ಬ್ಯಾಡ್ಮಿಂಟನ್; ಜೋಶಿಗೆ ಬಹರೇನ್ ಚಾಲೆಂಜ್ ಪ್ರಶಸ್ತಿ

7

ಬ್ಯಾಡ್ಮಿಂಟನ್; ಜೋಶಿಗೆ ಬಹರೇನ್ ಚಾಲೆಂಜ್ ಪ್ರಶಸ್ತಿ

Published:
Updated:
ಬ್ಯಾಡ್ಮಿಂಟನ್; ಜೋಶಿಗೆ ಬಹರೇನ್ ಚಾಲೆಂಜ್ ಪ್ರಶಸ್ತಿ

ನವದೆಹಲಿ : ಉದಯೋನ್ಮುಖ ಆಟಗಾರ ಪ್ರತುಲ್ ಜೋಶಿ ಅವರು  ಬಹರೇನ್ ಅಂತರರಾಷ್ಟ್ರೀಯ ಚಾಲೆಂಜ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದು ಕೊಂಡರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಇದು ಅವರ ಚೊಚ್ಚಲ ಪ್ರಶಸ್ತಿಯಾಗಿದೆ.

ಸೆಗಯ್ಯಾದಲ್ಲಿ ನಡೆದ ಫೈನಲ್‌ನಲ್ಲಿ 22 ವರ್ಷದ ಜೋಶಿ ಅವರು 21–17, 12–21, 21–15ರಿಂದ ಆದಿತ್ಯ ಅವರ ವಿರುದ್ಧ  ಗೆದ್ದರು. ಮೊದಲ ಗೇಮ್‌ನಲ್ಲಿ ನಡೆದ ತುರುಸಿನ ಪೈಪೋಟಿಯಲ್ಲಿ ಅವರು ಮೇಲುಗೈ ಸಾಧಿಸಿದರು. ಆದರೆ ಎರಡನೇ ಗೇಮ್‌ನಲ್ಲಿ ಆದಿತ್ಯ ಅವರು ತಿರುಗೇಟು ನೀಡಿದರು. ಅದರಲ್ಲಿ ಜಯಿಸಿದರು.

ಆದರೆ ಮೂರನೇ ಗೇಮ್‌ನಲ್ಲಿ  ಜೋಶಿ ತಮ್ಮ ಚುರುಕಾದ ಆಟದ ಮೂಲಕ ಗೆಲುವು ಒಲಿಸಿಕೊಂಡರು.

ಸೆಮಿಫೈನಲ್‌ನಲ್ಲಿ ಮೂರನೇ ಶ್ರೇಯಾಂಕದ ಜೋಶಿ 21–16, 22–20ರಿಂದ ಸಿದ್ಧಾರ್ಥ್ ಠಾಕೂರ್ ವಿರುದ್ಧ ಗೆದ್ದರು. ಆದಿತ್ಯಾ 21–19, 21–7ರಿಂದ ಆನಂದ ಪವಾರ್ ಅವರನ್ನು ಸೋಲಿಸಿದ್ದರು.

ಪುರುಷರ ಡಬಲ್ಸ್‌ನಲ್ಲಿ ವಿಘ್ನೇಶ್ ದೇವಳಕರ್ ಮತ್ತು ರೋಹನ್ ಕಪೂರ್ 18–21, 17–21ರಿಂದ ರಷ್ಯಾದ ಎರಡನೇ ಶ್ರೇಯಾಂಕದ ಎವಗೆನಿಜ್ ಡ್ರೆಮಿನ್ ಮತ್ತು ಡೆನಿಸ್ ಗ್ರೆಚೆವ್ ಎದುರು ಪರಾಭವಗೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry