ನಾಳೆಯಿಂದ ನೋಟು ಬದಲಾವಣೆ ಮಿತಿ ₹4,500ರಿಂದ 2,000ಕ್ಕೆ ಇಳಿಕೆ

7
ರೈತರು ₹25 ಸಾವಿರ, ಕೃಷಿ ಉತ್ಪನ್ನ ವ್ಯಾಪಾರಿಗಳು ₹50 ಸಾವಿರ, ಮದುವೆಗೆ ₹2.5 ಲಕ್ಷ ಪಡೆಯಲು ಅವಕಾಶ

ನಾಳೆಯಿಂದ ನೋಟು ಬದಲಾವಣೆ ಮಿತಿ ₹4,500ರಿಂದ 2,000ಕ್ಕೆ ಇಳಿಕೆ

Published:
Updated:
ನಾಳೆಯಿಂದ ನೋಟು ಬದಲಾವಣೆ ಮಿತಿ ₹4,500ರಿಂದ 2,000ಕ್ಕೆ ಇಳಿಕೆ

ನವದೆಹಲಿ: ನೋಟು ಬದಲಾವಣೆ ಮಿತಿ ₹4,500ರಿಂದ 2,000ಕ್ಕೆ ಇಳಿಕೆ(ಶುಕ್ರವಾರದಿಂದ). ರೈತರು ಕೃಷಿಸಾಲ ಖಾತೆಯಿಂದ ₹25 ಸಾವಿರ ಪಡೆಯಬಹುದು. ಕೃಷಿ ಉತ್ಪನ್ನ ವ್ಯಾಪಾರಗಳಿಗೆ ₹ 50 ಸಾವಿರ ತೆಗೆಯಬಹುದು. ಮದುವೆಗೆ ₹2.5 ಲಕ್ಷ ವರೆಗಿನ ಮೊತ್ತವನ್ನು ಬ್ಯಾಂಕ್‌ ಖಾತೆಗಳಿಂದ ತೆಗೆದುಕೊಳ್ಳಲು ಅವಕಾಶ ಕಲ್ಪಿಸಿ ನಿಯಮಗಳಲ್ಲಿ ಮಾರ್ಪಾಡು ಮಾಡಿ ಕೇಂದ್ರ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

₹500, 1,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದಿರುವುದರಿಂದ ಉಂಟಾಗಿರುವ ಹಣಕಾಸು ವ್ಯವಹಾರಗಳ ತೊಂದರೆ ನಿವಾರಣೆಗೆ ಹಲವು ಬದಲಾವಣೆ ಮಾಡಿರುವ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಣಕಾಸು ಇಲಾಖೆ ಕಾರ್ಯದರ್ಶಿ ಶಶಿಕಾಂತ್‌ ದಾಸ್‌ ಅವರು, ಸಾಕಷ್ಟು ನಗದು ಲಭ್ಯವಿದೆ ಎಂದು ಹೇಳಿದರು.

ಹೊಸ ಬದಲಾವಣೆಗಳು; ಖಾತೆಯಿಂದ ಹಣ ತೆಗೆಯುವ ಮಿತಿ ಹೆಚ್ಚಳ

* ಚಲಾವಣೆಯಿಂದ ಹಿಂತೆಗೆದ ನೋಟು ಬದಲಾವಣೆಯ ಮಿತಿಯನ್ನು ನಾಳೆಯಿಂದ(ನ.18 ಶುಕ್ರವಾರ) ₹4,500ರಿಂದ 2,000ಕ್ಕೆ ಇಳಿಕೆ ಮಾಡಲಾಗಿದೆ.

* ರೈತರು ಕೃಷಿ ಸಾಲ ಖಾತೆ ಹಾಗೂ ಕಿಸಾನ್‌ ಕಾರ್ಡ್‌ ಬಳಸಿ ವಾರಕ್ಕೆ ₹ 25 ಸಾವಿರ ಪಡೆದುಕೊಳ್ಳಬಹುದು.

* ಕೃಷಿ ಮಾರುಕಟ್ಟೆ ವ್ಯಾಪಾರಿಗಳು ಪ್ರತಿ ವಾರಕ್ಕೆ ₹ 50 ಸಾವಿರವನ್ನು ತೆಗೆದುಕೊಳ್ಳಬಹುದು.

* ಕೃಷಿ ಸಾಲ ವಿಮೆ ಮೊತ್ತ ಪಾವತಿಗೆ 15 ದಿನಗಳ ಕಾಲಾವಕಾಶ ನೀಡಿ ವಿಸ್ತರಣೆ.

* ಮದುವೆ ಸಮಾರಂಭಕ್ಕೆ ₹2.5 ಲಕ್ಷವರೆಗೆ ಹಣ ತೆಗೆಯಲು ಅವಕಾಶ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry