ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯೂಬಾ ಜನನಾಯಕ ಫಿಡೆಲ್‌ ಕ್ಯಾಸ್ಟ್ರೊ ನಿಧನ

Last Updated 26 ನವೆಂಬರ್ 2016, 9:42 IST
ಅಕ್ಷರ ಗಾತ್ರ

ಹವಾನಾ: ಕ್ಯೂಬಾದ ಮಾಜಿ ಅಧ್ಯಕ್ಷ ಫಿಡೆಲ್‌ ಕ್ಯಾಸ್ಟ್ರೊ (90) ಶನಿವಾರ ನಿಧನರಾದರು. ಮಾರ್ಕ್ಸ್‌ವಾದಿ ಹೋರಾಟಗಾರರಾದ ಚೆ ಗುವೆರಾ ಹಾಗೂ ಫಿಡೆಲ್‌ ಕ್ಯಾಸ್ಟ್ರೊ 1959ರ ಕ್ಯೂಬಾ ಕ್ರಾಂತಿಯಲ್ಲಿ ಮುಖ್ಯ ಪಾತ್ರ ವಹಿಸಿದ್ದರು.

ಕಾಸ್ಟ್ರೊ ಸುಮಾರು ಅರ್ಧ ಶತಮಾನದಷ್ಟು ದೀರ್ಘಕಾಲ ಕ್ಯೂಬಾದಲ್ಲಿ ಆಡಳಿತ ನಡೆಸಿದ್ದರು. 1959ರಿಂದ 1976ರವರೆಗೆ ಪ್ರಧಾನಮಂತ್ರಿಯಾಗಿ, 1976ರಿಂದ 2008ರವರೆಗೆ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ದರು.

ಅನಾರೋಗ್ಯದ ಕಾರಣದಿಂದ 2008ರಲ್ಲಿ ಕ್ಯೂಬಾ ಅಧ್ಯಕ್ಷ ಹುದ್ದೆ ತೊರೆದು, ಸಕ್ರಿಯ ರಾಜಕೀಯಕ್ಕೆ ವಿದಾಯ ಘೋಷಿಸಿ ತಮ್ಮ ಸೋದರ ರೌಲ್‌ ಕ್ಯಾಸ್ಟ್ರೊಗೆ ಅಧಿಕಾರ ಚುಕ್ಕಾಣಿ ಹಸ್ತಾಂತರಿಸಿದ್ದರು.

ಕ್ಯಾಸ್ಟ್ರೊ ಈ ವರ್ಷದ ಆಗಸ್ಟ್ 13ರಂದು ತಮ್ಮ 90ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು.

ದೊಡ್ಡಣ್ಣನ ದರ್ಪಕ್ಕೆ ಪೆಟ್ಟುಕೊಟ್ಟ ಗಟ್ಟಿಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT