₹ 15 ಸಾವಿರ ಕಳೆದುಕೊಂಡ ಮಹಿಳೆ ಹೃದಯಾಘಾತದಿಂದ ಸಾವು

7

₹ 15 ಸಾವಿರ ಕಳೆದುಕೊಂಡ ಮಹಿಳೆ ಹೃದಯಾಘಾತದಿಂದ ಸಾವು

Published:
Updated:
₹ 15 ಸಾವಿರ ಕಳೆದುಕೊಂಡ ಮಹಿಳೆ ಹೃದಯಾಘಾತದಿಂದ ಸಾವು

ಗುಡಿಬಂಡೆ:  ₹ 500 ಮತ್ತು ₹ 1 ಸಾವಿರ ಮುಖಬೆಲೆಯ ನೋಟುಗಳನ್ನು ತಮ್ಮ ಬ್ಯಾಂಕ್ ಖಾತೆಗೆ ಜಮಾ ಮಾಡಲು ಬಂದು   ಹಣ ಕಳೆದುಕೊಂಡಿದ್ದ ಚೆಂಡೂರು ಗ್ರಾಮದ ಮಹಿಳೆ ಜಂಗಾಲಪಲ್ಲಿ ಈಶ್ವರಮ್ಮ (43) ಸೋಮವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹಣ ಕಳೆದುಕೊಂಡ ಮಾನಸಿಕ ವೇದನೆಯೇ ಸಾವಿಗೆ ಕಾರಣ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.ಘಟನೆ ವಿವರ: ಈಶ್ವರಮ್ಮ ಅವರು ಆಶ್ರಯ ಯೋಜನೆಯ ಫಲಾನುಭವಿ. ಇತ್ತೀಚೆಗೆ ಯೋಜನೆಯ ಮೊದಲ ಕಂತಾಗಿ ₹ 15 ಸಾವಿರದ ಚೆಕ್ ನೀಡಲಾಗಿತ್ತು. ಚೆಕ್ ಡ್ರಾ ಮಾಡಿದ್ದ ಅವರು ಹಣವನ್ನು ಮನೆಯಲ್ಲಿ ಇಟ್ಟುಕೊಂಡಿದ್ದರು.  ₹ 500 ಮತ್ತು ₹ 1 ಸಾವಿರ ಮುಖ ಬೆಲೆಯ ನೋಟುಗಳು ಸ್ಥಗಿತವಾದ ಕಾರಣ ಅವುಗಳನ್ನು ಖಾತೆಗೆ ಜಮಾ ಮಾಡಲು ಶುಕ್ರವಾರ (ನ.11) ಪಟ್ಟಣದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ಗೆ ಬಂದಿದ್ದರು.ಹಣ ಜಮೆಗೆ ಚಲನ್ ಬರೆದುಕೊಡುವಂತೆ ಅಲ್ಲಿದ್ದವರಲ್ಲಿ ಒಬ್ಬರನ್ನು ಕೇಳಿದ್ದಾರೆ. ಈ ನಡುವೆಯೇ ಅವರು ಟೇಬಲ್ ಮೇಲೆ ಇಟ್ಟಿದ್ದ ಹಣದ ಗಂಟು ಕಾಣೆಯಾಗಿದೆ. ಇದರಿಂದ ನೊಂದ ಈಶ್ವರಮ್ಮ ತಮ್ಮ ಸ್ವಗ್ರಾಮಕ್ಕೆ  ಮರಳಿದ್ದರು.‘ಹಣವನ್ನು ಕಳೆದುಕೊಂಡಿದ್ದರಿಂದ ತೀವ್ರ ಮಾನಸಿಕ ವೇದನೆ ಅನುಭವಿಸುತ್ತಿದ್ದರು. 6 ತಿಂಗಳ ಹಿಂದೆ ಅವರ ಗುಡಿಸಲು ಬೆಂಕಿಗೆ ಆಹುತಿಯಾಗಿತ್ತು. ಈ ಎರಡೂ ಘಟನೆಗಳಿಂದ ನೊಂದಿದ್ದರು. ಇದರಿಂದ ಹೃದಯಾಘಾತವಾಗಿದೆ’ ಎನ್ನುವರು ಗ್ರಾಮಸ್ಥರು.‘ಹಣ ಕಳೆದುಕೊಂಡಿರುವ ಬಗ್ಗೆ ಲಿಖಿತ ಹಾಗೂ ಮೌಖಿಕ ದೂರು ಬಂದಿಲ್ಲ. ಬ್ಯಾಂಕಿನಲ್ಲಿ ಸಿಸಿ ಟಿವಿ ಕ್ಯಾಮೆರಾ ಇಲ್ಲ’ ಎಂದು ಬ್ಯಾಂಕಿನ ಅಧಿಕಾರಿಗಳು ಉತ್ತರಿಸುವರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry