಮನೆಗೆ ಹೋಗಿದ್ದ ಜ್ಯೋತಿ, ಸಹಚರರ ಮೂಲಕ ಆ ಮನೆಯಲ್ಲಿ ದರೋಡೆ ಮಾಡಿಸಿದ್ದಳು. ಈ ಸಂಬಂಧ ಗಿರಿನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸೋಮವಾರ ರಾತ್ರಿ ಆರೋಪಿಗಳು ಮೈಸೂರು ರಸ್ತೆಯ ಬಾರ್‌ವೊಂದ ರಲ್ಲಿ ಕುಡಿಯುತ್ತ ಕುಳಿತಿದ್ದಾಗ ಬ್ಯಾಟರಾ ಯನಪುರ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಹೇಗೆ ಹನಿ ಟ್ರ್ಯಾಪ್:  ‘ಜ್ಯೋತಿ, ಶಿವಾನಂದ ಹಾಗೂ ದಿಲೀಪ್ ಹಲವು ವರ್ಷಗಳಿಂದ ಸ್ನೇಹಿತರು. ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ಜ್ಯೋತಿ ಯನ್ನು ಬಳಸಿಕೊಂಡು ಹನಿಟ್ರ್ಯಾಪ್ ಮಾಡಲು ಸಂಚು ರೂಪಿಸಿಕೊಂಡ ಶಿವಾ ನಂದ, ಕೃತ್ಯಕ್ಕೆ ಇತರೆ ಹುಡುಗರನ್ನೂ ಹೊಂದಿಸಿದ್ದ’ ಎಂದು ತನಿಖಾಧಿಕಾರಿ ಗಳು ಹೇಳಿದ್ದಾರೆ.

‘ಸುಲಭವಾಗಿ ಹಣ ಗಳಿಸಬಹು ದೆಂದು ಈ ದಂಧೆಗೆ ಒಪ್ಪಿಕೊಂಡ ಜ್ಯೋತಿ, ತನ್ನ ‘ಸಂಪರ್ಕ’ದಲ್ಲಿರುವ ಉದ್ಯಮಿಗಳು, ಗುತ್ತಿಗೆದಾರರು, ವ್ಯಾಪಾ ರಿಗಳಿಂದಲೇ ಸುಲಿಗೆ ಮಾಡಬಹುದು ಎಂಬ ಸಲಹೆಯನ್ನೂ ಕೊಟ್ಟಿದ್ದಳು.’ 

‘ಸಾಂಗತ್ಯ ಬಯಸಿ ಯಾರಾದರೂ ಜ್ಯೋತಿಗೆ ಕರೆ ಮಾಡಿದರೆ, ಆ ವಿಷಯ ವನ್ನು ಕೂಡಲೇ ಆಕೆ   ಗ್ಯಾಂಗ್‌ ಸದಸ್ಯರಿಗೆ ತಿಳಿಸುತ್ತಿದ್ದಳು. ಅಲ್ಲದೆ, ಕರೆದ ವನ ಮನೆ ವಿಳಾಸವನ್ನೂ ಎಸ್‌ಎಂಎಸ್ ಮೂಲಕ ಕಳುಹಿಸುತ್ತಿದ್ದಳು.’

‘ಅವರಿಬ್ಬರೂ ಜತೆಗಿರುವುದಾಗಲೇ ಮನೆಗೆ ನುಗ್ಗುತ್ತಿದ್ದ ಆರೋಪಿಗಳು, ಅಕ್ರಮ ಸಂಬಂಧದ ವಿಚಾರವನ್ನು ಪತ್ನಿ–ಮಕ್ಕಳಿಗೆ ಹೇಳುತ್ತೇವೆ ಎಂದು ಬೆದರಿಸಿ, ಮನೆಯಲ್ಲಿರುವ ನಗದು–ಚಿನ್ನಾಭರಣ ದೋಚುತ್ತಿದ್ದರು.’

ಕುಡಿದು ಬಾಯ್ಬಿಟ್ಟರು
‘ಜ್ಯೋತಿ ಹೊರತುಪಡಿಸಿ ಉಳಿದ 8 ಆರೋಪಿಗಳು ಸೋಮವಾರ ರಾತ್ರಿ ಮೈಸೂರು ರಸ್ತೆಯ ಬಾರ್‌ ವೊಂದರಲ್ಲಿ ಮದ್ಯ ಕುಡಿಯುತ್ತಿದ್ದರು. ಅಮಲಿನಲ್ಲಿದ್ದ ಅವರು, ತಮ್ಮ ಮುಂದಿನ ‘ಕಾರ್ಯ ತಂತ್ರ’ದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಈ ಮಾತು ಗಳನ್ನು ಕೇಳಿಸಿಕೊಂಡ ಪಕ್ಕದ ಟೇಬಲ್‌ನವನು, ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿದ್ದ’ ಎಂದು ಅಧಿಕಾರಿಯೊಬ್ಬರು ವಿವರಿಸಿದರು.

‘ಕೂಡಲೇ ಆ ಬಾರ್‌ಗೆ ತೆರಳಿದ ಬ್ಯಾಟರಾಯನಪುರ ಪೊಲೀಸರು, ಆರೋಪಿಗಳನ್ನು ವಶಕ್ಕೆ ಪಡೆದು ಕೊಂಡರು. ಅವರನ್ನು ಹೆಚ್ಚಿನ ವಿಚಾ ರಣೆಗೆ ಒಳಪಡಿಸಿದಾಗ ಹನಿಟ್ರ್ಯಾಪ್‌ ಕೃತ್ಯ ಬಹಿರಂಗ ವಾಯಿತು. ಆರೋಪಿ ಗಳಿಂದ 12 ಮೊಬೈಲ್, ಮೂರು ಬೈಕ್‌, ಕಾರು, 30 ಗ್ರಾಂ ಚಿನ್ನಾಭರಣ ಹಾಗೂ ನಗದು ಜಪ್ತಿ ಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

ದೂರು ಕೊಡಿ
‘ಈ ಗ್ಯಾಂಗ್ ನಗರದ ಹಲವೆಡೆ ಹನಿಟ್ರ್ಯಾಪ್ ಹಾಗೂ ಸುಲಿಗೆ ಮಾಡಿರುವ ಬಗ್ಗೆ ಅನುಮಾನವಿದೆ. ಈವರೆಗೆ 3 ಪ್ರಕರಣಗಳು ಬೆಳಕಿಗೆ ಬಂದಿವೆ. ಇವರಿಂದ ವಂಚನೆಗೊಳ ಗಾದವರು ಠಾಣೆಗೆ ಬಂದು ದೂರು ಕೊಡಬಹುದು. ಅವರ ಹೆಸರು–ವಿಳಾಸ ಗೌಪ್ಯವಾಗಿಟ್ಟು, ತನಿಖೆ ನಡೆಸುತ್ತೇವೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಎಂ.ಎನ್.ಅನುಚೇತ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT