ಕೋಮಲಾಂಗಿಯನ್ನು ಅಪ್ಪಿದ ಆಕ್ಟೋಪಸ್‌

7
ಸುದ್ದಿ ಸ್ವಾರಸ್ಯ

ಕೋಮಲಾಂಗಿಯನ್ನು ಅಪ್ಪಿದ ಆಕ್ಟೋಪಸ್‌

Published:
Updated:
ಕೋಮಲಾಂಗಿಯನ್ನು ಅಪ್ಪಿದ ಆಕ್ಟೋಪಸ್‌

ಒಬ್ಬೊಬ್ಬರಿಗೆ ಒಂದೊಂದು ತೆರನಾದ ಫೋಟೊ ತೆಗೆದುಕೊಳ್ಳುವ ಆಸೆ. ಇನ್ನು ಮಾಡೆಲ್‌ಗಳಿಗೆ ಕೇಳಬೇಕೇ? ಅವರು ಕ್ಲಿಕ್‌ ಆಗಬೇಕು ಎಂದರೆ ಬೇರೆ ಬೇರೆ ಪೋಸ್‌ಗಳಲ್ಲಿ, ವಿಭಿನ್ನ ರೀತಿಯಲ್ಲಿ ಫೋಟೊ ತೆಗೆಸಿಕೊಳ್ಳುವುದು ಅನಿವಾರ್ಯ. ಅದು ಕೆಲವರನ್ನು ಹುಚ್ಚು ಸಾಹಸಕ್ಕೂ ಕೈ ಹಾಕುವಂತೆ ಮಾಡುತ್ತದೆ.

 

ಅಂಥದ್ದೇ ಒಂದು ಸಾಹಸ ಮಾಡಿ ದಾಖಲೆ ಮಾಡಿದ್ದಾರೆ ಜಪಾನಿನ ಮಾಡೆಲ್‌ ನಮಾಡಾ. ಈಕೆಗೆ ಆಕ್ಟೋಪಸ್‌ ಎಂದರೆ ಅದೇನೋ ತುಂಬಾ ಪ್ರೀತಿಯಂತೆ. ಅದಕ್ಕಾಗಿಯೇ ಆಕ್ಟೋಪಸ್‌ ಹುಡುಕಿ ಹೊರಟಳಾಕೆ. ಅದು ಸಿಕ್ಕ ತಕ್ಷಣ ಅದರ ಜೊತೆ ಸೆಲ್ಫಿ ತೆಗೆಸಿಕೊಳ್ಳೋಣ ಎಂದು ಮೊದಲು ಅಂದುಕೊಂಡಳಂತೆ. ಆಮೇಲೆ ಸೆಲ್ಫಿ ತೆಗೆದುಕೊಂಡರೆ ಅದರಲ್ಲೇನು ಮಜಾ ಎಂದುಕೊಂಡಳು. ಇದು ಎಲ್ಲರೂ ಸಾಮಾನ್ಯವಾಗಿ ಮಾಡುವ ಕೆಲಸವೇ, ತಾನೂ ಹಾಗೆ ಮಾಡಿದರೆ ಸುದ್ದಿ ಆಗುವುದಿಲ್ಲ ಎಂಬುದು ಆಕೆಗೆ ಚೆನ್ನಾಗಿ ಗೊತ್ತಿತ್ತು. 

 

ಆದ್ದರಿಂದ ಆಕೆ ಮಾಡಿದ ಯೋಚನೆ ಏನು ಗೊತ್ತೆ? ಆಕ್ಟೋಪಸ್‌ ಅನ್ನೇ ಮೈಮೇಲೆ ಸುತ್ತಿಕೊಂಡು ಫೋಟೊ ತೆಗೆಸಿಕೊಂಡರೆ ಹೇಗೆ ಎಂದುಕೊಂಡು ಹಾಗೇ ಮಾಡಿದಳು. ಈ ಚಿತ್ರವೇ ಅದಕ್ಕೆ ಸಾಕ್ಷಿ. ನೋಡಲು ಆಕ್ಟೋಪಸ್‌ ಹೋಲುವ ವಸ್ತ್ರವಿನ್ಯಾಸದಂತೆ ಈ ಚಿತ್ರ ಕಂಡರೂ ಇದರಲ್ಲಿ ಇರುವುದು ನಿಜವಾದ ಆಕ್ಟೋಪಸ್‌. ಬರೋಬರಿ 18 ಕೆ.ಜಿ. ತೂಕ ಇರುವ ದೈತ್ಯ ಪೆಸಿಫಿಕ್‌ ಆಕ್ಟೋಪಸ್‌ ಅನ್ನು ವಸ್ತ್ರದಂತೆ ಧರಿಸಿಕೊಂಡು ಈಕೆ ದಾಖಲೆ ಮಾಡಿದ್ದಾಳೆ. 

 

‘ಕೊನೆಗೂ ನನ್ನ ಬಾಲ್ಯದ ಕನಸು ನನಸಾಗಿದೆ. ಆಕ್ಟೋಪಸ್‌ ತುಂಬಾ ಭಾರ ಇತ್ತು. ಆದ್ದರಿಂದ ಅದನ್ನು ನನ್ನ ಕೋಮಲ ಶರೀರಕ್ಕೆ ಸುತ್ತಿಕೊಳ್ಳುವುದು ಅಷ್ಟು ಸುಲಭವಾಗಿರಲಿಲ್ಲ. ಅದನ್ನು ಸುತ್ತಿಕೊಳ್ಳಲು ಆರಂಭದಲ್ಲಿ ಭಯವಾಗಿತ್ತು. ಸುತ್ತಿಕೊಂಡ ಮೇಲೆ ಭಾರ ಎನಿಸಿದರೂ ನನ್ನ ಕನಸು ನನಸಾಗುತ್ತದೆ ಎನ್ನುವ ಕಾರಣಕ್ಕೆ ಈ ಭಾರ ಲೆಕ್ಕಕ್ಕೆ ಬರಲಿಲ್ಲ’ ಎಂದು ಪತ್ರಕರ್ತರಿಗೆ ತಿಳಿಸಿದಳು. 

 

ಈ ಕೊಮಲಾಂಗಿಯ ಶರೀರವನ್ನು ಸುತ್ತಿಕೊಳ್ಳುವ ‘ಭಾಗ್ಯ’ ಸಿಕ್ಕ ಆಕ್ಟೋಪಸ್‌ ‘ಫೋಟೊಶೂಟ್‌’ ನಂತರ ಏನಾಯಿತು ಗೊತ್ತಾ? ಆಗುವುದೇನು?  ಮಾಡೆಲ್‌, ಫೋಟೊಗ್ರಾಫರ್‌ ಸೇರಿದಂತೆ ಅಲ್ಲಿರುವವರಿಗೆ ಆಹಾರವಾಯಿತು!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry