ಅಂತರಿಕ್ಷದಿಂದ ಮರಳಿದ ಚೀನಾದ ಇಬ್ಬರು ಗಗನಯಾತ್ರಿಗಳು

7

ಅಂತರಿಕ್ಷದಿಂದ ಮರಳಿದ ಚೀನಾದ ಇಬ್ಬರು ಗಗನಯಾತ್ರಿಗಳು

Published:
Updated:

ಬೀಜಿಂಗ್‌ (ರಾಯಿಟರ್ಸ್‌): ಇಬ್ಬರು ಗಗನಯಾತ್ರಿಗಳನ್ನು ಹೊತ್ತು ಅಂತರಿಕ್ಷಕ್ಕೆ ಪ್ರಯಾಣ ಬೆಳೆಸಿದ್ದ ‘ಶೆಂಝೌ–11’ ಬಾಹ್ಯಾಕಾಶ ನೌಕೆ ಹಿಂತಿರುಗಿದ್ದು, ಶುಕ್ರವಾರ ಮಂಗೋಲಿಯಾದ ಉತ್ತರ ಭಾಗದಲ್ಲಿ ಸುರಕ್ಷಿತವಾಗಿ ಧರೆಗಿಳಿದಿದೆ ಎಂದು ಚೀನಾದ  ಸರ್ಕಾರಿ ಸ್ವಾಮ್ಯದ ಮಾಧ್ಯಮ ತಿಳಿಸಿದೆ.‘ಡಿವೈನ್‌ ವೆಸಲ್‌ (ದಿವ್ಯ ನೌಕೆ)’ ಹೆಸರಿನ ಈ ನೌಕೆ ಇಳಿಯುವ ಕ್ಷಣದ ಛಾಯಾಚಿತ್ರಗಳನ್ನು ಚೀನಾದ ಸುದ್ದಿ ವಾಹಿನಿ ಬಿತ್ತರಿಸಿದೆ.

ಮಧ್ಯಾಹ್ನ 2 ಗಂಟೆ ಸುಮಾರಿಗೆ ನೌಕೆ ಸುರಕ್ಷಿತವಾಗಿ ಧರೆಗಿಳಿದಿದೆ ಎಂದು ಕ್ಸಿನ್‌ಹುವಾ ಸುದ್ದಿಸಂಸ್ಥೆ ತಿಳಿಸಿದೆ. ಗಗನಯಾತ್ರಿಗಳಾದ ಜಿಂಗ್ ಹೈಪೆಂಗ್‌ ಮತ್ತು  ಚೆಂಗ್ ಡಾಂಗ್ ಅವರು ಟಿಯಾಂಗಾಂಗ್-2 ಬಾಹ್ಯಾಕಾಶ ಪ್ರಯೋಗಾಲಯದಲ್ಲಿ 30 ದಿನಗಳನ್ನು ಕಳೆದು ಮರಳಿದ್ದಾರೆ. 2022ರವೇಳೆಗೆ ಶಾಶ್ವತ ಬಾಹ್ಯಾಕಾಶ ನಿಲ್ದಾಣ ಹೊಂದುವ ಗುರಿಯನ್ನು ಚೀನಾ ಹೊಂದಿದ್ದು, ಅದಕ್ಕಾಗಿ ಟಿಯಾಂಗಾಂಗ್-2ರಲ್ಲಿ  ಪ್ರಯೋಗಗಳನ್ನು ಕೈಗೊಂಡಿದೆ.ಸುರಕ್ಷಿತವಾಗಿ ಧರೆಗಿಳಿದ ಗಗನಯಾತ್ರಿಗಳು ತಕ್ಷಣವೇ ನೌಕೆಯಿಂದ ಹೊರಬರಲಿಲ್ಲ ಎಂದು ಸುದ್ದಿ ಸಂಸ್ಥೆ ಹೇಳಿದೆ. ‘ಗಗನಯಾತ್ರಿಗಳು ಸುರಕ್ಷಿತವಾಗಿದ್ದಾರೆ’ ಎಂದು ಯೋಜನೆಯ ಕಮಾಂಡರ್‌ ಝಾಂಗ್‌ ಯೊಕ್ಷಿಯಾ ಹೇಳಿದ್ದಾರೆ.ಟಿಯಾಂಗಾಂಗ್‌–2 ಬಾಹ್ಯಾಕಾದಲ್ಲೇ ಇರಲಿದೆ. ಬರುವ ಏಪ್ರಿಲ್‌ನಲ್ಲಿ ಚೀನಾ ತನ್ನ ಪ್ರಥಮ ಸರಕು ಬಾಹ್ಯಾಕಾಶ ನೌಕೆ ‘ಟಿಯಾಂಝೌ–1’ ಅನ್ನು ಅಂತರಿಕ್ಷಕ್ಕೆ ಕಳುಹಿಸಲಿದೆ ಎಂದು ಸರ್ಕಾರಿ ಮಾಧ್ಯಮ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry