ಪ್ರತಿವರ್ಷ ಮನೆಗೆ ಬರುವ ಶವ

7

ಪ್ರತಿವರ್ಷ ಮನೆಗೆ ಬರುವ ಶವ

Published:
Updated:
ಪ್ರತಿವರ್ಷ ಮನೆಗೆ ಬರುವ ಶವ

ಹಲವು ಜನಾಂಗಗಳಲ್ಲಿ ಯಾರಾದರೂ ಸತ್ತರೆ ಶವಕ್ಕೆ ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ ನಂತರ ಶವಸಂಸ್ಕಾರಕ್ಕೆ ಒಯ್ಯುವುದು ರೂಢಿ. ಒಮ್ಮೆ ಶವಸಂಸ್ಕಾರ ಮಾಡಿಬಂದರೆ ಪ್ರತಿ ವರ್ಷ ಅವರ ತಿಥಿ ಮಾಡುತ್ತೇವೆ. ಆದರೆ ಇಂಡೋನೇಷಿಯಾದ ಟೊರಜ ಬುಡಕಟ್ಟು ಜನರೂ ಶವಕ್ಕೆ ಸ್ನಾನ ಮಾಡಿಸುತ್ತಾರೆ, ಬಟ್ಟೆ ತೊಡಿಸುತ್ತಾರೆ...ಅಷ್ಟೇ ಏಕೆ ಅದಕ್ಕೆ ಊಟವನ್ನೂ ಮಾಡಿಸುತ್ತಾರೆ. ಆದರೆ ಶವ ಸಂಸ್ಕಾರಕ್ಕೆ ಒಯ್ಯುವ ದಿನ ಮಾತ್ರವಲ್ಲ... ಪ್ರತಿ ವರ್ಷ...! ಹೌದು. ಇಂಥದ್ದೊಂದು ವಿಚಿತ್ರ ಆಚರಣೆ ಅಲ್ಲಿದೆ.ಟೊರಜ ಜನಾಂಗದಲ್ಲಿ ಯಾರೇ ಸತ್ತರೂ ಮೊದಲು ಶವವನ್ನು ಅವರ ಇಷ್ಟದ ಬಟ್ಟೆಯಲ್ಲಿ ಸುತ್ತುತ್ತಾರೆ. ಸತ್ತವರ ಎದುರು ಅಳುವುದು, ಕೂಗಾಡುವುದು ನಿಷಿದ್ಧ. ಕುಟುಂಬದ ಸದಸ್ಯರೆಲ್ಲಾ ನಗಬೇಕು. ನಂತರ ಶವವನ್ನು ಒಂದು ಬೆಟ್ಟಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ. ಅಲ್ಲಿ ಬೆಟ್ಟ–ಗುಡ್ಡ ಕೊರೆದು ಒಂದು ಕೋಣೆ ನಿರ್ಮಿಸಿ ಶವವನ್ನು ಇಡಲಾಗುತ್ತದೆ. ಶವದ ಪಕ್ಕ ವಾರಕ್ಕೊಮ್ಮೆ ಅವರು ಇಷ್ಟಪಡುತ್ತಿದ್ದ ತಿನಿಸು ಇಟ್ಟು ಬರಲಾಗುತ್ತದೆ.ಕುತೂಹಲಕರ ಅಂಶವೆಂದರೆ, ಪ್ರತಿ ವರ್ಷ ಆ ಶವವನ್ನು ಮನೆಗೆ ಕರೆದುಕೊಂಡು ಬರಲಾಗುತ್ತದೆ. ರಾಸಾಯನಿಕ ಸಿಂಪಡನೆ ಮಾಡಿರುವ ಕಾರಣ, ಎಷ್ಟು ವರ್ಷ ಕಳೆದರೂ ಶವ ಕೊಳೆಯುವುದಿಲ್ಲ. ಹೀಗೆ ಮನೆಗೆ ಕರೆತಂದ ಶವಕ್ಕೆ ಸ್ನಾನ ಮಾಡಿಸಿ, ಬಟ್ಟೆ ತೊಡಿಸಲಾಗುತ್ತದೆ. ಅದರ ಬಾಯಿಗೆ ಆಹಾರ ಇಡಲಾಗುತ್ತದೆ. ಪುನಃ ಅದನ್ನು ತೆಗೆದುಕೊಂಡು ಅದೇ ಕೋಣೆಯಲ್ಲಿ ಇರಿಸಿ ಬರಲಾಗುತ್ತದೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry