ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಲರಿಗೆ ಶೇಕಡ ಎರಡರಷ್ಟು ಮುನ್ನಡೆ

ಫಾಕ್ಸ್‌ ನ್ಯೂಸ್‌ ಸಮೀಕ್ಷೆ: ಅಧ್ಯಕ್ಷ ಹುದ್ದೆಗೆ ಅಭ್ಯರ್ಥಿಗಳ ಪೈಪೋಟಿ
Last Updated 5 ನವೆಂಬರ್ 2016, 20:03 IST
ಅಕ್ಷರ ಗಾತ್ರ

ಫಯೆಟ್ಟವಿಲ್ಲೆ: ಶ್ವೇತಭವನಕ್ಕೆ ಪ್ರವೇಶಿಸುವ ಉತ್ಸಾಹದಲ್ಲಿರುವ ಡೆಮಾಕ್ರಟಿಕ್ ಪಕ್ಷದ ಹಿಲರಿ ಕ್ಲಿಂಟನ್ ಮತ್ತು ರಿಪಬ್ಲಿಕನ್ ಪಕ್ಷದ ಡೊನಾಲ್ಡ್‌ ಟ್ರಂಪ್ ನಡುವಣ ಪೈಪೋಟಿ ಬಿಗಿಗೊಳ್ಳುವ ಸೂಚನೆ ಕಂಡುಬಂದಿದ್ದು, ಚುನಾವಣಾ ಪೂರ್ವ ಜನಮತ ಸಂಗ್ರಹದಲ್ಲಿ ಹಿಲರಿ ಅವರು ಟ್ರಂಪ್ ಅವರಿಗಿಂತ ಕೇವಲ ಶೇಕಡ 2ರಷ್ಟು ಮುನ್ನಡೆ ಪಡೆದುಕೊಂಡಿದ್ದಾರೆ.

ಫಾಕ್ಸ್‌ ನ್ಯೂಸ್‌ ಶುಕ್ರವಾರ ಬಿಡುಗಡೆ ಮಾಡಿರುವ ಚುನಾವಣಾ ಸಮೀಕ್ಷೆಯ ವರದಿಯಲ್ಲಿ ಹಿಲರಿ ಅವರು ಶೇಕಡ 45ರಷ್ಟು ಮತಗಳನ್ನು ಪಡೆದಿದ್ದರೆ, ಟ್ರಂಪ್ ಶೇಕಡ 43ರಷ್ಟು ಮತಗಳನ್ನು ಪಡೆದಿದ್ದಾರೆ.

ಇ–ಮೇಲ್ ಪ್ರಕರಣದ ವಿಚಾರದಲ್ಲಿ ಎಫ್‌ಬಿಐ ಕ್ರಮದಿಂದ ಹಿಲರಿ ಅವರ  ಪ್ರಚಾರದ ವೇಗ ಕಡಿಮೆಯಾಗಿದೆ ಎಂದು ಡೆಮಾಕ್ರಟಿಕ್‌ ಪಕ್ಷದ ಮತಗಳ ಸಮೀಕ್ಷೆ ನಡೆಸಿದ ಕ್ರಿಸ್ ಆಂಡರ್‌ಸನ್‌ ತಿಳಿಸಿದ್ದಾರೆ.

‘ಹಿಲರಿ ಪರ ಒಲವು ಹೊಂದಿರುವ ಮತದಾರರು ಟ್ರಂಪ್ ಅವರತ್ತ ಹೊರಳುವ ಸಾಧ್ಯತೆ ಕಡಿಮೆ’ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಟ್ರಂಪ್‌ ಬೆಂಬಲಿಗನ ಪರ ನಿಂತ ಒಬಾಮ!: ಚುನಾವಣಾ ರ್‍ಯಾಲಿಯಲ್ಲಿ ಡೊನಾಲ್ಡ್‌ ಟ್ರಂಪ್ ಅವರನ್ನು ಬೆಂಬಲಿಸುವ ಫಲಕ ಹಿಡಿದು ನಿಂತಿದ್ದ ವ್ಯಕ್ತಿಯನ್ನು ಅಧ್ಯಕ್ಷ ಬರಾಕ್ ಒಬಾಮ ಅವರು ಸಮರ್ಥಿಸುವ ಮೂಲಕ ಜನರ ಗುಂಪನ್ನು ನಿಯಂತ್ರಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ.

ಒಬಾಮ ಅವರು ಹಿಲರಿ ಪರ ಪ್ರಚಾರದಲ್ಲಿ ತೊಡಗಿದ್ದಾಗ ಸೇನಾ ಸಮವಸ್ತ್ರ ಧರಿಸಿದ್ದ ಹಿರಿಯ ವ್ಯಕ್ತಿಯೊಬ್ಬರು ಟ್ರಂಪ್‌ಗೆ ಬೆಂಬಲ ಸೂಚಿಸುವ ಸಂಕೇತವನ್ನು ಹಿಡಿದು ಜನರ ನಡುವೆ ಕಾಣಿಸಿಕೊಂಡರು.

ಅವರನ್ನು ನೋಡಿದ ಡೆಮಾಕ್ರಟಿಕ್ ಪಕ್ಷದ ಬೆಂಬಲಿಗರು ಅವರತ್ತ ಹೀಯಾಳಿಕೆಯ ಸದ್ದುಗಳನ್ನು ಹೊರಡಿಸಲು ಆರಂಭಿಸಿದರೆ.
ಜನರನ್ನು ಕಷ್ಟಪಟ್ಟು ನಿಯಂತ್ರಿಸಿದ ಒಬಾಮ, ಟ್ರಂಪ್ ಬೆಂಬಲಿಗನ ಪರ ಮಾತನಾಡಿದರು.

ದಾಳಿ ಬೆದರಿಕೆ: ಕಟ್ಟೆಚ್ಚರ
ನ್ಯೂಯಾರ್ಕ್‌ : ಇದೇ 8ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯ ಸಂದರ್ಭದಲ್ಲಿ ನಗರದಲ್ಲಿರುವ ಅಲ್‌ ಖೈದಾ ಉಗ್ರರು ದಾಳಿ ನಡೆಸುವ ಸಾಧ್ಯತೆ ಇದೆ ಎಂದು ಗುಪ್ತಚರ ಮೂಲಗಳು ಮಾಹಿತಿ ನೀಡಿರುವುದರಿಂದ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.ನ್ಯೂಯಾರ್ಕ್‌, ವರ್ಜೀನಿಯಾ ಮತ್ತು ಟೆಕ್ಸಾಸ್‌ಗಳಲ್ಲಿ ದಾಳಿಯ ಬೆದರಿಕೆಯ ಕುರಿತು ಗುಪ್ತಚರ ಸಂಸ್ಥೆಗಳು ಜಂಟಿ ಭಯೋತ್ಪಾದನಾ ನಿಗ್ರಹ ಪಡೆಗಳಿಗೆ ಎಚ್ಚರಿಕೆ ನೀಡಿವೆ.  ಯಾವ ನಿರ್ದಿಷ್ಟ ಸ್ಥಳಗಳ ಮೇಲೆ ದಾಳಿ ನಡೆಯಬಹುದು ಎಂಬ ಮಾಹಿತಿ ಬಹಿರಂಗವಾಗಿಲ್ಲ ಎಂದು ‘ದಿ ನ್ಯೂಯಾರ್ಕ್‌ ಪೋಸ್ಟ್‌’ ವರದಿ ಮಾಡಿದೆ.


ಹಿಲರಿ ಗೆಲ್ಲಿಸಲು ಒಬಾಮ ಮನವಿ
ಈ ಬಾರಿಯ ಅಧ್ಯಕ್ಷೀಯ ಚುನಾ ವಣೆಯಲ್ಲಿ ತೀವ್ರ ನಿಕಟ ಪೈಪೋಟಿ ಏರ್ಪಡಲಿದ್ದು, ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರನ್ನು ಗೆಲ್ಲಿಸಲು ಮತ ಚಲಾಯಿಸುವಂತೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಆಫ್ರಿಕಾ–ಅಮೆರಿಕನ್ನರಿಗೆ ಮನವಿ ಮಾಡಿದ್ದಾರೆ.

ಉತ್ತರ ಕೆರೊಲಿನಾದ ಚುನಾವಣಾ ರ್‍ಯಾಲಿಯಲ್ಲಿ ಮಾತನಾಡಿದ ಒಬಾಮ, ‘ಇದು ಸಮೀಪದ ಪೈಪೋಟಿ ಆಗಬಾರದಿತ್ತು. ಆದರೆ, ಹಾಗೆ ಆಗುತ್ತಿದೆ. ಅದರಲ್ಲೂ ಮುಖ್ಯವಾಗಿ ಉತ್ತರ ಕೆರೊಲಿನಾ ದಲ್ಲಿ ಅತಿ ಜಿದ್ದಾಜಿದ್ದಿನ ಸ್ಪರ್ಧೆ ನಡೆಯಲಿದೆ’ ಎಂದರು.

* ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಇತಿಹಾಸದಲ್ಲೇ ಹಿಲರಿ ಅತ್ಯಂತ ಭ್ರಷ್ಟ ಅಭ್ಯರ್ಥಿ. ಅವರು ಗೆದ್ದರೆ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಲಿದೆ

–ಡೊನಾಲ್ಡ್‌  ಟ್ರಂಪ್
ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT