ನಭ ಜೈಲಿಗೆ ನುಗ್ಗಿದ ಬಂದೂಕುಧಾರಿಗಳು: ಕೆಎಲ್‌ಎಫ್ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಸೇರಿ 5 ಮಂದಿ ಪರಾರಿ

ನಭ: ಪಂಜಾಬ್‌ನ ನಭ ಜೈಲಿಗೆ ಭಾನುವಾರ ಬೆಳಿಗ್ಗೆ ನುಗ್ಗಿದ 10ಕ್ಕೂ ಹೆಚ್ಚು ಮಂದಿ ಬಂದೂಕುಧಾರಿಗಳು ಖಲಿಸ್ತಾನ್ ಲಿಬರೇಷನ್ ಫೋರ್ಸ್‌ನ (ಕೆಎಲ್‌ಎಫ್) ಮುಖ್ಯಸ್ಥ ಹರ್ಮಿಂದರ್ ಸಿಂಗ್ ಅಲಿಯಾಸ್ ಮಿಂಟೂ ಸೇರಿದಂತೆ ಆರು ಮಂದಿಯನ್ನು ಬಿಡಿಸಿಕೊಂಡು ಪರಾರಿಯಾಗಿದ್ದಾರೆ.
ಪೊಲೀಸರ ಉಡುಪಿನಲ್ಲಿದ್ದ 10ಕ್ಕೂ ಹೆಚ್ಚು ಮಂದಿ ಬಂದೂಕುಧಾರಿಗಳು ಜೈಲಿಗೆ ನುಗ್ಗಿ ಸುಮಾರು 200 ಸುತ್ತು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
ಸಿಖ್ ದಂಗೆ ಹಾಗೂ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಹರ್ಮಿಂದರ್ ಸಿಂಗ್‌ನನ್ನು 2014ರಲ್ಲಿ ಬಂಧಿಸಲಾಗಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.