ಜಿನೀವಾ(ಎಎಫ್ಪಿ): ಇರಾಕ್ನ ಮೋಸುಲ್ ನಗರದ ಹಿಡಿತವನ್ನು ಕಳೆದುಕೊಳ್ಳುತ್ತಿರುವ ಐಎಸ್ ಉಗ್ರರ ನರಮೇಧ ಕಡಿಮೆಯಾಗುತ್ತಿಲ್ಲ. ಈ ಒಂದು ವಾರದಲ್ಲಿ 232 ಜನರನ್ನು ಐಎಸ್ ಉಗ್ರರು ಸಾಯಿಸಿದ್ದಾರೆ.
‘ಉಗ್ರರು ಕಳೆದ ಬುಧವಾರ 232 ನಾಗರಿಕರನ್ನು ಹತ್ಯೆ ಮಾಡಿದ್ದಾರೆ. ಇವರಲ್ಲಿ 190 ಮಂದಿ ಇರಾಕ್ ಭದ್ರತಾ ಪಡೆಯ ಮಾಜಿ ಅಧಿಕಾರಿಗಳು’ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ತಿಳಿಸಿದೆ. ‘ಇತ್ತೀಚಿನ ದಿನಗಳಲ್ಲಿ ಹತ್ಯೆಯಾದ ಜನರ ಸಂಖ್ಯೆ ಹೆಚ್ಚಿದೆ’ ಎಂದು ವಕ್ತಾರೆ ರವೀನಾ ಶಾಮ್ದಸಾನಿ ಹೇಳಿದ್ದಾರೆ.
‘ಐಎಸ್ ಉಗ್ರರು ನಾಗರಿಕರ ಶಿರಚ್ಛೇದ ಮಾಡುತ್ತಿದ್ದಾರೆ. ಉಗ್ರರ ಹೋರಾಟದ ಕೊನೆಯ ನೆಲವಾಗಿ ಉಳಿದಿರುವ ಇರಾಕ್ನ ಉತ್ತರ ನಗರ ಮೋಸುಲ್ನಿಂದ ಜನರನ್ನು ಒತ್ತಾಯಪೂರ್ವಕವಾಗಿ ಸ್ಥಳಾಂತರ ಮಾಡುತ್ತಿದ್ದಾರೆ’ ಎಂದು ಅವರು ಹೇಳಿದ್ದಾರೆ.