ಗಡಿ ಭಾಗದಲ್ಲಿ ಪಾಕ್ ಯೋಧರನ್ನು ಬಿಎಸ್‍ಎಫ್ ಹತ್ಯೆ ಮಾಡಿಲ್ಲ

7

ಗಡಿ ಭಾಗದಲ್ಲಿ ಪಾಕ್ ಯೋಧರನ್ನು ಬಿಎಸ್‍ಎಫ್ ಹತ್ಯೆ ಮಾಡಿಲ್ಲ

Published:
Updated:
ಗಡಿ ಭಾಗದಲ್ಲಿ ಪಾಕ್ ಯೋಧರನ್ನು ಬಿಎಸ್‍ಎಫ್ ಹತ್ಯೆ ಮಾಡಿಲ್ಲ

ಇಸ್ಲಾಮಾಬಾದ್: ಇಲ್ಲಿಯವರೆ ಜಮ್ಮು ಕಾಶ್ಮೀರದ ಅಂತರರಾಷ್ಟ್ರೀಯ ಗಡಿ ಭಾಗದಲ್ಲಿ ಕದನ ವಿರಾಮ ಉಲ್ಲಂಘಿಸಿದ 15 ಪಾಕ್ ರೇಂಜರ್‍‍ಗಳನ್ನು ಹತ್ಯೆ ಮಾಡಿದ್ದೇವೆ ಎಂಬ ಬಿಎಸ್‍ಎಫ್ ಹೇಳಿಕೆಗೆ ನಮ್ಮ ಯೋಧರು ಹತ್ಯೆಯಾಗಿಲ್ಲ ಎಂದು ಪಾಕ್ ಸೇನೆ ಪ್ರತಿಕ್ರಿಯಿಸಿದೆ.

ಜಮ್ಮು ಪ್ರದೇಶದ ಅಂತರ ರಾಷ್ಟ್ರೀಯ ಗಡಿ ರೇಖೆಯಲ್ಲಿ ನಡೆದ ದಾಳಿ ಪ್ರತಿದಾಳಿಯಲ್ಲಿ ಪಾಕಿಸ್ತಾನದ 15 ರೇಂಜರ್‍ಗಳನ್ನು ಹತ್ಯೆ ಮಾಡಿದ್ದೇವೆ ಎಂದು ಬಿಎಸ್‍ಎಫ್ ಹೇಳಿತ್ತು. ಅದೇ ವೇಳೆ ಪಾಕಿಸ್ತಾನದಿಂದ ನಡೆದ ಶೆಲ್ ದಾಳಿಯಲ್ಲಿ ಇಬ್ಬರು ಭಾರತೀಯ ನಾಗರಿಕರು ಹತ್ಯೆಯಾಗಿದ್ದು, ಇಬ್ಬರಿಗೆ ಗಾಯಗಳಾಗಿವೆ.

[related]

ಗಡಿಭಾಗದಲ್ಲಿ ಪಾಕಿಸ್ತಾನದ ಯೋಧರನ್ನು ಹತ್ಯೆ ಮಾಡಿದ್ದೇವೆ ಎಂಬ ಬಿಎಸ್‍ಎಫ್ ಹೇಳಿಕೆ ನಿರಾಧಾರ ಮತ್ತು ಸತ್ಯಕ್ಕೆ ದೂರವಾದುದು ಎಂದು ಪಾಕಿಸ್ತಾನದ ಅಂತರ್‌ಸೇವೆಯ ಸಾರ್ವಜನಿಕ ಸಂಪರ್ಕ ಇಲಾಖೆ (ಐಎಸ್‍ಪಿಆರ್) ಹೇಳಿದೆ.

ಕಾಶ್ಮೀರ ಸಮಸ್ಯೆ ವಿಷಯದಿಂದ ಗಮನವನ್ನು ಬೇರೆಡೆ ಸೆಳೆಯುವುದಕ್ಕಾಗಿ ಮತ್ತು ತಮ್ಮ ನಷ್ಟವನ್ನು ಅಡಗಿಸುವುದಕ್ಕಾಗಿ ಭಾರತ ಈ ರೀತಿಯ ನಿರಾಧಾರ ಹೇಳಿಕೆಗಳನ್ನು ನೀಡುತ್ತಿದೆ ಎಂದು ಐಎಸ್‍ಪಿಆರ್ ಹೇಳಿಕೆ ನೀಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry