ಅಮೆರಿಕದಲ್ಲೂ ಭಾರತದ ಅಮ್ಮಂದಿರೇ ಸುಶಿಕ್ಷಿತರು!

7

ಅಮೆರಿಕದಲ್ಲೂ ಭಾರತದ ಅಮ್ಮಂದಿರೇ ಸುಶಿಕ್ಷಿತರು!

Published:
Updated:
ಅಮೆರಿಕದಲ್ಲೂ ಭಾರತದ ಅಮ್ಮಂದಿರೇ ಸುಶಿಕ್ಷಿತರು!

ವಾಷಿಂಗ್ಟನ್‌: ಬೇರೆ ದೇಶಗಳಿಂದ ಅಮೆರಿಕಕ್ಕೆ ವಲಸೆ ಬಂದು, ಮಕ್ಕಳನ್ನು ಹೆತ್ತ ಅಮ್ಮಂದಿರಲ್ಲಿ ಭಾರತದವರೇ ಹೆಚ್ಚು ಸುಶಿಕ್ಷಿತರು ಎಂದು ಅಧ್ಯಯನವೊಂದು ತಿಳಿಸಿದೆ.ಭಾರತ ಮೂಲದ ಅಮ್ಮಂದಿರ ಕುಟುಂಬದ ಆದಾಯವೂ ಇತರರಿಗಿಂತ ಹೆಚ್ಚಿದೆ ಎಂದು ಅದು ಹೇಳಿದೆ. ಅಮೆರಿಕದಲ್ಲಿಯೇ ಮಗುವಿಗೆ ಜನ್ಮ ನೀಡುವ ವಿದೇಶಿಯರ ಪೈಕಿ ಭಾರತೀಯ ಅಮ್ಮಂದಿರು ಮೂರನೇ ಸ್ಥಾನದಲ್ಲಿದ್ದಾರೆ.ಮೆಕ್ಸಿಕೊ ಮೂಲದ ಮಹಿಳೆಯರು ಮೊದಲ ಸ್ಥಾನದಲ್ಲಿದ್ದರೆ, ಚೀನಾದವರು ಎರಡನೇ ಸ್ಥಾನದಲ್ಲಿದ್ದಾರೆ. ಈ ವಿವರಗಳನ್ನು ಪ್ಯೂ ಅಧ್ಯಯನ ಕೇಂದ್ರವು ಬುಧವಾರ ನೀಡಿದೆ.ಅಮೆರಿಕದ ಜನಸಂಖ್ಯೆಯಲ್ಲಿ ಏಷ್ಯಾ ಮೂಲದವರ ಪಾಲು (ಮುಖ್ಯವಾಗಿ ಚೀನಾ ಮತ್ತು ಭಾರತ) ಹೆಚ್ಚಾಗುತ್ತಿರುವುದನ್ನೂ ಅಧ್ಯಯನ ಉಲ್ಲೇಖಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry