ಕಾಮನ್‌ವೆಲ್ತ್ ಕುಸ್ತಿ: ಭಾರತಕ್ಕೆ ಏಳು ಚಿನ್ನದ ಪದಕ

7

ಕಾಮನ್‌ವೆಲ್ತ್ ಕುಸ್ತಿ: ಭಾರತಕ್ಕೆ ಏಳು ಚಿನ್ನದ ಪದಕ

Published:
Updated:

ನವದೆಹಲಿ: ಭಾರತದ ನಾಲ್ವರು ಕುಸ್ತಿಪಟುಗಳು ಸಿಂಗಪುರದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಏಳು ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದಾರೆ. 

 

ಪುರುಷರ ವಿಭಾಗದಲ್ಲಿ ಒಲಿಂಪಿಯನ್ ಸಂದೀಪ್ ತೋಮರ್, ಅಮಿತ್ ಧನಕರ್, ಸತ್ಯವ್ರತ್ ಕಡಿಯಾನ್ ಮತ್ತು ಮಹಿಳೆಯರ ವಿಭಾಗದಲ್ಲಿ  ರಿತು ಪೋಗಟ್ ಚಿನ್ನದ ಸಾಧನೆ ಮಾಡಿದ್ದಾರೆ. 

 

ಪುರುಷರ 57ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಸಂದೀಪ್ ತೋಮರ್ ಅವರು 6–0 ಪಾಯಿಂಟ್‌ಗಳಿಂದ ಪಾಕಿಸ್ತಾನದ ಮೊಹಮ್ಮದ್ ಬಿಲಾಲ್ ಅವರನ್ನು ಸೋಲಿಸಿದರು.  

70 ಕೆಜಿ ವಿಭಾಗದಲ್ಲಿ ಅಮಿತ್ ಧನಕರ್ ಅವರು ಚಿನ್ನದ ಪದಕ ಗೆದ್ದರು. 

 

97 ಕೆಜಿ ವಿಭಾಗದ ಫೈನಲ್‌ನಲ್ಲಿ ಸತ್ಯವ್ರತ್ ಅವರ ಎದುರಾಳಿ ರೌಬಲ್‌ ಜೀತ್  ಗಾಯಗೊಂಡು ಹಿಂದೆ ಸರಿದರು. ಸತ್ಯವ್ರತ್ ಚಿನ್ನದ ಪದಕಕ್ಕೆ ಕೊರಳೊ ಡ್ಡಿದರು. 

ಗ್ರಿಕೊ ರೋಮನ್ ವಿಭಾಗದಲ್ಲಿ ಭಾರತದ ಕುಸ್ತಿಪಟುಗಳು ಮಿಂಚಿದರು. 66 ಕೆಜಿ  ವಿಭಾಗದಲ್ಲಿ ಮನೀಶ್ ಚಿನ್ನದ ಪದಕ ಗೆದ್ದರು. 

 

85 ಕೆಜಿ ವಿಭಾಗದಲ್ಲಿ ಪ್ರಭುಪಾಲ್ ಅವರು ಉತ್ತಮ ಆಟವಾಡಿ ಮೊದಲ ಸ್ಥಾನ ಗೆದ್ದರು. 

 

ರಿತು ಸಾಧನೆ

ಮಹಿಳೆಯರ 48 ಕೆಜಿ ವಿಭಾಗದಲ್ಲಿ   ರಿತು ಪೋಗಟ್ ಅವರು ಅಮೋಘ ಪ್ರದರ್ಶನ ನೀಡಿದರು. ಎದುರಾಳಿ ಪ್ರಿಯಾಂಕಾ ಅವರ ಸವಾಲನ್ನು ಮೆಟ್ಟಿ ನಿಂತ ಅವರು ಚಿನ್ನದ ಪದಕ ಜಯಿಸಿದರು. 

 

 63 ಕೆಜಿ ವಿಭಾಗದಲ್ಲಿ ರೇಷ್ಮಾ ಮಾನೆ, 55ಕೆಜಿ ವಿಭಾಗದಲ್ಲಿ ಲಲಿತಾ ಮತ್ತು 69ಕೆಜಿ ವಿಭಾಗದಲ್ಲಿ ಪಿಂಕಿ ಅವರು ಚಿನ್ನದ ಸಾಧನೆ ಮಾಡಿದರು. 75 ಕೆಜಿ ವಿಭಾಗದಲ್ಲಿ ನಿಕ್ಕಿ ಬೆಳ್ಳಿ ಪದಕ ಪಡೆದರು. 58 ಕೆಜಿ ವಿಭಾಗದಲ್ಲಿ ಮನು ಮತ್ತು ಸೋಮಾಲಿ ಅವರು ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನ ಪಡೆದರು. 

 

ಫಲಿತಾಂಶಗಳು

ಪುರುಷರ ಫ್ರೀಸ್ಟೈಲ್: 57ಕೆಜಿ: ಸಂದೀಪ್ ತೋಮರ್ –1, 70 ಕೆಜಿ: ಅಮಿತ್ ಧನಕರ್ –2, ವಿನೋದ್ –2,  97ಕೆಜಿ: ಸತ್ಯವ್ರತ್ –1, ರೌಬಲ್ ಜೀತ್ –2, 

ಗ್ರಿಕೊ ರೋಮನ್: 66ಕೆಜಿ: ಮನೀಶ್–1, ರವೀಂದರ್ –2, 75ಕೆಜಿ: ಗುರುಪ್ರೀತ್–1, ದಿನೇಶ್–2, 80ಕೆಜಿ: ಹರಪ್ರೀತ್ ಸಿಂಗ್ –1, ರವೀಂದರ್ ಖತ್ರಿ –2, 85ಕೆಜಿ: ಪ್ರಭುಪಾಲ್–1 ಯಶಪಾಲ್ –2, 130ಕೆಜಿ: ನವೀನ್–1, ಮನವೀರ್ –2

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry