ಸೋಮವಾರ, ಮಾರ್ಚ್ 27, 2023
21 °C

‘ಚಮಚ’ ಗಿನ್ನಿಸ್‌ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಚಮಚ’ ಗಿನ್ನಿಸ್‌ ದಾಖಲೆ

ಚಮಚದ ಮೇಲೆ ಲಿಂಬೆಹಣ್ಣನ್ನು ಇಟ್ಟು ಸಮತೋಲನ ಸಾಧಿಸಿ ಹಲವು ವಿಧದ ಆಟಗಳನ್ನು ಆಡುವುದನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಆದರೆ ಇಲ್ಲೊಬ್ಬರು ಮೈ ಮೇಲೆ ಐವತ್ತು ಚಮಚಗಳನ್ನು ನಿಲ್ಲಿಸಿ ಗಿನ್ನಿಸ್‌ ದಾಖಲೆ ಮಾಡಿದ್ದಾರೆ. ಈ ಸಾಧನೆ ಮಾಡಿರುವುದು  ಜಾರ್ಜಿಯಾದ ಎಟಿಬಾರ್‌ ಎಲ್‌ಕೇವ್‌.ಮೂವತ್ತೊಂಬತ್ತು ವರ್ಷದ ಇವರು, ಕಿಕ್‌ ಬಾಕ್ಸಿಂಗ್‌ ತರಬೇತಿ ನೀಡುತ್ತಾರೆ. ಕುತ್ತಿಗೆ ಮತ್ತು ಎದೆಯ ಮೇಲೆ 50 ಚಮಚಗಳನ್ನಿಟ್ಟುಕೊಂಡು ಸಮತೋಲನ  ಸಾಧಿಸುವ ಕಲೆಯನ್ನು ಇವರು ಸಿದ್ಧಿಸಿಕೊಂಡಿದ್ದಾರೆ. ಈ ಹಿಂದೆ ಕೆನಡಾದ ವ್ಯಕ್ತಿಯೊಬ್ಬರು ಹದಿನೇಳು ಚಮಚಗಳನ್ನು ಮೈಮೇಲೆ ನಿಲ್ಲಿಸಿಕೊಂಡು ಗಿನ್ನಿಸ್‌ ದಾಖಲೆ ಸೇರಿದ್ದರು.ಎಟಿಬಾರ್‌ ತಾನು ಅವರಿಗಿಂತ ಹೆಚ್ಚು ಎಂದರೆ ಇಪ್ಪತ್ತೇಳು ಚಮಚ ಇಟ್ಟುಕೊಳ್ಳುವ ಗುರಿ ಹೊಂದಿದ್ದರು. ಆದರೆ ತಾವು ಎಣಿಸಿದ್ದಕ್ಕಿಂತ ಹೆಚ್ಚು ಚಮಚಗಳನ್ನು ಬ್ಯಾಲೆನ್ಸ್‌ ಮಾಡುವ ಸಾಮರ್ಥ್ಯ ತಮಗಿದೆ ಎಂದು ತಿಳಿದಾಗ ಅವರಿಗೆ ಹೆಮ್ಮೆಯಾಗಿದೆ. ತಮ್ಮ ದೇಹದಲ್ಲಿ ಗುರುತ್ವಾಕರ್ಷಣಶಕ್ತಿಯಂತಹ ಆಕರ್ಷಣಶಕ್ತಿಯೊಂದು ಇರುವುದಾಗಿ ತಿಳಿದು ಅವರು ಸಂತಸಪಡುತ್ತಿದ್ದಾರೆ.    

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.