ಮುತ್ತು ತಂತು ಮೃತ್ಯು!

7

ಮುತ್ತು ತಂತು ಮೃತ್ಯು!

Published:
Updated:
ಮುತ್ತು ತಂತು ಮೃತ್ಯು!

ಮುತ್ತು ಕೊಟ್ಟರೆ ಮತ್ತು ಬರುತ್ತದೆ ಎನ್ನುತ್ತಾರೆ ಹಲವರು. ಆದರೆ ಇಲ್ಲೊಬ್ಬ ಯುವಕನಿಗೆ ಪ್ರೇಯಸಿ ಕೊಟ್ಟ ಮುತ್ತೇ ಮುಳುವಾಗಿ ಮೃತ್ಯುವತ್ತ ಕೊಂಡೊಯ್ದಿದೆ. ಪ್ರಿಯಕರನ ಮೇಲೆ ಪ್ರೀತಿ ಉಕ್ಕಿದ ಪರಿಣಾಮ ಇಂಥದ್ದೊಂದು ಅವಘಡ ಸಂಭವಿಸಿದೆ.ಮೆಕ್ಸಿಕೋದ 18 ವರ್ಷದ ಜುಲಿಯೊ ಮ್ಯಾಷಿಯನ್, 24 ವರ್ಷದ ಪ್ರೇಯಸಿಯಿಂದಾಗಿ ‘ಮುತ್ತಿನ ಸಾವು’ ತಂದುಕೊಂಡಿದ್ದಾನೆ. ಇಬ್ಬರೂ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಆಗಾಗ್ಗೆ ಪಾರ್ಟಿಗಳನ್ನೂ ಮಾಡುತ್ತಿದ್ದರು, ಚೆನ್ನಾಗಿ ಕುಡಿದು ಕುಪ್ಪಳಿಸುತ್ತಿದ್ದರು, ಮುತ್ತಿನ ಮತ್ತಿನಲ್ಲಿ ತೇಲಾಡುತ್ತಿದ್ದರು.ಆದರೆ ಕಳೆದ ವಾರ ಜುಲಿಯೊನ ಅದೃಷ್ಟ ಕೈಕೊಟ್ಟಿತ್ತು. ಇಬ್ಬರೂ ತಡರಾತ್ರಿಯವರೆಗೂ ಪಾರ್ಟಿ ಮಾಡಿದ್ದರು. ಕುಡಿದ ಅಮಲಿನಲ್ಲಿದ್ದ ಯುವತಿಯ ಪ್ರೇಮ ಪರಾಕಾಷ್ಠೆ ತಲುಪಿತೋ ಗೊತ್ತಿಲ್ಲ.ಒಟ್ಟಿನಲ್ಲಿ ಪ್ರಿಯಕರನನ್ನು ಬಲವಾಗಿ ಅಪ್ಪಿಕೊಂಡು ಕುತ್ತಿಗೆಯ ಮೇಲೆ ಚುಂಬಿಸಿದಳು. ಚುಂಬನದ ಖುಷಿಯಲ್ಲಿಯೇ ಜುಲಿಯೊ ಮನೆಗೆ ಹೋಗಿದ್ದಾನೆ. ಸ್ವಲ್ಪ ಹೊತ್ತಿನಲ್ಲಿಯೇ ಆಕೆ ಚುಂಬಿಸಿದ ಜಾಗದ ರಕ್ತ ಹೆಪ್ಪುಗಟ್ಟಲು ಶುರುವಾಗಿದೆ. ಉಸಿರಾಟದ ತೊಂದರೆಯಾಗಿ ಸ್ಥಳದಲ್ಲಿಯೇ ಜುಲಿಯೊ ಸಾವನ್ನಪ್ಪಿದ. ಸುದ್ದಿ ತಿಳಿದ ತಕ್ಷಣ ಪ್ರೇಯಸಿ ಪರಾರಿಯಾಗಿದ್ದಾಳಂತೆ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry