ವರ್ತುಲ ರಸ್ತೆಯಲ್ಲಿ ಬರಲಿದೆ ಮೆಟ್ರೊ

7
ಸಿಲ್ಕ್‌ ಬೋರ್ಡ್‌ – ಕೆ.ಆರ್‌.ಪುರ ಮಾರ್ಗದ ಯೋಜನಾ ವರದಿ ಪ್ರಕಟ

ವರ್ತುಲ ರಸ್ತೆಯಲ್ಲಿ ಬರಲಿದೆ ಮೆಟ್ರೊ

Published:
Updated:
ವರ್ತುಲ ರಸ್ತೆಯಲ್ಲಿ ಬರಲಿದೆ ಮೆಟ್ರೊ

ಬೆಂಗಳೂರು: ಸೆಂಟ್ರಲ್‌ ಸಿಲ್ಕ್‌ ಬೋರ್ಡ್‌ನಿಂದ ಕೆ.ಆರ್‌.ಪುರದವರೆಗೆ ಹೊರ ವರ್ತುಲ ರಸ್ತೆಯಲ್ಲಿ ನಿರ್ಮಾಣಕ್ಕೆ ಉದ್ದೇಶಿಸಿರುವ ಮೆಟ್ರೊ ಮಾರ್ಗದ ಕುರಿತು 267 ಪುಟಗಳ ವಿವರವಾದ ಯೋಜನಾ ವರದಿಯನ್ನು (ಡಿಪಿಆರ್‌) ಮೆಟ್ರೊ ರೈಲು ನಿಗಮದ ವೆಬ್‌ಸೈಟ್‌ನಲ್ಲಿ ಹಾಕಲಾಗಿದೆ.ಒಟ್ಟಾರೆ ₹ 4,203 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಮಾರ್ಗದಲ್ಲಿ 13 ನಿಲ್ದಾಣಗಳು ಇರಲಿವೆ. ಯೋಜನೆಗೆ ಬೇಕಾದ ಹಣದಲ್ಲಿ ₹ 1,100 ಕೋಟಿಯಷ್ಟು ಮೊತ್ತವನ್ನು ವಿನೂತನ ಹಣಕಾಸು ತಂತ್ರಗಳ ಮೂಲಕ ಶೇಖರಣೆ ಮಾಡಲು ಉದ್ದೇಶಿಸಲಾಗಿದೆ.ಸಾಧ್ಯವಾದಷ್ಟು ಕಡಿಮೆ ಪ್ರಮಾಣದಲ್ಲಿ ಭೂಸ್ವಾಧೀನ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, 2017ರಲ್ಲಿ ಯೋಜನೆಗೆ ಚಾಲನೆ ದೊರೆಯುವ ಸಾಧ್ಯತೆ ಇದೆ. 15,179 ಚದರ ಮೀಟರ್‌ ಭೂಸ್ವಾಧೀನ ಮಾಡಿಕೊಳ್ಳುವುದು ಈ ಯೋಜನೆಗೆ ಅಗತ್ಯವಾಗಿದೆ. ಅದರಲ್ಲಿ 5,911 ಚದರ ಮೀಟರ್‌ ಸರ್ಕಾರಿ ಭೂಮಿ ಸೇರಿದೆ. ಯೋಜನೆ ಅನುಷ್ಠಾನಕ್ಕಾಗಿ ಕತ್ತರಿಸಲು ಗುರುತಿಸಿರುವ ಮರಗಳು ಚಿಕ್ಕವಾಗಿವೆ ಎಂದು ಡಿಪಿಆರ್‌ನಲ್ಲಿ ವಿವರಿಸಲಾಗಿದೆ.‘ಕೆ.ಆರ್‌. ಪುರದಿಂದ ಹೆಬ್ಬಾಳದವರೆಗೆ ಮಾರ್ಗವನ್ನು ವಿಸ್ತರಣೆ ಮಾಡುವ ಉದ್ದೇಶವಿದೆ. ಇದರಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಸಾಧ್ಯವಿದೆ’ ಎಂದು ಡಿಪಿಆರ್‌ನಲ್ಲಿ ವಿವರಿಸಲಾಗಿದೆ.ಹೊರವರ್ತುಲ ರಸ್ತೆಗೆ ಹೊಂದಿಕೊಂಡ ಈ ಕಾರಿಡಾರ್‌ನಲ್ಲಿ ನಗರದ ಶೇ 32ರಷ್ಟು ವಾಣಿಜ್ಯ ಸಂಸ್ಥೆಗಳ ಕಚೇರಿಗಳಿದ್ದು, ಸುಮಾರು 8 ಲಕ್ಷ ಜನ ಉದ್ಯೋಗಿಗಳು ಅಲ್ಲಿ ಕೆಲಸ ಮಾಡುತ್ತಾರೆ. ಗಂಟೆಗೆ 18,750 ವಾಹನಗಳು ಈ   ರಸ್ತೆಯಲ್ಲಿ ಚಲಿಸುತ್ತವೆ.ಈ ಯೋಜನೆಗೆ ರಾಜ್ಯ ಸರ್ಕಾರ ₹ 500 ಕೋಟಿ ಸಹಾಯ ಧನ ನೀಡಲಿದ್ದು, ಮೆಟ್ರೊ ರೈಲು ನಿಗಮ ತನ್ನ ಒಡೆತನದ ಕೆಲ ಆಸ್ತಿಗಳನ್ನು ಗುತ್ತಿಗೆ ನೀಡಿ, ₹ 500 ಕೋಟಿ ಸಂಗ್ರಹಿಸುವ ಗುರಿ ಇಟ್ಟುಕೊಂಡಿದೆ. ₹ 1,100 ಕೋಟಿಯನ್ನು ವಿಭಿನ್ನ ಮಾರುಕಟ್ಟೆ ತಂತ್ರಗಳ ಮೂಲಕ ಶೇಖರಿಸಲು ಉದ್ದೇಶಿಸಲಾಗಿದೆ. ಮಿಕ್ಕ ₹ 2,100 ಕೋಟಿಯನ್ನು ಸಾಲದ ರೂಪದಲ್ಲಿ ಪಡೆಯಲು ನಿರ್ಧರಿಸಲಾಗಿದೆ.

13 ನಿಲ್ದಾಣಗಳು

ಸಿಲ್ಕ್‌ ಬೋರ್ಡ್‌, ಎಚ್‌ಎಸ್‌ಆರ್‌ ಲೇಔಟ್‌, ಅಗರ ಕೆರೆ, ಇಬ್ಬಲೂರು, ಬೆಳ್ಳಂದೂರು, ಕಾಡುಬೀಸನಹಳ್ಳಿ, ಕೋಡಿಬಸವನಹಳ್ಳಿ, ಮಾರತ್‌ಹಳ್ಳಿ, ಇಸ್ರೊ, ದೊಡ್ಡನೆಕ್ಕುಂದಿ, ಡಿಆರ್‌ಡಿಒ ಕ್ರೀಡಾ ಸಂಕೀರ್ಣ, ಮಹದೇವಪುರ, ಕೆ.ಆರ್‌.ಪುರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry