ಎನ್‌ಟಿಪಿಸಿ: ಎರಡನೇ ಘಟಕದ ಬಾಯ್ಲರ್ ಪರೀಕ್ಷೆ ಆರಂಭ

7

ಎನ್‌ಟಿಪಿಸಿ: ಎರಡನೇ ಘಟಕದ ಬಾಯ್ಲರ್ ಪರೀಕ್ಷೆ ಆರಂಭ

Published:
Updated:

ನಿಡಗುಂದಿ (ವಿಜಯಪುರ ಜಿಲ್ಲೆ):  ಕೂಡಗಿ ಉಷ್ಣ ವಿದ್ಯುತ್ ಸ್ಥಾವರದ ಎರಡನೇ ಘಟಕದ ಬಾಯ್ಲರ್‌ ಪರೀಕ್ಷೆ ಭಾನುವಾರ ಆರಂಭವಾಗಿದ್ದು, 45 ದಿನಗಳ ಕಾಲ ನಡೆಯಲಿದೆ.‘ಮೊದಲನೇ ಘಟಕದ ಪರೀಕ್ಷೆ 2015ರಲ್ಲಿಯೇ ನಡೆದಿತ್ತು. ಈ ಘಟಕ ಈ ವರ್ಷದ ಮಾರ್ಚ್‌ನಲ್ಲಿ ವಿದ್ಯುತ್‌ ಉತ್ಪಾದನೆ ಆರಂಭಿಸಬೇಕಿತ್ತು. ಆದರೆ ಜಾರ್ಖಂಡ್‌ನಿಂದ ಕಲ್ಲಿದ್ದಲು ಪೂರೈಕೆಗೆ ವಿಶೇಷ ರೈಲು ಮಾರ್ಗ ನಿರ್ಮಾಣ ಇನ್ನೂ ಪೂರ್ಣವಾಗಿಲ್ಲದ ಕಾರಣ ಕಲ್ಲಿದ್ದಲು ತರಿಸಿಕೊಳ್ಳಲು ಆಗಿಲ್ಲ.ಎರಡನೇ ಘಟಕದ ಬಾಯ್ಲರ್‌ ಪರೀಕ್ಷೆಯ ಬಳಿಕ ಎರಡೂ ಘಟಕಗಳು ಒಟ್ಟಿಗೇ   2017 ಮಾರ್ಚ್‌ನಲ್ಲಿ ವಿದ್ಯುತ್‌ ಉತ್ಪಾದನೆ ಆರಂಭಿಸುವ ಸಾಧ್ಯತೆ ಇದೆ’ ಎಂದು ಎನ್‌ಟಿಪಿಸಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ಸಿ. ಕುಮಾರ ಪ್ರಜಾವಾಣಿಗೆ ತಿಳಿಸಿದರು.ಬಾಯ್ಲರ್‌ ಪರೀಕ್ಷೆ ಸಂದರ್ಭದಲ್ಲಿ ಆಗಾಗ್ಗೆ ಭಾರಿ ಪ್ರಮಾಣದಲ್ಲಿ ಶಬ್ದ ಬರುತ್ತದೆ. ಸ್ಥಾವರದ ಸುತ್ತಮುತ್ತಲಿನ ಪ್ರದೇಶದ ಜನರು ಆತಂಕ ಪಡಬಾರದು ಎಂದು ಅವರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry