‘20 ಕೋಟಿ ಭಾರತೀಯರಿಗೆ ಅಧಿಕ ರಕ್ತದೊತ್ತಡ’

7

‘20 ಕೋಟಿ ಭಾರತೀಯರಿಗೆ ಅಧಿಕ ರಕ್ತದೊತ್ತಡ’

Published:
Updated:

ಲಂಡನ್‌ (ಪಿಟಿಐ): ಜಗತ್ತಿನಲ್ಲಿ 113 ಕೋಟಿ ಜನರು ಅಧಿಕ ರಕ್ತದೊತ್ತಡ ಹೊಂದಿದ್ದಾರೆ. ಅದರಲ್ಲಿ ಭಾರತದ 20 ಕೋಟಿ ವಯಸ್ಕರು ಸೇರಿದ್ದಾರೆ ಎಂದು ಲಂಡನ್‌ ಇಂಪೀರಿಯಲ್‌ ಕಾಲೇಜ್‌ನ ವಿಜ್ಞಾನಿಗಳು ನಡೆಸಿದ ಅಧ್ಯಯನದ ವರದಿ ಹೇಳಿದೆ.ಲಂಡನ್‌ನ ‘ದಿ ಲ್ಯಾನ್ಸೆಟ್‌ ಜರ್ನಲ್‌’ನಲ್ಲಿ ಈ ವರದಿಯ ವಿವರಗಳು ಪ್ರಕಟವಾಗಿವೆ. ಅಧಿಕ ರಕ್ತದೊತ್ತಡ ಹೊಂದಿರುವವರ ಸಂಖ್ಯೆ ಕಳೆದ  40 ವರ್ಷಗಳಲ್ಲಿ ಎರಡು ಪಟ್ಟು ಹೆಚ್ಚಿದೆ. 2015ರಲ್ಲಿ ಅಧಿಕ ರಕ್ತದೊತ್ತಡ ಹೊಂದಿರುವ ಜಗತ್ತಿನ ಅರ್ಧಕ್ಕಿಂತಲೂ ಹೆಚ್ಚು ವಯಸ್ಕರು ಏಷ್ಯಾದಲ್ಲಿ ವಾಸಿಸಿದ್ದರು ಹಾಗೂ ಈ ಸಮಸ್ಯೆ ಹೊಂದಿರುವ 26 ಕೋಟಿಯಷ್ಟು  ಜನರು ಚೀನಾದಲ್ಲಿದ್ದಾರೆ ಎಂದು ಈ ಅಧ್ಯಯನ ತಿಳಿಸಿದೆ.ರಕ್ತದೊತ್ತಡಕ್ಕೆ ಸಂಬಂಧಿಸಿದಂತೆ ಸಂಶೋಧಕರು 1975ರಿಂದ 2015ರವರೆಗೆ ಎಲ್ಲ ದೇಶಗಳಲ್ಲಾದ ಬದಲಾವಣೆಗಳನ್ನು ಅಭ್ಯಸಿಸಿದ್ದಾರೆ.

2015ರಲ್ಲಿ ಮಹಿಳೆಯರಿಗಿಂತ ಪುರುಷರು ಅಧಿಕ ಸಂಖ್ಯೆಯಲ್ಲಿ ಈ ಸಮಸ್ಯೆ ಹೊಂದಿದ್ದಾರೆ ಎಂದಿದೆ ಸಂಶೋಧನೆ. ಜಾಗತಿಕವಾಗಿ 59 ಕೋಟಿಗಿಂತಲೂ ಹೆಚ್ಚು  ಪುರುಷರು ಹಾಗೂ 52 ಕೋಟಿಗಿಂತಲೂ ಹೆಚ್ಚು ಮಹಿಳೆಯರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಲ್ಲಿ  ರಕ್ತದೊತ್ತಡ ಸಮಸ್ಯೆ ಕಡಿಮೆಯಾಗಿದೆ. ಆದರೆ ಅಭಿವೃದ್ಧಿ ಹೊಂದುತ್ತಿರುವ ಅಥವಾ ಜನರ ಆದಾಯ ಕಡಿಮೆಯಿರುವ  ರಾಷ್ಟ್ರಗಳಲ್ಲಿ   ಈ ಸಮಸ್ಯೆ ಹೆಚ್ಚಾಗಿದ್ದು,  ಪ್ರಮುಖವಾಗಿ ದಕ್ಷಿಣ ಏಷ್ಯಾ ಮತ್ತು ಆಫ್ರಿಕಾದಲ್ಲಿರುವ ದೇಶಗಳು ಇದರಲ್ಲಿ ಸೇರಿವೆ ಎನ್ನುತ್ತದೆ ಅಧ್ಯಯನ.‘1975ರಲ್ಲಿದ್ದ ನಂಬಿಕೆಯಂತೆ  ರಕ್ತದೊತ್ತಡ ಸಮಸ್ಯೆಯು ಶ್ರೀಮಂತಿಕೆಗೆ ಸಂಬಂಧಿಸಿಲ್ಲ, ಬದಲಿಗೆ ಬಡತನಕ್ಕೆ ಸಂಬಂಧಿಸಿದ ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ’ ಎಂದು ಇಂಪೀರಿಯಲ್‌ ಕಾಲೇಜಿನ ಅಧ್ಯಾಪಕ ಮಜಿದ್‌ ಎಜ್ಜತಿ ಹೇಳಿದ್ದಾರೆ. ಈ ಸಮಸ್ಯೆಗೆ ಸ್ಪಷ್ಟವಾದ ಕಾರಣಗಳು ಸಿಕ್ಕಿಲ್ಲ. ಆದರೆ ಇದು ಸಮಗ್ರವಾದ ಉತ್ತಮ ಆರೋಗ್ಯಕ್ಕೆ ತಳಕು ಹಾಕಿಕೊಂಡಿರಬಹುದು. ಜೊತೆಗೆ ಹಣ್ಣು ಮತ್ತು ತರಕಾರಿಗಳ ಸೇವನೆ ಹೆಚ್ಚಾಗಿರುವುದು ಇದಕ್ಕೆ ಕಾರಣವಿರಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry