ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಳಿವಿನತ್ತ 200ಕ್ಕೂ ಹೆಚ್ಚು ಪಕ್ಷಿಗಳು

Last Updated 15 ನವೆಂಬರ್ 2016, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರು ಪ್ರದೇಶಗಳಲ್ಲಿ 200ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳು ಅಳಿವಿನಂಚಿನಲ್ಲಿವೆ ಎಂದು ಅಧ್ಯಯನವೊಂದು ಹೇಳಿದೆ.

ಈ ಪಕ್ಷಿಗಳು ಅಂತರರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ (ಐಯುಸಿಎನ್‌) ಸಿದ್ಧಪಡಿಸಿರುವ ಅಳಿವಿನಂಚಿನಲ್ಲಿರುವ ಅಥವಾ ತೀವ್ರ ಅಪಾಯ ಎದುರಿಸುತ್ತಿರುವ ಪಕ್ಷಿ ಪ್ರಭೇದಗಳ ಪಟ್ಟಿಯಲ್ಲಿ ಇಲ್ಲ ಎಂದು ಅದು ಹೇಳಿದೆ. ಅಮೆರಿಕದ ಡ್ಯೂಕ್‌ ವಿಶ್ವವಿದ್ಯಾಲಯದ ತಜ್ಞರು ಈ ಅಧ್ಯಯನ ನಡೆಸಿದ್ದಾರೆ.

ಬ್ರೆಜಿಲ್‌ನ ಅಟ್ಲಾಂಟಿಕ್‌ ಅರಣ್ಯ, ಕೇಂದ್ರ ಅಮೆರಿಕ, ಕೊಲಂಬಿಯಾದ ಪಶ್ಚಿಮ ಬೆಟ್ಟಸಾಲುಗಳು, ಸುಮಾತ್ರಾ, ಮಡಗಾಸ್ಕರ್ ಮತ್ತು ಆಗ್ನೇಯ ಏಷ್ಯಾದಲ್ಲಿ ಬದಲಾಗುತ್ತಿರುವ ಭೂ ಪ್ರದೇಶ ಮತ್ತು ಇದರಿಂದಾಗಿ 600ಕ್ಕೂ ಹೆಚ್ಚು ಪಕ್ಷಿ ಪ್ರಭೇದಗಳ ಆವಾಸಸ್ಥಾನಗಳಿಗೆ ತೊಂದರೆಯಾಗುತ್ತಿರುವುದರ ಬಗ್ಗೆ ಅವರು ಅಧ್ಯಯನ ನಡೆಸಿದ್ದಾರೆ. ಇದಕ್ಕಾಗಿ ದೂರ ಸಂವೇದಿ ದತ್ತಾಂಶವನ್ನು ಅವರು ಬಳಸಿಕೊಂಡಿದ್ದಾರೆ.

ಒಟ್ಟು 600 ಪ್ರಭೇದಗಳ ಪೈಕಿ 108 ಪಕ್ಷಿಗಳು ಐಯುಸಿಎನ್‌ನ  ಅಳಿವಿನಂಚಿನಲ್ಲಿರುವ ಪಕ್ಷಿಗಳ ಪಟ್ಟಿಯಲ್ಲಿ  ಸ್ಥಾನ ಪಡೆದಿವೆ. ವಿಜ್ಞಾನಿಗಳು ಈ ಅಧ್ಯಯನದಲ್ಲಿ ಹೊಸದಾಗಿ 210 ಪಕ್ಷಿಗಳ ಸಂತತಿ ನಾಶವಾಗುವ ಸ್ಥಿತಿಗೆ ತಲುಪಿರುವುದನ್ನು ವಿಷ್ಲೇಶಿಸಿದ್ದಾರೆ. ಇವುಗಳಲ್ಲಿ 189 ಪಕ್ಷಿ ಪ್ರಭೇದಗಳನ್ನು ಅಪಾಯದ ಅಂಚಿನಲ್ಲಿವೆ ಎಂದು ವರ್ಗೀಕರಣ ಮಾಡಬೇಕು ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT